ಬೆಂಗಳೂರು: ಐಪಿಎಲ್ ಇತಿಹಾಸದಲ್ಲಿ 18 ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜಯ ಸಾಧಿಸಿತ್ತು. ಐಪಿಎಲ್ ವಿಜಯೋತ್ಸವ ಕಾರ್ಯಕ್ರಮವನ್ನು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು.
ನೆಚ್ಚಿನ ತಂಡದ ನಾಯಕರನ್ನು ನೋಡಲು ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದು ಚಿನ್ನಸ್ವಾಮಿ ಕ್ರೀಡಾಂಗಣ ಗೇಟ್ ಬಳಿ ನೂಕು ನುಗ್ಗಲಾಗಿ ಕಾಲ್ತುಳಿತ ಸಂಭವಿಸಿ 11 ಜನ ಮರಣ ಹೊಂದಿದರು.
ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಇಂದು (ಸೋಮವಾರ ಜೂನ್ 23) ಹೈ ಕೋರ್ಟ್ ನಲ್ಲಿ ಐಪಿಎಲ್ ಅರ್ಜಿ ವಿಚಾರಣೆ ನಡೆಯಲಿದೆ.
ದ್ವಿಸದಸ್ಯ ಪೀಠದಲ್ಲ ಅರ್ಜಿ ವಿಚಾರಣೆ ನಡೆಯಲಿದೆ. ಸರ್ಕಾರದ ಪರ ಹಿರಿಯ ವಕೀಲ ಉದಯ್ ಹೊಳ್ಳರಿ ಮಂಡನೆ ಮಾಡಲಿದ್ದಾರೆ. RCB, DNA, KSCA ಸಂಸ್ಥೆಗಳೂ ಘಟನೆಗೆ ಜವಾಬ್ದಾರಿ ಎಂದು ಕೋರ್ಟ್ ಪರಿಗಣಿಸಿದ್ದು, ಘಟನೆಯಲ್ಲಿ ಅವರೂ ಜವಾಬ್ದಾರರು ಎಂದು PIL ಅರ್ಜಿಯಲ್ಲಿ ಪರಿಗಣನೆ ಮಾಡಲಾಗಿದೆ. 3 ಸಂಸ್ಥೆಗಳಿಗೆ ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್ ನೀಡಿತ್ತು. ಮಧ್ಯಂತರ ಅರ್ಜಿಗಳ ಬಗ್ಗೆಯೂ ಇಂದು ನಿರ್ಧಾರ ಆಗಲಿದೆ.
ಘಟನೆಯ ಬಗ್ಗೆ ಬೇರೆ ವಕೀಲರಿಂದಲೂ PIL ಸಲ್ಲಿಕೆ ಮಾಡಲಾಗಿದೆ. ಮಧ್ಯಂತರ ಸಲ್ಲಿಕೆಯಾಗಿರುವ ಅರ್ಜಿಗಳ ಬಗ್ಗೆಯೂ ನಿರ್ಧಾರ ಆಗಲಿದೆ. ಇಂದು RCB, DNA, KSCA ಪರ ವಕೀಲರಿಂದ ವಾದ ಮಂಡನೆ ಸಾಧ್ಯತೆ ಇದೆ.
