ಕನ್ನಡ ಚಿತ್ರರಂಗದಲ್ಲಿ ಇತ್ತೀಚಿಗೆ ವಂಚನೆಯ ಆರೋಪಗಳು ಮೇಲಿಂದ ಮೇಲೆ ಕೇಳಿ ಬರುತ್ತಿದ್ದು, ಸ್ಟಾರ್ ನಿರ್ದೇಶಕ ನಂದ ಕಿಶೋರ್ ಅವರ ವಿರುದ್ಧ ವಂಚನೆಯ ಆರೋಪದ ಕೂಗು ಕೇಳಿ ಬಂದಿದೆ.
ಹೌದು, ಹೆಸರಾಂತ ನಿರ್ದೇಶಕರಾಗಿರುವ ನಂದ ಕಿಶೋರ್ ಅವರ ವಿರುದ್ಧ ವಂಚನೆ ಆರೋಪ ಒಂದು ಕೇಳಿಬಂದಿದ್ದು ಸುಮಾರು 22 ಲಕ್ಷ ವಂಚನೆ ಮಾಡಿದ್ದಾರೆ ಎಂದು ಯುವ ಕಲಾವಿದರೊಬ್ಬರು ಆರೋಪಿಸಿದ್ದಾರೆ. ಅದು ಕೂಡ ನಟ ಕಿಚ್ಚ ಅವರ ಹೆಸರು ಹೇಳಿಕೊಂಡು ನಂದ ಕಿಶೂರ್ ಅವರು ವಂಚನೆ ಮಾಡಿದ್ದಾರೆ ಎಂದು ಶಬರೀಶ್ ಶೆಟ್ಟಿ ಎಂಬವರು ಆರೋಪಿಸಿದ್ದಾರೆ.
ಈ ಬಗ್ಗೆ ಆರೋಪ ಮಾಡಿದ ಶಬರೀಶ್ ಶೆಟ್ಟಿ ಅವರು, 2016ರಲ್ಲಿ ನನಗೆ ನಂದ ಕಿಶೋರ್ ಜಿಮ್ನಲ್ಲಿ ಪರಿಚಯವಾಗಿದ್ದರು. ನಾನು ನಂದ ಕಿಶೋರ್ ಅವರಿಗೆ ಚಿನ್ನವನ್ನು ಅಡವಿಟ್ಟು 22 ಲಕ್ಷ ಕೊಟ್ಟಿದ್ದೀನಿ. 9 ವರ್ಷಗಳಿಂದ ನನಗೆ ನಂದ ಕಿಶೋರ್ ಹಣವನ್ನು ನೀಡಿಲ್ಲ ಎಂದು ಆರೋಪಿಸಿದ್ದಾರೆ. ಕೊಟ್ಟಿರುವ ಹಣ ವಾಪಾಸು ನೀಡೆಂದರೆ ನನಗೆ ಧಮ್ಕಿಹಾಕಿ, ಹೆದರಿಸಿ ಬೆರೆಸಿ ಮಾಡುತ್ತಿದ್ದಾರೆ. ಇದನ್ನೂ ಓದಿ: ಡಿಸಿಎಂ ಡಿಕೆ ಶಿವಕುಮಾರ್ ಅವರಿಂದ ಮಹತ್ವದ ನಿರ್ಧಾರ!
ನಾನು ಹಣ ಕೇಳಿದಾಗೆಲ್ಲ ಸುದೀಪ್ ಸರ್ ಹೆಸರೇಳಿ ಯಾಮಾರಿಸುತ್ತಿದ್ದರು. ಸಿನಿಮಾದಲ್ಲಿ ಅವಕಾಶ ಕೊಡುತ್ತೇನೆ ಅಂತ ಹೇಳಿ ನನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ನಾನು ಸುದೀಪ್ ಸರ್ ಜೊತೆ ಕ್ರಿಕೆಟ್ ಆಡುವ ಆಸೆಯಿಂದ ಸುಮ್ಮನಾಗುತ್ತಿದ್ದೆ. ನನ್ನ ಹಣ ವಾಪಸ್ ಕೊಡಿ ಅಂದ್ರೆ ಏನ್ ಮಾಡಿಕೊಳ್ಳುತ್ತೀಯೋ ಮಾಡ್ಕೋ ಅಂತಾರೆ. ಅವಾಜ್ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
