ಬೆಂಗಳೂರು: ಕರ್ನಾಟಕ ರಾಜ್ಯದ ಬಹುನಿರೀಕ್ಷಿತ ಸಿ ಇ ಟಿ ಪರೀಕ್ಷೆ ಫಲಿತಾಂಶ ಇಂದು (ಶನಿವಾರ ಮೇ 24) ರಂದು ಪ್ರಕಟವಾಗಿದ್ದು ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ವಿವರವನ್ನು ಪ್ರಕಟಿಸಿದ್ದಾರೆ.
ಇನ್ನು ಸಿಇಟಿ ಪರೀಕ್ಷೆಗೆ 3.30 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ್ದರು. ಆ ಪೈಕಿ 3,11,000 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಹಾಜರಾಗಿದ್ದರು ಎಂದು ಸಚಿವ ಸುಧಾಕರ್ ಹೇಳಿದರು. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಕೊರೊನಾ ಅಬ್ಬರ
ಕರ್ನಾಟಕ ಚೈತನ್ಯ ಟೆಕ್ನೋ ಸ್ಕೂಲ್ನ ವಿದ್ಯಾರ್ಥಿ ಭವೇಶ್ ಜಯಂತಿ ಅವರು ಶೇಕಡಾ 99.06ರಷ್ಟು ಅಂಕದೊಂದಿಗೆ ಇಂಜಿನಿಯರಿಂಗ್ನಲ್ಲಿ ಮೊದಲ Rank ಪಡೆದಿದ್ದಾರೆ. ಸಾತ್ವಿಕ್ ಬಿ. ಬಿರಾದರ್ ಅವರು ಶೇಕಡಾ 98.83 ಅಂಕದೊಂದಿಗೆ 2ನೇ Rank ಗಳಿಸಿದ್ದಾರೆ.
