Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಕರ್ನಾಟಕದಲ್ಲಿ ಮೊದಲ ಕಾಲ್ತುಳಿತ ಉಂಟಾಗಿದ್ದೇ ಹೆಚ್‌ ಡಿಕೆ ಅವರ ಕಾಲದಲ್ಲಿ
  • Bangalore
  • Politics
  • State

ಕರ್ನಾಟಕದಲ್ಲಿ ಮೊದಲ ಕಾಲ್ತುಳಿತ ಉಂಟಾಗಿದ್ದೇ ಹೆಚ್‌ ಡಿಕೆ ಅವರ ಕಾಲದಲ್ಲಿ

admin June 6, 2025 1 minute read
Spread the love

ಬೆಂಗಳೂರು: ಕರ್ನಾಟಕದ ಇತಿಹಾಸದಲ್ಲಿ ಮೊದಲ ಕಾಲ್ತುಳಿತ ಉಂಟಾಗಿದ್ದೇ ಕುಮಾರಸ್ವಾಮಿ ಅವರ ಕಾಲದಲ್ಲಿ. ಅದು ರಾಜಕುಮಾರ್ ಅವರ ಸಾವಿನ ಸಂದರ್ಭದಲ್ಲಿ ಸರ್ಕಾರದ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷರಾದ ರಮೇಶ್ ಬಾಬು ಹೇಳಿದರರು

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೋದಿಯವರ‌ 11 ವರ್ಷಗಳ ಆಡಳಿತಾವಧಿಯಲ್ಲಿ ಇಡೀ ದೇಶದಲ್ಲಿ ಸುಮಾರು 2 ಸಾವಿರ ಜನರು ಕಾಲ್ತುಳಿತದಿಂದಾಗಿ ಸತ್ತಿದ್ದಾರೆ. ಇದರ ಬಗ್ಗೆ ಕೇಂದ್ರ ಸರ್ಕಾರದ ಕ್ರಮವೇನು. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಉಂಟಾದ ಸಾವುಗಳಿಗೆ ಎಂದು ರಾಜಿನಾಮೆ ಕೇಳುತ್ತೀರಿ. ಮಣಿಪುರದಲ್ಲಿ ಕೇಂದ್ರ ಸರ್ಕಾರ ಪ್ರಾಯೋಜಿತ ಗಲಭೆಗಳು ಇನ್ನೂ ನಡೆಯುತ್ತಿವೆ.

ಸುಮ್ಮನೆ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುವುದು ಬಿಟ್ಟು ಅಭಿವೃದ್ಧಿಯ ಕಡೆಗೆ ಗಮನ ನೀಡಿ ಎಂದು ಸಲಹೆ ನೀಡುತ್ತೇನೆ. ಕಾಲ್ತುಳಿತ ಘಟನೆಗೆ ಕಾಂಗ್ರೆಸ್ ಪಕ್ಷ ಅತೀವ ವಿಷಾದ ವ್ಯಕ್ತಪಡಿಸುತ್ತದೆ. ಕುಟುಂಬದ ಸದಸ್ಯರನ್ನು ಕಳೆದುಕೊಂಡ ಕುಟುಂಬಗಳಿಗೆ ಕಾಂಗ್ರೆಸ್ ಪಕ್ಷ ಸಾಂತ್ವನ ತಿಳಿಸುತ್ತದೆ.

ಬಿಜೆಪಿ ಬೆಂಕಿ ಬಿದ್ದ ಮನೆಯಗಳ ಹಿರಿಯುತ್ತಿದೆ. ಕರ್ನಾಟಕದ ರಾಜ್ಯದ ಅಸಮರ್ಥ ವಿರೋಧ ಪಕ್ಷಗಳು ಬಾಯಿಗೆ ಬಂದಂತೆ ಮಾತನಾಡುತ್ತವೆ. ಈ ಬಿಜೆಪಿಯವರು ಅಸಮರ್ಥರು. ಕುಮಾರಸ್ವಾಮಿ ಅವರನ್ನು ಮುಂದಿಟ್ಟುಕೊಂಡು ಪತ್ರಿಕಾಗೋಷ್ಠಿ ನಡೆಸುವುದು ಇವರ ಕುತಂತ್ರತನ ತೋರಿಸುತ್ತದೆ.

