ಬೆಂಗಳೂರು: ಒಂದು ಕಡೆ ಇಂದು ಕಾಂಗ್ರೆಸ್ ಪಕ್ಷವು 2ನೇ ವರ್ಷದ ಸಾಧನಾ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇನ್ನೊಂದು ಕಡೆ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಚಲವಾದಿ ನಾರಾಯಣಸ್ವಾಮಿ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವಂತಹ ಎಂ ಸತೀಶ್ ರೆಡ್ಡಿ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಆರೋಪ ಮಾಡುತ್ತಿದ್ದಾರೆ.
ಬೆಂಗಳೂರು ನಗರದಲ್ಲಿ ಭಾರಿ ಮಳೆಯಿಂದಾಗಿ ರಸ್ತೆ ಗುಂಡಿಗಳೆಲ್ಲ ಕೆರೆಗಳಂತಾಗಿದ್ದು ರಸ್ತೆಗಳನ್ನೇ ಸರಿ ಮಾಡದ ಸರ್ಕಾರ ಇದೀಗ ಎರಡು ವರ್ಷದ ಸಾಧನ ಸಮಾರಂಭ ಮಾಡುತ್ತಿರುವುದು ಯಾವ ನ್ಯಾಯ ಎಂದು ಆರ್ ಅಶೋಕ್ ಅವರು ಪ್ರಶ್ನಿಸಿದ್ದಾರೆ.
ಸಿಲ್ಕ್ ಬೋರ್ಡ್ ನಲ್ಲಿ ಇಂದು (ಮಂಗಳವಾರ ಮೇ 20) ರಂದು ಮಳೆಯಿಂದಾಗಿರುವ ಅನಾಹುತಗಳನ್ನು ಕುದ್ದು ಪರಿಶೀಲನೆ ಮಾಡಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಆರ್ ಅಶೋಕ್ ಅವರು, ಬೆಂಗಳೂರು ನಗರದಲ್ಲಿ ಸಾವಿರಾರು ರಸ್ತೆ ಗುಂಡಿಗಳಿದ್ದರೂ ಕಾಂಗ್ರೆಸ್ ಪಕ್ಷವು ಕಣ್ಣುಮುಚ್ಚಿ ಕುಳಿತಿದ್ದು, ಕೇವಲ ಗ್ಯಾರಂಟಿ ಯೋಜನೆಗಳಗೋಸ್ಕರ ದುಡ್ಡು ಸುರಿದು ಇದೀಗ ಯಾವುದೇ ಕಾಮಗಾರಿ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಬೆಂಗಳೂರು ನಗರದಲ್ಲಿರುವ ರಾಜ ಕಾಲುವೆ ಅಭಿವೃದ್ಧಿಗೆಂದು 1600 ಕೋಟಿ ಬಿಡುಗಡೆ ಮಾಡಿದ್ದರೂ ಕೂಡ ಅದನ್ನು ಕಾಂಗ್ರೆಸ್ನವರು ನುಂಗಿ ನೀರು ಕುಡಿದಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೂ ಹಾಗೂ ಡಿಕೆ ಶಿವಕುಮಾರ್ ಅವರಿಗೆ ನಾನು ಓಪನ್ ಚಾಲೆಂಜ್ ಮಾಡುತ್ತೇನೆ ಎನ್ನುವ ಮೂಲಕ, ಕಳೆದ ಎರಡು ವರ್ಷದಿಂದ ರಾಜ್ಯದಲ್ಲಿ ಯಾವೆಲ್ಲ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡಿದ್ದೀರಿ? ಕೇವಲ ಅಭಿರುದ್ದಿ ಕೆಲಸದಲ್ಲಿ ಲೂಟಿ ಮಾಡಲು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಗುಡುಗಿದರು. ಇದನ್ನೂ ಓದಿ: ಭಾರಿ ಮಳೆ; ಆತಂಕ ಬೇಡ ಮುನ್ನೆಚ್ಚರಿಕೆಯ ಕ್ರಮವಹಿಸಿ: ಎಂ ಸತೀಶ್ ರೆಡ್ಡಿ
ರಸ್ತೆ ಕಾಮಗಾರಿಗಳನ್ನು ಮಾಡದೆ, ಚರಂಡಿ ಕಾಮಗಾರಿಗಳನ್ನು ಮಾಡದೆ ಕೇವಲ ಸುರಂಗ ಮಾರ್ಗ ಮಾಡುತ್ತೇನೆಂದು ಕೋಟಿಗಟ್ಟಲೆ ದುಡ್ಡು ವೆಚ್ಚ ಮಾಡುತ್ತಿರುವ ಸ್ವಾಮಿ ಕಾಂಗ್ರೆಸ್ಸಿದರೆ.. ಬೆಂಗಳೂರು ನಗರದಲ್ಲಿ ರಸ್ತೆ ರಸ್ತೆಗಳಲ್ಲಿಯೇ ಸುರಂಗ ಮಾರ್ಗ ಬಿದ್ದಿವೆ ಅವುಗಳನ್ನು ಮೊದಲು ಸರಿಪಡಿಸಿ, ರಸ್ತೆಗಳ ಸುರಂಗ ಮಾರ್ಗಗಳಿಂದ ಮಳೆ ನೀರು ಇಂದು ಮನೆಗೆ ನೀಗ್ಗುತ್ತಿದೆ ಮೊದಲು ರಸ್ತೆಗಳಲ್ಲಿ ಬಿದ್ದಿರುವ ಸುರಂಗಗಳನ್ನು ಮುಚ್ಚಿಸಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದರು.
