ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ವಿಪರೀತವಾಗಿ ಹಾರ್ಟ್ ಅಟ್ಯಾಕ್ ಆಗುವ ಮೂಲಕ ಸಾವನ್ನಪ್ಪುತ್ತಿರುವ ಪ್ರಕರಣಕ್ಕೆ ಮೂಲ ಕಾರಣವೇನೆಂದು ಇಲ್ಲಿಯವರೆಗೂ ತಿಳಿದುಬಂದಿಲ್ಲ. ಆದರೆ ಕೆಲವರು ಹೇಳುವ ಪ್ರಕಾರ ಕೋವಿಡ್ ಸಂದರ್ಭದಲ್ಲಿ ಕೋವಿಡ್ ಲಸಿಕೆ ಪಡೆದವರಿಗೆ ಹಾರ್ಟ್ ಅಟ್ಯಾಕ್ ನೇರ ಕಾರಣ ಎಂದು ಹೇಳುತ್ತಿದ್ದಾರೆ. ಅದರಲ್ಲೂ ಕೂಡ ಹಾಸನ ಜಿಲ್ಲೆಯಲ್ಲಿ ದಿನಕಳದಂತೆ ಹಾರ್ಟ್ ಅಟ್ಯಾಕ್ ಆಗಿ ಸಾಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಈ ಹಾರ್ಟ್ ಅಟ್ಯಾಕ್ ಯಾಕೆ ಸಂಭವಿಸುತ್ತಿದೆ ಎಂಬುದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕೆಂದು ತೀರ್ಮಾನಿಸಿ ಈಗಾಗಲೇ ಈ ಕುರಿತು ಸಮೀಕ್ಷೆ ನಡೆಸಿ ಮಾಹಿತಿ ಕಲೆಹಾಕಿದೆ. ಕೊರೋನಾ ಸಂದರ್ಭದಲ್ಲಿ ಲಸಿಕೆಯನ್ನು ಪಡೆದವರಿಗೆ ಹಾರ್ಟ್ ಅಟ್ಯಾಕ್ ಆಗುತ್ತಿದೆ ಎಂಬುವುದು ತಪ್ಪು ಮಾಹಿತಿ ಎಂದು ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೋವಿಡ್ ಲಸಿಕೆ ಹೃದಯಾಘಾತಕ್ಕೆ ನೇರ ಕಾರಣ ಅಲ್ಲ. ಮಧುಮೇಹ, ಕೊಬ್ಬು ಸೇರಿದಂತೆ ಅನೇಕ ಅಡ್ಡ ಪರಿಣಾಮಗಳು ಹೃದಯಾಘಾತಕ್ಕೆ ಕಾರಣ ಆಗಿವೆ. ರಕ್ತದೊತ್ತಡ, ಶುಗರ್, ದಪ್ಪ ಆಗಿರೋದು, ದೈಹಿಕ ಚಟುವಟಿಕೆ ಇಲ್ಲದೇ ಇರೋದು. ಹೃದಯಾಘಾತ ಹೆಚ್ಚಾಗೋದಕ್ಕೆ ಕಾರಣ ಆಗಿದೆ. ಜನರ ಜೀವನ ಶೈಲಿ ಕೂಡ ಹೃದಯಾಘಾತಕ್ಕೆ ಕಾರಣ ಆಗಿದೆ. ಕೊವಿಡ್ ಲಸಿಕೆಯಿಂದ ನೇರವಾಗಿ ಕಾರಣ ಅಲ್ಲ ಎಂದು ಹೇಳಿದ್ದಾರೆ.
ಕೋವಿಡ್ ಬಂದು ಹೋದವರಲ್ಲೇ ಹೆಚ್ಚು ಹೃದಯಾಘಾತ
ಹೃದಯಾಘಾತ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಕೆಲವು ತಿಂಗಳ ಹಿಂದೆ ಸಿಎಂ ಅವರು ತನಿಖೆಗೆ ಸೂಚಿಸಿದ್ರು. ತಜ್ಞರ ಸಮಿತಿ ಮಾಡಿ ವರದಿಗೆ ಆದೇಶ ಮಾಡಿದ್ರು. ಕೊವಿಡ್ ಅಥವಾ ಕೊವಿಡ್ ಲಸಿಕೆ ಅಡ್ಡ ಪರಿಣಾಮಗಳು ಏನು? ಸಾವು ಹೇಗೆ ಅಂತಾ ತನಿಖೆ ಮಾಡೋಕೆ ಹೇಳಿದ್ರು. ಮುಖ್ಯ ಕಾರ್ಯದರ್ಶಿ ಸಮಿತಿ ರಚನೆ ಮಾಡಿ ಜಯದೇವ ನಿರ್ದೇಶಕರು ಸೇರಿದಂತೆ ಹಲವು ತಜ್ಞರು ಇದ್ದರು. ಅದರಂತೆ ವಿಶ್ವ ಮಟ್ಟದಲ್ಲಿ ಏನು ತನಿಖೆ ಆಗಿದೆ ಎಂಬುದನ್ನು ವಿಶ್ಲೇಷಣೆ ಮಾಡಲಾಗಿದೆ ಜೊತೆಗೆ ಜಯದೇವ ಆಸ್ಫತ್ರೆಯಲ್ಲೂ ತನಿಖೆ ಮಾಡಿದ್ದಾರೆ. ಈ ವರದಿಯಲ್ಲಿ ಕೊವಿಡ್ ಯಾರಿಗೆ ಆಗಿತ್ತು ಅವರಿಗೆ ಹೃದಯಾಘಾತ ಹೆಚ್ಚಾಗಿ ಆಗಿರೋದು ಅನ್ನೋದು ಕಂಡುಬಂದಿದೆ. ಕೊವಿಡ್ ಬಂದವರಿಗೆ ಹೃದಯಾಘಾತ ಆಗಿರೋದು ವರದಿ ಬಹಿರಂಗ ಆಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆಯೋಗದಿಂದ ಶೀಘ್ರದಲ್ಲೇ ಪರಿಶಿಷ್ಟ ಜಾತಿ ಸಮೀಕ್ಷಾ ವರದಿ ಸಲ್ಲಿಕೆ!
ಹಠಾತ್ ಮರಣಗಳ ತಡೆಗೆ ಸಲಹೆ ನೀಡಿದೆ, 45 ವರ್ಷದ ಒಳಗಿರೋರು ದಿಢೀರ್ ಸಾವು ಆಗ್ತಾ ಇದ್ದು, ಅದರ ತಡೆಗೂ ಹೆಚ್ಚು ಗಮನ ಕೊಡಿ ಅಂತ ಸಮಿತಿ ಹೇಳಿದೆ. ಅದರಂತೆ ಕೆಲವೊಂದು ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.
