ಬೆಂಗಳೂರು: ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ರವರ 55ನೇ ವಸಂತಕ್ಕೆ ಕಾಲಿಟ್ಟಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿಯವರ ಹುಟ್ಟು ಹಬ್ಬದ ಶುಭ ಕೋರಿದ್ದಾರೆ.
ಈ ಕುರಿತು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಹಾಕಿರುವ ಅವರು, ಸೈದ್ದಾಂತಿಕ ಬದ್ಧತೆ, ಜನಪರ ಕಾಳಜಿ, ಸತ್ಯನಿಷ್ಠುರತೆ, ದೇಶದ ಭವಿಷ್ಯದ ಬಗೆಗಿನ ಸ್ಪಷ್ಟಮುನ್ನೋಟ, ಅಪಾರ ಧೈರ್ಯ ಮತ್ತು ಪ್ರೀತಿಯನ್ನು ತುಂಬಿಕೊಂಡ ರಾಹುಲ್ ಗಾಂಧಿಯವರನ್ನು ನನ್ನ ನಾಯಕನೆಂದು ಹೇಳಿಕೊಳ್ಳಲು ನಾನು ಹೆಮ್ಮೆ ಪಡುತ್ತೇನೆ. ಭಾರತದ ಭವಿಷ್ಯದ ಬೆಳಕು ರಾಹುಲ್ ಗಾಂಧಿಯವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಶುಭ ಕೋರಿದ್ದಾರೆ. ಇದನ್ನೂ ಓದಿ: ಹೆಚ್ಡಿಕೆಗೆ ಬಿಗ್ ರಿಲೀಫ್
