ಶಹಾಪುರ: ಪ್ರತಿ ವರ್ಷದಂತೆ ಈ ವರ್ಷವು ಮೋಹರಂ ಹಬ್ಬವು ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಸಂಭ್ರಮದಿಂದ ಆಚರಿಸಿದರು. ಭಾವೈಕ್ಯತೆಗೆ ಸಾಕ್ಷಿ, ಆಲಾಯಿ ದೇವರಿಗೆ ಹಾಕಿದ ಹಾರಗಳು, ನೃತ್ಯ ಗಮನ ಸೆಳೆದವು. ಹಿಂದೂ ಮುಸ್ಲಿಂ ಭಾವೈಕ್ಯೆಯ ಪ್ರತೀಕವಾದ ಮೊಹರಂ ಹಬ್ಬದ ಸಂಭ್ರಮ ತಾಲೂಕಿನೆಲ್ಲೇಡೆ ಮನೆ ಮಾಡಿತ್ತು.
ನಗರದಲ್ಲಿ ಲಾಲ್ ಸಾಬ್ ಮತ್ತು ಹುಸೇನ್ ಸಾಬ್ ಅವರ ತ್ಯಾಗ ಬಲಿದಾನದ ಪ್ರತೀಕವಾಗಿ ಆಚರಿಸುವ ಮೊಹರಂ ಹಬ್ಬವನ್ನು ಶರಣರ ನಾಡಿನಲ್ಲಿ ಹಿಂದೂ ಮುಸ್ಲಿಂ ಸಮುದಾಯ ಸಾಮರಸ್ಯದಿಂದ ಆಚರಿಸುವುದು ವಾಡಿಕೆ.
ಸುಮಾರು 9 ದಿನಗಳ ವರೆಗೂ ವಿಭೀನ್ನವಾದ ಆಚರಣೆ ಇರುತ್ತದೆ. ಅದರಲ್ಲಿ ಆಲಯಿ ಕುಣಿತ ಜನರನ್ನು ಗಮನ ಸೆಳೆಯುತ್ತದೆ. ಇನ್ನೂ ಭಾರಿ ಗ್ರಾತದ ಅಗ್ನಿ ಕುಂಡದ ನಿಗಿನಿಗಿ ಕೆಂಡದಲ್ಲಿ ಅಲಾಯಿ ದೇವರು ಹೊತ್ತವರು ಹಾಯ್ದು ಹೋಗುವ ದೃಶ್ಯ ನೋಡುಗರ ಎದೆ ಝಲ್ ಎನ್ನುವಂತಿತ್ತು. ಹಿಂದೂ ಮುಸ್ಲಿಂ ಜನಾಂಗದವರು ಸೇರಿ ಮೊಹರಂ ಆಚರಿಸಿದರು. ಮೊಹರಂ ಮೆರವಣಿಗೆಯಲ್ಲಿ ಭಜನೆ ಮಾಡುತ್ತಾ ಮೆರವಣಿಗೆ ಮಾಡುವುದು ಮತ್ತೊಂದು ವಿಶೇಷವಾಗಿದೆ. ಮೊಹರಂ ಸಂಭ್ರಮ ನಗರದಲ್ಲಿ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಇದನ್ನೂ ಓದಿ: ಕಾನೂನು ಕಾಯ್ದೆಗೆ ವಿರುದ್ಧವಾಗಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ: ಸಿಎಂ
