ಬೆಂಗಳೂರು: ರಾಜೇಂದ್ರ ಕಟಾರಿ ರೆವೆನ್ಯೂ ಸೆಕ್ರೆಟರಿ ಅವರು ನನಗೆ ಅಪಮಾನ ಮಾಡಿದ್ರು, ಅಸೆಂಬ್ಲಿಯಲ್ಲೂ ಕೂಡ ಇದರ ಬಗ್ಗೆ ಪ್ರಸ್ತಾಪವಾಯಿತು. ಒಬ್ಬ ಶಾಸಕರಿಗೆ ಅವಮಾನ ಮಾಡಿರುವ ಅಧಿಕಾರಿಗಳನ್ನ ಅಮಾನತ್ತು ಮಾಡಿ ಅಥವಾ ಕ್ರಮ ತೆಗೆದುಕೊಳ್ಳಿ ಎಂದು ನಾವೆಲ್ಲರೂ ಅಸೆಂಬ್ಲಿಯಲ್ಲೇ ಪತ್ರ ಕೊಟ್ಟಿದ್ದೆವು, ಅಲ್ಲದೆ ಸಿದ್ದರಾಮಯ್ಯನವರು ಬೆಳಗಾವಿಗೆ ಬಂದಾಗ ನಾನು ಖುದ್ದಾಗಿ ಎರಡು ಸಾರಿ ಇದರ ಬಗ್ಗೆ ಪತ್ರ ನೀಡಿದ್ದೆ.
ಇದ್ಯಾವುದೇ ಪತ್ರವನ್ನು ಲೆಕ್ಕಿಸದೆ ಸಿಎಂ ನವರು ಸುಮ್ಮನೆ ಇದ್ದಾರೆ, ಹಾಗಾದ್ರೆ ಸರ್ಕಾರಕ್ಕೆ ಅಧಿಕಾರಿಗಳೇ ಬೇಕಾಗಿದ್ದಾರೆ ಹೊರತಾಗಿ ಶಾಸಕರಲ್ಲ ಎಂದು ಕಾಂಗ್ರೆಸ್ನ ಶಾಸಕ ರಾಜು ಕಾಗೆ ಅವರು ಮತ್ತೆ ಇಂದು ಸ್ವಪಕ್ಷದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಜಿಗಣಿ ಹುಳುವಾದರೂ ಕೇವಲ ರಕ್ತ ಹಿರಿಬಿಡುತ್ತದೆ. ಆದರೆ ಕಾಂಗ್ರೆಸ್ ನವರು ಹಾಗಲ್ಲ: ಸಿಟಿ ರವಿ
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 30 ವರ್ಷ ಅಸೆಂಬ್ಲಿಯಲ್ಲಿರುವ ನನಗೆ ಮಾನ ಮರ್ಯಾದೆ ಇಲ್ಲದಂತಾಗಿದೆ. ಕೇವಲ ಇವರಿಗೆ ಅಧಿಕಾರಿಗಳೇ ಬೇಕಾಗಿದ್ದಾರೆ ಹೊರತಾಗಿ ನಮ್ಮಂತ ಎಂಎಲ್ಎ ಗಳಲ್ಲ ಎಂದು ಹೇಳಿದ್ದಾರೆ. ಎಲ್ಲಾ ಅಧಿಕಾರಿಗಳ ವಿರುದ್ಧ ನಾವು ಆರೋಪ ಮಾಡಿಲ್ಲ. ಎಲ್ಲಾ ಅಧಿಕಾರಿಗಳ ವಿರುದ್ಧ ಆರೋಪ ಮಾಡಲು ನಮಗೆನು ಹುಚ್ಚುನಾಯಿ ಕಚ್ಚಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಭ್ರಷ್ಟಾಚಾರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂದರೆ ಅದು ತಪ್ಪಾ? ಹಾಗಿದ್ರೆ ಸರ್ಕಾರದಲ್ಲಿ ಎಷ್ಟೇ ಭ್ರಷ್ಟಾಚಾರವಾದರೂ ಇವರೆಲ್ಲ ಕಣ್ಮುಚ್ಕೊಂಡು ಕುತ್ಕೋತಾರೆ ಎಂದು ಪ್ರಶ್ನಿಸಿದ್ದಾರೆ.
