Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಉಸಿರಿಗಾಗಿ ಹಸಿರು: ಶಾಸಕ ಯಶವಂತರಾಯಗೌಡ ಪಾಟೀಲ
  • Politics
  • State

ಉಸಿರಿಗಾಗಿ ಹಸಿರು: ಶಾಸಕ ಯಶವಂತರಾಯಗೌಡ ಪಾಟೀಲ

admin June 6, 2025 1 minute read
Spread the love

ವಿಜಯಪುರ: ಇಂಡಿ ತಾಲೂಕಿನ ಕೊಳೂರಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾವಳಸಂಗ್ ಗ್ರಾಮದ ಅರಣ್ಯವಲಯದಲ್ಲಿ ಯಶವಂತರಾಯಗೌಡ ವಿ ಪಾಟೀಲ್ ಫೌಂಡೇಶನ್ (ರಿ) ಪಡನೂರ, ಸಾಮಾಜಿಕ ಮತ್ತು ಪ್ರಾದೇಶಿಕ ಅರಣ್ಯ ವಲಯ ಇಂಡಿ ಇವರ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ  ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ  ವ್ರಕ್ಷೋಧ್ಯಾನ ಸಾವಳಸಂಗ್ ಉಸಿರಿಗಾಗಿ- ಹಸಿರು ಅಭಿಯಾನ ಕಾರ್ಯಕ್ರಮಕ್ಕೆ ಇಂಡಿ ಮತಕ್ಷೇತ್ರದ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರು ಚಾಲನೆ ನೀಡಿದರು.

ಮೊದಲಿಗೆ IPL ನಲ್ಲಿ ಗೆದ್ದ RCBಯ ವಿಜಯೋತ್ಸವ ನಿಮಿತ್ಯ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ನಿಧನ ಹೊಂದಿದ ಕ್ರೀಡಾ ಅಭಿಮಾನಿಗಳ ಆತ್ಮಕ್ಕೆ ಶಾಂತಿ ಸಿಗಲೆಂದು 2 ನಿಮಿಷ ಮೌನಾಚರಣೆ ಮಾಡಲಾಯಿತು.

ನಾಡಗೀತೆ ಹಾಡುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರು ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ನಮಗೆ ಅನ್ನ ನೀಡುವುದೇ ಪರಿಸರ, ಪರಿಸರ ಬೆಳೆಸುವ ಜಾಗೃತಿ ಮೂಡಿಸಬೇಕಾಗಿದೆ. ಸಾಮಾಜಿಕ ಅರಣ್ಯ ವಲಯ ಹಾಗೂ ಪ್ರಾದೇಶಿಕ ಅರಣ್ಯವಲಯ ಅಧಿಕಾರಿಗಳ ಸೇವೆಗೆ ಅಭಿನಂದನೆ ವ್ಯಕ್ತಪಡಿಸಿದರು.

ಭೂ ವಿಜ್ಞಾನ ಅಧಿಕಾರಿಗಳ ಜೊತೆ ಹೊಸ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಸಿದ್ದೇಶ್ವರ ಮಹಾಸ್ವಾಮೀಜಿ ಅವರ ಆಶೀರ್ವಾದದಿಂದ ಈ ಸಾವಲಸಂಗ ಗುಡ್ಡಕ್ಕೆ ನೀರು ಆಗಿದೆ. ನಮಗೆ ಬರುತ್ತಿರುವ  ನೀರು ನಾವೆಲ್ಲ ಸರಿಯಾದ ರೀತಿ ಸದುಪಯೋಗ ಪಡಿಸಿಕೊಂಡಿದ್ದೆ ಆದ್ದಲಿ, ನಮ್ಮ ಇಡೀ ವಿಜಯಪುರ ಜಿಲ್ಲೆಯ ಅಭಿವೃದ್ಧಿ ಆಗುವುದರಲ್ಲಿ 2 ಮಾತಿಲ್ಲ ಎಂದು ಹೇಳಿದರು.

ಸಾಮಾಜಿಕ ಚಿಂತನೆ ಹಾಗೂ ನೈಸರ್ಗಿಕ ಚಿಂತನೆ ಎಲ್ಲರೂ ಇಟ್ಟುಕೊಳ್ಳಿ ಹಾಗೂ ನಾವೆಲ್ಲ ನಿಸರ್ಗವನ್ನು ಪ್ರೀತಿಸೋಣ ಎಂದು ತಿಳಿಸಿದರು.

