ಬೆಂಗಳೂರು: ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆ 2025ರ ಜನಜಾಗೃತಿ ಸಭೆಯನ್ನು ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ರವರು ಉದ್ಘಾಟಿಸಿದರು.
ನಗರದ ಗಾಂಧೀ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರ ನೇತೃತ್ವದಲ್ಲಿ ಏಕ ಸದಸ್ಯ ಆಯೋಗದ ನಿರ್ದೇಶನದಂತೆ ಮೇ 6 ರಿಂದ ರಾಜ್ಯದಾದ್ಯಂತ ಸರ್ಕಾರವು ಸಮೀಕ್ಷೆಯ ಕಾರ್ಯ ನಡೆಸುತ್ತಿದ್ದು ಇದೇ ತಿಂಗಳ 30ಕ್ಕೆ ಕೊನೆಗೊಳ್ಳಲಿದ್ದು ಎಲ್ಲಾ ಪರಿಶಿಷ್ಟ ಜಾತಿಯ 101 ಜಾತಿಯ ಸಮುದಾಯದವರು ತಮ್ಮ ತಮ್ಮ ಮೂಲ ಜಾತಿಯನ್ನು ನೊಂದಾಯಿಸಲು ಮನವಿ ಮಾಡಿದರು.
ಬೆಂಗಳೂರು ನಗರದಲ್ಲಿ ಸಮೀಕ್ಷೆಯ ಕಾರ್ಯ ಮಂದಗತಿಯಲ್ಲಿ ನಡೆಯುತ್ತಿರುವ ಹಿನ್ನಲೆಯಲ್ಲಿ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ ಸರಿಯಾದ ಸಮಯಕ್ಕೆ ಗಣತಿದಾರರನ್ನು ನಿಯೋಜನೆಮಾಡುವುದರ ಮೂಲಕ ಪ್ರತಿಯೋಂದು ಮನೆಯನ್ನು ಸಮೀಕ್ಷೆಗೆ ಒಳಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾನೆ ಎಂದರು.
ಬೆಂಗಳೂರು ನಗರದ 120 ಕಾಲೋನಿಗಳಲ್ಲಿ ನಗರದ ಎಲ್ಲಾ ಮನೆಗಳ ಸಮೀಕ್ಷೆ ಮಾಡಬೇಕು. ಬೆಳಗ್ಗೆ 6.00 ರಿಂದ 10.00 ಗಂಟೆಯ ವರೆಗೂ ಹಾಗೂ ಸಾಯಂಕಾಲ 5.00 ಗಂಟೆಯಿಂದ ರಿಂದ 9.00 ಗಂಟೆಯವರೆಗೂ ಸಮೀಕ್ಷೆ ಮಾಡಲು ಗಣತಿದಾರರಿಗೆ ಸಮಯಾವಕಾಶ ಕಲ್ಪಿಸಲಾಗಿದೆ. ಇದನ್ನೂ ಓದಿ: ಸಾರ್ವಜನಿಕರ ಅನುಕೂಲಕ್ಕಾಗಿ ತ್ವರಿತ ಕ್ರಮ: ಎಂ ಸತೀಶ್ ರೆಡ್ಡಿ
ಸಂಭದಪಟ್ಟ ಕಾಲೋನಿಗಳಲ್ಲಿ ಮುಖಂಡರನ್ನು ನಿಯೋಜಿಸಿದ್ದು ಅವರೊಂದಿಗೆ ಎಲ್ಲಾ ಗಣತಿದಾರರ ಸಮೀಕ್ಷೆಯ ಕಾರ್ಯ ಮಾಡಲು ನಿರ್ದೇಶಿಸಲಾಗಿದೆ ಎಂದರು.
ಗಣತಿದಾರರ ಮಾಹಿತಿಗಳನ್ನು ಸಂಭಂದಿಸಿದ ಕಾಲೋನಿಗಳ ಮುಖಂಡರಿಗೆ ಕೊಟ್ಟಾಗ ಅವರೊಂದಿಗೆ ಸಮೀಕ್ಷೆ ನಡೆಸಲು ಸಹಕಾರಿಯಾಗಲಿದೆ. ಎಲ್ಲಾ ಕಾಲೋನಿಗಳಲ್ಲಿ ನಮ್ಮ ಸಮುದಾಯದ ಮುಖಂಡರು ಉಪಸ್ಥಿತರಿರಲಿದ್ದು ಅವರೊಂದಿಗೆ ಹೋದಾಗ ಗಣತೀಕಾರ್ಯ ಸುಗಮವಾಗಿ ನಡೆಸಲು ಸಹಕಾರಿಯಾಗಲಿದೆ ಎಂದರು.
