ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವಂತಹ ಎಂ ಸತೀಶ್ ರೆಡ್ಡಿ ಅವರು ಇಂದು (ಗುರುವಾರ ಜುಲೈ 3) ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಸೋಮಸಂದ್ರಪಾಳ್ಯ ಗುಂಡು ತೋಪು ಪ್ರದೇಶದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಪೂಜೆ ಸಲ್ಲಿಸಿ ಶಂಕುಸ್ಥಾಪನೆ ನೆರವೇರಿಸಿದರು.
ರಸ್ತೆ ಕಾಮಗಾರಿ ಗೆ ಶಂಕುಸ್ಥಾಪನೆ ನೆರವೇರಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸ್ಥಳೀಯ ನಾಗರಿಕರ ಹಿತದೃಷ್ಟಿಯಿಂದ ರಸ್ತೆ ಅಭಿವೃದ್ಧಿ ಕಾರ್ಯವನ್ನು ಪ್ರಾರಂಭಿಸಲಾಗಿದ್ದು, ಕ್ಷೇತ್ರದ ನೂತನ ಮೂಲಸೌಕರ್ಯ ಅಭಿವೃದ್ಧಿಯೊಂದಿಗೆ ಈ ಪ್ರದೇಶದ ವಾಹನ ಸಂಚಾರ ಮತ್ತು ಜನಸಾರಿಗೆ ಸುಲಭತೆ ಉಂಟಾಗಲಿದೆ ಎಂದರು. ಇದನ್ನೂ ಓದಿ: ಕರ್ತವ್ಯಲೋಪ ಎಸಗಿರುವ 3 ಜನ ಬಿಬಿಎಂಪಿ ನೌಕರರ ಅಮಾನತ್ತು!
ಈ ಸಂದರ್ಭದಲ್ಲಿ ಮಾಜಿ ನಗರಸಭಾ ಸದಸ್ಯರಾದ ಶ್ರೀನಿವಾಸ ರೆಡ್ಡಿ ರವರು, ಚಂದ್ರಾ ರೆಡ್ಡಿ ರವರು, ಬಿಜೆಪಿ ಮುಖಂಡರಾದ ಮುರಳೀಧರ್ ರವರು, ಸ್ಥಳೀಯ ಮುಖಂಡರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
