ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರು ಷರತ್ತುಬದ್ಧ ಜಾಮೀನು ಮೇಲೆ ಈಗಾಗಲೇ ಹೊರಬಂದು’ಡೆವಿಲ್’ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ಬೆಂಗಳೂರು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಡೆವಿಲ್ ಸಿನಿಮಾ ಚಿತ್ರೀಕರಣ ಮಾಡಲಾಗುಗಿದ್ದು ಇದೀಗ ಈ ಚಿತ್ರದ ಚಿತ್ರೀಕರಣಕ್ಕೆಂದು ವಿದೇಶಕ್ಕೆ ಹಾರಬೇಕಿರುವ ದರ್ಶನ್ಗೆ ಹಲವಾರು ವಿಘ್ನನಗಳಿದ್ದವು. ಆದರೆ ಆ ವಿಘ್ನಗಳೆಲ್ಲ ದೂರವಾಗಿ ಡೆವಿಲ್ ಸಿನಿಮಾದ ಚಿತ್ರೀಕರಣಕ್ಕೆಂದು ವಿದೇಶಕ್ಕೆ ಹಾರಲೆಂದು ಅನುಮತಿ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಯೆಸ್..ಡೆವಿಲ್ ಸಿನಿಮಾದ ಚಿತ್ರೀಕರಣವನ್ನು ವಿದೇಶದಲ್ಲಿ ಚಿತ್ರಿಸಲೆಂದು ನಿರ್ದೇಶಕ ಪ್ರಕಾಶ್ ವೀರ್ ತೀರ್ಮಾನಿಸಿದ್ದಾರೆ. ಅದರಂತೆ ನಟ ದರ್ಶನ್ ಅವರನ್ನು ಕೂಡ ವಿದೇಶಕ್ಕೆ ಕರೆದುಕೊಂಡು ಹೋಗಬೇಕಾದ ಅವಶ್ಯಕತೆ ಇದ್ದು, ಜಾಮೀನು ಮೇಲೆ ಹೊರ ಬಂದಿರುವ ದರ್ಶನ್ ಅವರಿಗೆ ಕೋರ್ಟ್ ಮೂಲಕ ವಿದೇಶಕ್ಕೆ ಹೋಗುವ ಪರ್ಮಿಷನ್ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕಾಟೇರನಿಗೆ ಬಿಗ್ ರಿಲೀಫ್!
ಇನ್ನು ದರ್ಶನ್ ಗೆ ನ್ಯಾಯಾಲಯದಿಂದ ಅಗತ್ಯ ಅನುಮತಿಗಳನ್ನು ಪಡೆದ ನಂತರ, ಚಿತ್ರತಂಡ ಜುಲೈನಲ್ಲಿ ಯುರೋಪ್ಗೆ ತೆರಳಲಿದೆ.
