ಶುಭಾಂಶು ಶುಕ್ಲಾ ಸೇರಿದಂತೆ ನಾಲ್ಕು ಜನ ಗಗನಯಾತ್ರಿಗಳು ಜೂನ್ 25ರಂದು ಬಾಹ್ಯಾಕಾಶಕ್ಕೆ ಹಾರಿದ್ದ ಅವರು ಸುರಕ್ಷಿತವಾಗಿ ಭೂಮಿಗೆ ವಾಪಸ್ ಆಗಿದ್ದಾರೆ. ಇಂದು (ಮಂಗಳವಾರ ಜುಲೈ 15) ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಕ್ಯಾಲಿಫೋರ್ನಿಯಾದ ಕರಾವಳಿಗೆ ಸ್ಪ್ಲ್ಯಾಶ್ಡೌನ್ ಆಗಿದ್ದಾರೆ.
ಶುಭಾಂಶು ಶುಕ್ಲಾ, ಅಮೆರಿಕದ ಪೆಗ್ಗಿ ವಿಟ್ಸನ್, ಪೋಲೆಂಡ್ನ ಉಜಾಂನ್ಸಿ, ಹಂಗೇರಿಯ ಟಿಬೊರ್ ಕಾಪುಗೆ ಅವರು ಆಕ್ಸಿಯೋಂ-4 ಮಿಷನ್ ಭಾಗವಾಗಿ ಐಎಸ್ಎಸ್ ತೆರಳಿದ್ದರು. ಜೂನ್ 25ರ ಬುಧವಾರ ಅಂತರಿಕ್ಷಯಾನ ಹೊರಟಿದ್ದ ಯಾತ್ರಿಗಳು, 26ರಂದು ಬಾಹ್ಯಾಕಾಶ ನಿಲ್ದಾಣ ತಲುಪಿದ್ದರು. ಇದನ್ನೂ ಓದಿ: ಸಿಎಂ ಮಾಧ್ಯಮ ಸಲಹೆಗಾರ ಅವರಿಗೆ ಸನ್ಮಾನ
ಭೂಮಿಯ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಲು ಅನುವಾಗುವಂತೆ 7 ದಿನಗಳ ಪುನಶ್ಚತನಕ್ಕೆ ಒಳಪಡಲಿದ್ದಾರೆ. ಒಟ್ಟಾರೆ ಬಾಹ್ಯಾಕಾಶ ಚರಿತ್ರೆಯಲ್ಲಿ ಭಾರತದ ಹೊಸ ಮೈಲಿಗಲ್ಲು ಸ್ಥಾಪಿಸಿ ಆಗಿದೆ. ಆಗಸದಲ್ಲಿ ಶುಭಾರಂಭ ಅಂತರಿಕ್ಷ ಯಾನ ಅಂತ್ಯವಾಗಿದೆ. ಗಗನದಿಂದ ಭಾರತವನ್ನು ಸಾರೆ ಜಹಾಂಸೆ ಅಚ್ಛಾ ಅಂತ ಶುಕ್ಲಾ ಬಣ್ಣಿಸಿದ್ದರು.
