ಮುಂಬೈ: ಹುಡುಗರು ಸಿನಿಮಾ ಹೆಚ್ಚು ಹೆಸರು ಮಾಡಲು ಮೊದಲ ಕಾರಣವೆಂದರೆ, ‘ತೊಂದ್ರೆ ಇಲ್ಲ ಪಂಕಜ’ ಎನ್ನುವ ಸಾಂಗ್ ಬಹಳ ಹಿಟ್ ಆಗಿತ್ತು. ಈ ಹಾಡಿನಿಂದಲೇ ಹುಡುಗರು ಸಿನಿಮಾ ಅದೆಷ್ಟೋ ಅಭಿಮಾನಿಗಳ ಮನ ಗೆದ್ದಿತ್ತು.
ನಾ ಬೋರ್ಡು ಇರದ ಬಸ್ಸನ್ನು ಹತ್ತಿ ಬಂದ ಸುಂದರಿ ಸಾಂಗ್ ಗೆ ಸಖತ್ ಸ್ಟೆಪ್ ಹಾಕಿದ್ದ ಖ್ಯಾತ ನಟಿ ಶಫಾಲಿ ಜರಿವಾಲಾ ಹೃದಯಘಾತದಿಂದ ಸಾವನೋಪ್ಪಿರುವ ಘಟನೆ ನಡೆದಿದೆ. ಅವರಿಗೆ ಕೇವಲ 42 ವರ್ಷ ವಯಸ್ಸಾಗಿತ್ತು. ಮುಂಬೈನ ಅಂಧೇರಿ ಲೋಖಂಡ್‌ವಾಲಾ ಪ್ರದೇಶದಲ್ಲಿ ವಾಸಿಸುತ್ತಿದ್ದ ನಟಿ ಶೆಫಾಲಿ ಜೂನ್ 27ರ ಬೆಳಿಗ್ಗೆ 11 ಗಂಟೆ ಸುಮಾರಿಗೆ ತೀವ್ರ ಅಸ್ವಸ್ಥರಾದರು.
ಅವರಿಗೆ ಎದೆನೋವು ಕಾಣಿಸಿಕೊಂಡಿತು. ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಯಾವುದೇ ಪ್ರಯೋಜನ ಆಗಲಿಲ್ಲ. ಆಗಲೇ ಅವರು ನಿಧನ ಹೊಂದಿದ್ದರು. ಪ್ರಸ್ತುತ, ಅವರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೂಪರ್ ಆಸ್ಪತ್ರೆಗೆ ಕಳುಹಿಸಲಾಗಿದೆ.
