ಬೆಂಗಳೂರು: ಆಂಧ್ರಪ್ರದೇಶದ ಓಬಳಾಪುರಂ ಅಕ್ರಮ ಗಣಿಗಾರಿಕೆಯಲ್ಲಿ ಮಾಜಿ ಸಚಿವ ಜನಾರ್ಧನ್ ರೆಡ್ಡಿ ಅವರ ಕೈವಾಡವಿದೆ ಎಂಬ ಕಾರಣಕ್ಕೆ ಸಿಬಿಐ ಕೋರ್ಟ್ ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಆದರೆ ತೆಲಂಗಾಣ ಹೈಕೋರ್ಟ್ ಸಿಬಿಐ ಕೋರ್ಟ್ ವಿಧಿಸಿದ ಏಳು ವರ್ಷದ ಶಿಕ್ಷೆಗೆ ತಡೆಯಾಜ್ಞೆ ನೀಡಿ ಷಶರತ್ತುಬದ್ಧ ಜಾಮೀನು ನೀಡಿದೆ.
ಹೈಕೋರ್ಟ್ ಜಾಮೀನು ನೀಡಿದರು ಕೂಡ ಸದ್ಯಕ್ಕೆ ಬಿಡುಗಡೆ ಭಾಗ್ಯ ಇಲ್ಲದಂತಾಗಿದೆ ಜನಾರ್ಧನ್ ರೆಡ್ಡಿ ಅವರಿಗೆ.
ಯೆಸ್… ಸದ್ಯ ಜನಾರ್ಧನ್ ರೆಡ್ಡಿ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ತೆಲಂಗಾಣ ಹೈಕೋರ್ಟ್ ಇಂದು ಜನಾರ್ದನ ರೆಡ್ಡಿ ಅವರಿಗೆ ಜಾಮೀನು ಮಂಜೂರು ಮಾಡಿದೆ. ಆದರೂ ರೆಡ್ಡಿ ಅವರು ಜೈಲಿನಿಂದ ರಿಲೀಸ್ ಆಗಲ್ಲ. ಯಾಕಂದ್ರೆ ಬೆಂಗಳೂರು ಸಿಬಿಐನಿಂದ ಬೇರೆ ಕೇಸ್‌ಗೆ ಸಂಬಂಧಪಟ್ಟಂತೆ ಸಿಬಿಐ ತನಿಖೆ ನಡೆಯುತ್ತಿದೆ.
ಬೆಂಗಳೂರು ಸಿಬಿಐ, ಬೇಲೆಕೇರಿ ಬಂದರು ಅದಿರು ರಫ್ತು ಕೇಸ್‌ನ ತನಿಖೆ ನಡೆಸುತ್ತಿದೆ. ಬಂದರಿನಲ್ಲಿ ಅದಿರು ಅಕ್ರಮ ರಫ್ತು ಕೇಸ್ನಲ್ಲಿ ಜನಾರ್ದನ ರೆಡ್ಡಿ ಅವರನ್ನು ಕೋರ್ಟ್ಗೆ ಹಾಜರುಪಡಿಸಲಾಗಿದೆ. ಇದನ್ನೂ ಓದಿ: BREAKING: ಗಣಿಧಣಿಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್
ಆದ್ದರಿಂದ ಜಾಮೀನು ಮಂಜೂರಾದ್ರೂ ಸದ್ಯಕ್ಕೆ ಬಿಡುಗಡೆ ಭಾಗ್ಯ ಕಾಣದಂತಾಗಿದೆ ಜನಾರ್ದನ್ ರೆಡ್ಡಿ ಅವರಿಗೆ. ಹಾಗಾದ್ರೆ ಜನಾರ್ಧನ್ ರೆಡ್ಡಿ ಅವರು ಬಿಡುಗಡೆ ಯಾವಾಗ ಸಿಗುತ್ತದೆ ಎಂಬುದು ಕಾದು ನೋಡಬೇಕಿದೆ.
