ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಐಪಿಎಲ್ ಮ್ಯಾಚ್ ನೋಡುತ್ತಾ ಪಾಪ್ಕಾರ್ನ್ ತಿನ್ನುತ್ತಾ, ಸಮೋಸ ತಿನ್ನುತ್ತಾ ಸಮಯ ಕಳೆಯಲು ಆಗುತ್ತದೆ. ಆದರೆ ನೀತಿ ಆಯೋಗದ ಸಭೆಯಲ್ಲಿ ಭಾಗಿಯಾಗಲು ಸಿದ್ದರಾಮಯ್ಯ ಅವರಿಗೆ ಸಮಯವಿಲ್ಲವೆಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಟೀಕಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರಿಗೆ ವಿಜಯನಗರದಲ್ಲಿ ಸಮಾವೇಶ ನಡೆಸಲು ಸಮಯವಿದೆ, ರಾಜಸ್ತಾನದಲ್ಲಿ ಅಯೋಜಿಸಿದ ಕಾಂಗ್ರೆಸ್ ಸಭೆಯಲ್ಲಿ ಪಾಲ್ಗೊಳ್ಳಲು ಸಮಯವಿದೆ, ದೆಹಲಿಗೆ ಹೋಗಿ ಸೋನಿಯ ಮತ್ತು ರಾಹುಲ್ ಗಾಂಧಿಯವರನ್ನು ಭೇಟಿಯಾಗಲು 2-3 ದಿನ ಕಾಯುವಷ್ಟು ಸಮಯವಿದೆ, ಆದರೆ ಪ್ರಧಾನ ಮಂತ್ರಿಯವರು ಕರೆದ ನೀತಿ ಆಯೋಗದ ಸಬೆಯಲ್ಲಿ ಪಾಲ್ಗೊಳ್ಳಲು ಇವರಿಗೆ ಸಮಯವಿಲ್ಲ ಎಂದು ಗೇಲಿ ಮಾಡಿದ್ದಾರೆ. ಇದನ್ನೂ ಓದಿ: ಆರ್ ಅಶೋಕ & ವಿಜಯೇಂದ್ರ ಅಸಮರ್ಥರು: ಡಿಕೆ ಸುರೇಶ್
ಪ್ರಧಾನಿ ನರೇಂದ್ರ ಮೋದಿ ಅವರ ಕರೆದ ಸಭೆಗೆ ಹಾಜರಾಗದೆ ಇರಲು ಹಲವಾರು ಅನುಮಾನಗಳು ಸೃಷ್ಟಿಯಾಗಿವೆ. ಕೇವಲ ಕಾಂಗ್ರೆಸ್ ಸಮಾವೇಶ ಹಾಗೂ ಕಾಂಗ್ರೆಸ್ ಕಾರ್ಯಕ್ರಮಗಳಿಗೆ ಮಾತ್ರ ಸಿಎಂ ಸಿದ್ದರಾಮಯ್ಯ ಅವರಿಗೆ ಸಮಯವಿರುತ್ತದೆ. ಆದರೆ ಒಬ್ಬ ದೇಶದ ಪ್ರಧಾನಿ ಕರೆದ ಸಭೆಗೆ ಹಾಜರಾಗಲು ಇವರ ಹತ್ತಿರ ಸಮಯವಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
