ನೆಲಮಂಗಲ: ರಾಜ್ಯದಲ್ಲಿ ಕಳೆದ ವಾರದಿಂದ ಭಾರಿ ಮಳೆ ಆಗುತ್ತಿದ್ದು, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಂತೂ ಮಳೆಯಿಂದ ಅವಾಂತರಗಳೇ ಸೃಷ್ಟಿಯಾಗಿದ್ದು ಮಳೆ ನೀರು ಮನೆಗೆ ನುಗ್ಗಿ ಸಾರ್ವಜನಿಕರ ಜೀವನವೇ ಕಷ್ಟಕರವಾಗಿದೆ. ಬಾರಿ ಮಳೆಯಿಂದಾಗಿ ನಗರದ ರಸ್ತೆಗಳೆಲ್ಲ ಗುಂಡಿ ಬಿದ್ದಿದ್ದು ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ನಟಿ ಲೀಲಾವತಿಯವರ ಪುತ್ರ ವಿನೋದ್ ರಾಜಕುಮಾರ್ ಅವರು ಈಗಾಗಲೇ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಅವರು, ಮಳೆಯಿಂದಾಗಿ ಬಿದ್ದಿರುವ ರಸ್ತೆ ಗುಂಡಿಗಳನ್ನು ಸ್ವಂತ ಅವರ ದುಡ್ಡಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಮಹದೇವಪುರಕ್ಕೆ ಸಿಎಂ, ಡಿಸಿಎಂ ಭೇಟಿ
ಹೌದು, ನೆಲಮಂಗಲ ದೊಡ್ಡಬಳ್ಳಾಪುರ ರಸ್ತೆ ಗುಂಡಿ ಬಿದ್ದಿದೆ. ನಟ ವಿನೋದ್ ರಾಜ್ ಸ್ವತಃ ಗುಂಡಿ ರಿಪೇರಿ ಕಾರ್ಯಕ್ಕೆ ಇಳಿದಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸ್ವಂತ ಹಣದಿಂದ ರಸ್ತೆ ಗುಂಡಿ ಮುಚ್ಚಿಸಿರುವ ಲೀಲಾವತಿ ಪುತ್ರಕ್ಕೆ ಕಾರ್ಯಕ್ಕೆ ಸ್ಥಳೀಯರು ಸಲಾಂ ಎಂದಿದ್ದಾರೆ.