ನರೇಂದ್ರ ಮೋದಿಯವರು ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರಿಗೆ ಕೆಲಸ ಇಲ್ಲದಂತೆ ಮಾಡಿದ್ದಾರೆ ಎನ್ನಬಹುದು. ಇವರಿಗೆ ಪತ್ರಿಕಾಗೋಷ್ಠಿ ಹಾಗೂ ಎಕ್ಸ್ ಅಲ್ಲಿ ಬರೆಯುವುದೇ ಇವರಿಗೆ ಪೂರ್ಣಾವಧಿ ಕೆಲಸವಾಗಿ ಹೋಗಿದೆ. ಈ ಕಾರಣಕ್ಕೆ ರಾತ್ರಿ 10.45 ಕ್ಕೆ ದೆಹಲಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಡಿ.ಕೆ.ಶಿವಕುಮಾರ್ ಅವರ ಮೇಲೆ ದಾಳಿ ಮಾಡುವ ಪ್ರವೃತ್ತಿಗೆ ಮುಂದಾಗಿದ್ದಾರೆ.

ಕೆಲಸ ಇಲ್ಲದೇ ಕೇವಲ ಪ್ರತಿಕಾಗೋಷ್ಟಿ ಮಾಡುವ ಬದಲು ಕೇಂದ್ರ ಖಾತೆಗೆ ರಾಜಿನಾಮೆ ನೀಡುವುದು ಒಳ್ಳೆಯದು. ದಿನಕ್ಕೆ ಇಪ್ಪತ್ತರಿಂದ ಮೂವತ್ತು ಸಲ ‘ನಾನು ಪ್ರಾಮಾಣಿಕ’ ಎನ್ನುವ ಇವರು ಹತಾಶರಾಗಿ ಮಾತನಾಡುತ್ತಿದ್ದಾರೆ‌. ಇದನ್ನೂ ಓದಿ: ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ದಕ್ಷ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದಾರೆ: ಹೆಚ್ ಡಿಕೆ

ಕುಮಾರಸ್ವಾಮಿ ಅವರೇ ನಿಮಗೆ ಡಿ.ಕೆ.ಶಿವಕುಮಾರ್ ಅವರ ಮೇಲೆ ಏತಕ್ಕೆ ಅಸಮಾಧಾನ. ‌ನಾವು ಆಡಳಿತ ಪಕ್ಷವಾಗಿ ನೀವು ಪ್ರಾಮಾಣಿಕವಾಗಿ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಬೇಕಿರುವುದು ನಮ್ಮ ಕರ್ತವ್ಯ. ನಮ್ಮ ಕಡೆಯಿಂದ ಉಂಟಾದ ಲೋಪಗಳನ್ನೂ ಸಹ ನಾವು ಒಪ್ಪಿಕೊಂಡಿದ್ದೇವೆ.

ನೀವು 2003 ರಲ್ಲಿ ಮುಖ್ಯಮಂತ್ರಿಗಳಾಗಿದ್ದಾಗ ಉಂಟಾಗಿದ್ದ ಲೋಪದೋಷಗಳಿಗೆ ನೀವು ಕೊಟ್ಟಂತಹ ಉತ್ತರವೇನು. ಅವ್ಯವಸ್ಥೆ ಆಗಿದ್ದರೂ ಸರ್ಕಾರ ಗೋಲಿಬಾರ್ ಗೆ ಅವಕಾಸ ನೀಡಿಲ್ಲ. ವಿಧಾನಸೌಧ ಸೇರಿದಂತೆ ಸುತ್ತಲೂ ಸೇರಿದ್ದ ಜನರ ಪ್ರಾಣಕ್ಕೆ ಅಪಾಯವಾಗದಂತೆ ಕೆಲಸ ಮಾಡಿದೆ ಎಂದರು.

 

About the Author

admin

Administrator

Visit Website View All Posts

Spread the love

Post navigation

Previous: ಸ್ವಚ್ಛತೆಗಾಗಿ ಪ್ರತ್ಯೇಕ ವ್ಯಾಟ್ಸಪ್ ಸಂಖ್ಯೆ ಬಿಡುಗಡೆ
Next:  ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ (JICA)ಯು ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆಗೆ ಭೇಟಿ

Views:

13

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.