ಸಾಲು ಮರದ ತಿಮ್ಮಕ್ಕ ಜೀವನ ಶೈಲಿಯನ್ನು ಹಾಗೂ ಅವರಿಗೆ ಇರುವ ಪರಿಸರ ಪ್ರೇಮ ನಾವೆಲ್ಲರೂ ಬೆಳಿಸಿಕೊಳ್ಳೋಣ ಅವರ ನಿಟ್ಟಿನಲ್ಲಿ ನಾವು ಸಾಗೋಣೊ ಪರಿಸರ ಬೆಳಿಸೋಣೊ ಎಂದು ಹೇಳಿದರು.

ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ ಕಾತ್ರಾಳ – ಬಾಲಗಾಂವ ಗುರುದೇವ ಆಶ್ರಮದ ಶ್ರೀ  ಅಮೃತಾನಂದ ಸ್ವಾಮೀಜಿ ಅವರು ತಮ್ಮ ಆಶೀರ್ವಚನದಲ್ಲಿ  ಶ್ರೀ  ಸಿದ್ದೇಶ್ವರ ಸ್ವಾಮೀಜಿ ರವರಿಗೆ ಇರುವ ಪರಿಸರ ಪ್ರೇಮದ ಕುರಿತು ಕೆಲವು ಸನ್ನಿವೇಶಗಳನ್ನು ಭೋದಿಸಿದರು.

ಅರಣ್ಯ ಬೆಳಿಸುವಲ್ಲಿ ನಾವೆಲ್ಲರೂ ಶ್ರಮಿಸೋಣ ಹಾಗೂ ರಕ್ಷಿಸೋಣ. ಯಥಾ ದೃಷ್ಟಿ, ತಥಾ ಸೃಷ್ಟಿ, ನಮ್ಮ ದೇಹ ಯಾವ ರೀತಿ ಇರುತ್ತೋ ನಾವು ನೋಡುವ ನೋಟ ಚೆನ್ನಾಗಿರುತ್ತೋ  ಅದೇ ರೀತಿ ಪರಿಸರ ಇರುತ್ತೆ. ಹಾಗಾಗಿ ನಮ್ಮ ದೇಹ ರಕ್ಷಿಸುವ ಹಾಗೆ ನಾವೆಲ್ಲ ಪರಿಸರವನ್ನು ರಕ್ಷಿಸಬೇಕು ಎಂದು ಸಂದೇಶ ನೀಡಿದರು. ಇದನ್ನೂ ಓದಿ: ಸಚಿವ ಸಂಪುಟದಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಕ್ರಮ ಕೈಗೊಂಡಿದ್ದೇನು?

ಮೊದಲು ಗಿಡದ ಕೆಳಗೆ ಸ್ನಾನ ಮಾಡುವುದರ ಮೂಲಕ ಗಿಡಗಳನ್ನು ಬೆಳಿಸುತ್ತಿದ್ದರು. ಇಂತಹ ಅನೇಕ ಪ್ರೇರಣೆ ಮಾತುಗಳನ್ನು ಹೇಳಿ ಸಾರ್ವಜನಿಕರಲ್ಲಿ ಪರಿಸರ ಪ್ರೇಮವನ್ನು  ಭೋದಿಸಿದರು.

ಸಮಾರಂಭದಲ್ಲಿ ಶಾಲಾ ಮಕ್ಕಳು ಹಾಗೂ ರೈತರಿಂದ 3300 ಸಸಿ ನೆಡುವುದು ಮತ್ತು ಬೀಜದ ಉಂಡೆ ಬಿತ್ತನೆ ಕಾರ್ಯಕ್ರಮ ಹಾಗೂ ಜಾಗೃತಿಗಾಗಿ -ಉಸಿರುಗಾಗಿ- ಹಸಿರು ಪರಿಸರ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ವರದಿ
ವಿಜಯಪುರ ಸಂಜಯ ಕೋಳಿ.

About the Author

admin

Administrator

Visit Website View All Posts

Spread the love

Post navigation

Previous: ಸಚಿವ ಸಂಪುಟದಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಕ್ರಮ ಕೈಗೊಂಡಿದ್ದೇನು?
Next: ಆರ್‌ಸಿಬಿ ಮಾರ್ಕೆಟಿಂಗ್‌ ಮುಖ್ಯಸ್ಥ ಅರೆಸ್ಟ್!

Views:

5

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.