ಬೆಂಗಳೂರು: ರಾಮಾಯಣ ಸಿನಿಮಾ ಪೋಸ್ಟರ್ಗಳ ಮೂಲಕವೇ ಈಗಾಗಲೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿರುವ ಚಿತ್ರ ಇದಾಗಿದ್ದು, ಈ ಸಿನಿಮಾದಲ್ಲಿ ಬಹುದೊಡ್ಡ ತಾರಾಗಣವೇ ಇದ್ದು, ರಾಕಿಂಗ್ ಸ್ಟಾರ್ ಯ,ಶ್ ರಣಧೀರ್ ಕಪೂರ್, ಸಾಯಿ ಪಲ್ಲವಿ ಸೇರಿದಂತೆ ಹಲವಾರು ಮಹಾನ್ ಕಲಾವಿದರು ಈ ಚಿತ್ರದಲ್ಲಿ ನಟನೆ ಮಾಡುತ್ತಿದ್ದಾರೆ.
ಇನ್ನು ರಾಮಾಯಣ ಚಿತ್ರವು ಭಾರತದ ಇತಿಹಾಸದಲ್ಲಿ ಬಹು ದೊಡ್ಡ ಬಜೆಟ್ ನ ಸಿನಿಮಾ ವಾಗಿದ್ದು ಈಗಾಗಲೇ ಚಿತ್ರತಂಡವು ಸಿನಿಮಾ ಬಜೆಟ್ ಬಗ್ಗೆ ತಿಳಿಸಿದ್ದು ಸುಮಾರು 4000 ಕೋಟಿ ರೂ. ಬಜೆಟ್ ನಲ್ಲಿ ರಾಮಾಯಣ ಸಿನಿಮಾ ನಿರ್ಮಿಸಲಾಗುತ್ತಿದೆ ಎಂದು ಚಿತ್ರತಂಡ ತಿಳಿಸಿದೆ.
ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಜೊತೆಗೆ ರಣಬೀರ್ ಕಪೂರ್ ಶ್ರೀ ರಾಮನಾಗಿ ಮತ್ತು ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು 2 ಭಾಗಗಳಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗಿದ್ದು, 2026 ಮತ್ತು 2027ರಲ್ಲಿ 20ಕ್ಕೂ ಹೆಚ್ಚು ಭಾಷೆಗಳಲ್ಲಿ ತೆರೆಗೆ ಬರಲಿದೆ. ‘ರಾಮಾಯಣ’ ಚಿತ್ರವು ಕೇವಲ ಭಾರತೀಯ ಸಂಸ್ಕೃತಿಯ ಶ್ರೀಮಂತ ಇತಿಹಾಸವನ್ನು ತೆರೆಯ ಮೇಲೆ ತರುವುದಷ್ಟೇ ಅಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರ್ವೆಲ್ನಂತಹ ದೈತ್ಯ ಚಿತ್ರಗಳಿಗೆ ಸಮನಾದ ದೃಶ್ಯ ವೈಭವವನ್ನು ನೀಡುವ ಗುರಿಯನ್ನು ಹೊಂದಿದೆ.
ಇನ್ನು ಯಶ್ ತಮ್ಮ ಸಂಭಾವನೆಯನ್ನು ತೆಗೆದುಕೊಳ್ಳದೆ, ಚಿತ್ರದಲ್ಲಿ 100-150 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದ್ದು, ಇದರ ಮೂಲಕ ಅವರು ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿಯೂ ಕಾಣಿಸಿಕೊಂಡಿದ್ದಾರೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ನೇತೃತ್ವದಲ್ಲಿ ಈ ಚಿತ್ರವು ಜಾಗತಿಕ ಸಿನಿಮಾ ರಂಗದಲ್ಲಿ ಭಾರತೀಯ ಕಥಾನಕದ ಶಕ್ತಿಯನ್ನು ಪ್ರದರ್ಶಿಸಲಿದೆ. “ಇದೊಂದು ಭಾರತೀಯ ಸಂಸ್ಕೃತಿಯ ಆತ್ಮವನ್ನು ಜಗತ್ತಿಗೆ ತೋರಿಸುವ ಚಿತ್ರವಾಗಲಿದೆ,” ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.
