ಮೈಸೂರು: ಮೊದಲಿನಿಂದಲೂ ಡಾ. ರಾಜಕುಮಾರ್ ಅವರ ಕುಟುಂಬ ಹಾಗೂ ರಜನಿಕಾಂತ್ ಅವರ ಕುಟುಂಬದ ಒಡನಾಟ ಬಹಳ ಚೆನ್ನಾಗಿದ್ದು, ರಾಜಕುಮಾರ್ ಅವರ ಮಕ್ಕಳ ಸಿನಿಮಾಗಳಿಗೆ ರಜನಿಕಾಂತ್ ಅವರು ಮೊದಲಿನಿಂದಲೂ ಬೆಂಬಲ ನೀಡುತ್ತಾ ಬಂದಿದ್ದಾರೆ.
ಹೌದು, ಡಾ. ರಾಜಕುಮಾರ್ ಅವರ ಕುಟುಂಬ ಹಾಗೂ ರಜನಿಕಾಂತ್ ಅವರ ಕುಟುಂಬದ ಒಡನಾಡಿ ಬಹಳ ಚೆನ್ನಾಗಿದ್ದು, ಮೈಸೂರಿನಲ್ಲಿ ರಾಜಕುಮಾರ್ ಅವರ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ಅವರು ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿ ಮಾಡಿದ್ದಾರೆ.
ಜೈಲರ್ 2 ಸಿನಿಮಾ ಮೈಸೂರಿನಲ್ಲಿ ಚಿತ್ರೀಕರಣವಾಗುತ್ತಿದ್ದು ಚಿತ್ರೀಕರಣದ ಸಂದರ್ಭದಲ್ಲಿ ನಟಿ ಧನ್ಯಾ ಹಾಗೂ ಅವರ ತಾಯಿ ಭೇಟಿ ಮಾಡಿದ್ದಾರೆ. ಇದನ್ನೂ ಓದಿ: ಕಬಿನಿಯಲ್ಲಿ ಗೀತಾ-ಶಿವರಾಜ್ ಜಾಲಿ ಜಾಲಿ..!
ಇನ್ನು ರಜನಿಕಾಂತ್ ಅವರನ್ನು ಭೇಟಿ ಮಾಡಿರುವ ಫೋಟೋಗಳನ್ನು ಧನ್ಯಾ ಅವರು ತಮ್ಮ ಸೋಶಿಯಲ್ ಖಾತೆಗಳಲ್ಲಿ ಹಂಚಿಕೊಂಡಿತು ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
