Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಿಂದ ದುವರ್ತನೆ
  • Crime
  • State

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಿಂದ ದುವರ್ತನೆ

admin July 12, 2025
Spread the love

ಬೆಂಗಳೂರು: ಇಂದಿನ ಕಾಲದಲ್ಲಿ ಕಲಾವಿದರು ತಮ್ಮ ಬದುಕು ಹಾಗೂ ಜೀವನವನ್ನು ಕಟ್ಟಿಕೊಳ್ಳುವುದು ಬಹಳ ದೊಡ್ಡ ಕಷ್ಟಕರ ಸಂಗತಿಯಾಗಿದೆ. ಯಾವುದೇ ಒಂದು ಚಿಕ್ಕಪುಟ್ಟ ಅವಕಾಶ ಸಿಕ್ಕರೆ ಅದನ್ನೇ ಉಪಯೋಗಿಸಿಕೊಂಡು ಅದರಿಂದ ಬಂದ ಹಣದಿಂದ ತಮ್ಮ ಜೀವನವನ್ನು ಸಾಗಿಸುತ್ತಾರೆ.

ಇಂಥ ಬಡ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಿಂದ ಹಲ್ಲೆಗೆ ಪ್ರಯತ್ನವಾಗಿದೆ ಎಂದು ತಿಳಿದುಬಂದಿದೆ.

ಹೌದು, ಜಾನಪದ ಕಲಾವಿದ ಜೋಗಿಲ ಸಿದ್ದರಾಜು ಅವರ ಮೇಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಹಲ್ಲೆಗೆ ಯತ್ನ ನಡೆಸಿರುವ ಘಟನೆ ನಿನ್ನೆ (ಶುಕ್ರವಾರ ಜುಲೈ 11) ರಂದು ನಡೆದಿದ್ದು ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

ಜಾನಪದ ಗಾಯಕ ಜೋಗಿಲ ಸಿದ್ದರಾಜು ಮತ್ತವರ ಒಡನಾಡಿ ನಾಗೇಶ್ ಎಂಬುವವರು ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ. ಗಾಯತ್ರಿ ಅವರಿಗೆ ಅಹವಾಲು ಸಲ್ಲಿಸಲು ತೆರಳಿದ್ದಾಗ ಈ ಹಲ್ಲೆಯತ್ನ ನಡೆಯಿತೆನ್ನಲಾಗಿದೆ.

ರಾಜ್ಯ ವ್ಯಾಪಿಯ ಜನಪದ ಕಲಾವಿದರಿಗೆ 3 ವರ್ಷಗಳಿಂದ ಬಾಕಿ ಉಳಿದಿರುವ ಪ್ರಾಯೋಜನೆಯ ಹಣವನ್ನು ಬಿಡುಗಡೆ ಮಾಡಬೇಕೆಂದು ಕೋರಲು ಜೋಗಿಲ ಸಿದ್ದರಾಜು ಮತ್ತವರ ಗೆಳೆಯ ನಿರ್ದೇಶಕರ ಕೊಠಡಿಗೆ ಹೋಗಿದ್ದ ವೇಳೆ ನಿರ್ದೇಶಕರು ಸಿಟ್ಟಿನಿಂದ ಮಾತನಾಡಿದರೆನ್ನಲಾಗಿದೆ. `ನಿಮ್ಮನ್ನು ಕೇಳಿ ಅಧಿಕಾರ ಮಾಡಬೇಕೆ? ನನಗೆ ಗೊತ್ತಿಗೆ ಹೋಗಿ ಎಂದಿದ್ದಲ್ಲದೆ, ಗೆಟ್‌ಔಟ್ ಎಂದು ಗದರಿದರೆಂದು ಜೋಗಿಲ ಸಿದ್ದರಾಜು ತಿಳಿಸಿದ್ದಾರೆ.

ನಿರ್ದೇಶಕರ ಈ ವರ್ತನೆಯನ್ನು ಖಂಡಿಸಿ ಜೋಗಿಲ ಸಿದ್ದರಾಜು ಅವರು ಪ್ರಶ್ನಿಸಿದಾಗ ಸಿಟ್ಟಿಗೆದ್ದ ನಿರ್ದೇಶಕರು ಕಂಪ್ಯೂಟರ್ ಮೌಸ್ ಅನ್ನು ಕಿತ್ತು ಎಸೆದು ತಮ್ಮ ಮೇಲೆ ಹಲ್ಲೆಗೆ ಯತ್ನಿಸಿದ್ದಲ್ಲದೆ, ಅವಾಚ್ಯ ಶಬ್ಧಗಳಿಂದ ನಿಂದಿಸಿದರೆಂದು ಸಿದ್ದರಾಜು  ತಿಳಿಸಿದ್ದಾರೆ.

ನಿರ್ದೇಶಕಿ ಕೆ.ಎಂ. ಗಾಯತ್ರಿ ಅವರ ವರ್ತನೆಯ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದ್ದಂತೆಯೇ ಕಲಾವಿದರ ಸಮೂಹ ಕನ್ನಡ ಭವನಕ್ಕೆ ದಾಂಗುಡಿಯಿಟ್ಟು ಪ್ರತಿಭಟಿಸಿದ ಬೆನ್ನಿಗೇ ಸ್ಥಳಕ್ಕೆ ಆಗಮಿಸಿದ ಜೆ.ಪಿ.ಪೊಲೀಸರು ಪರಿಸ್ಥಿತಿ ತಹಬದಿಗೆ ತಂದರೆಂದು ವರದಿಯಾಗಿದೆ. ಇದನ್ನೂ ಓದಿ: ಕಾಲ್ತುಳಿತ ದುರಂತ: ವರದಿ ಸಲ್ಲಿಸಿದ ಆಯೋಗ

ಆನಂತರ ಜೋಗಿಲ ಸಿದ್ದರಾಜು ಅವರು ಜೆ.ಪಿ. ಪಾರ್ಕ್ ಪೊಲೀಸ್ ಠಾಣೆಗೆ ತೆರಳಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರ ವಿರುದ್ಧ ದೂರು ನೀಡಿದ್ದಾರೆ.

ವ್ಯಾಪಕ ಆಕ್ರೋಶ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರ ವರ್ತನೆ ವಿರುದ್ಧ ಇದೀಗ ಕಲಾವಿದರ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು ಸೋಮವಾರ ನಿರ್ದೇಶಕರ ಅಮಾನತ್ತಿಗೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರಿಗೆ ಮನವಿ ಪತ್ರ ನೀಡಲು ನಿರ್ಧರಿಸಲಾಗಿದೆ.

ಬಡಕಲಾವಿದರಿಗೆ ಬರಬೇಕಾದ ಹಣವನ್ನು ಕೇಳಲು ಹೋದಾಗ ಈ ಹಲ್ಲೆಯತ್ನ ನಡೆಯಿತು. ಕೂಡಲೇ ನಿರ್ದೇಶಕರನ್ನು ಅಮಾನತ್ತಿನಲ್ಲಿಡಬೇಕು, ಕಲಾವಿದರಿಗೆ ನ್ಯಾಯ ಒದಗಿಸಬೇಕು ಎಂದು ಜೋಗಿಲ ಸಿದ್ದರಾಜು, ಹಲ್ಲೆಗೊಳಗಾದ ಕಲಾವಿದ ಹೇಳಿದರು.

About the Author

admin

Administrator

Visit Website View All Posts

Spread the love

Post navigation

Previous: ಕಾಲ್ತುಳಿತ ದುರಂತ: ವರದಿ ಸಲ್ಲಿಸಿದ ಆಯೋಗ
Next: 63ನೇ ವಸಂತಕ್ಕೆ ಕಾಲಿಟ್ಟ ಶಿವಣ್ಣ

Views:

46

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.