ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕಳೆದ ಎರಡು ದಿನದಿಂದ ಭಾರಿ ಮಳೆಯಾಗುತ್ತಿದ್ದು ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ಭಾರಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ.
ಹೌದು,ಬೆಂಗಳೂರಿ ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ನಗರದ ಕೆಲವು ಕಡೆಗಳಲ್ಲಿ ಮಳೆ ನೀರು ಮನೆಗೆ ನುಗ್ಗಿದ ಕಾರಣ ನಗರದ ಜನರು ಹೈರಾಣರಾಗಿದ್ದಾರೆ.
ಭಾನುವಾರ (ಮೇ 18) ರಾತ್ರಿ ಸುರಿದ ಮಳೆಯಿಂದಾಗಿ ಎಚ್ಎಸ್ಆರ್ ಲೇಔಟ್ ಸೇರಿದಂತೆ ಇನ್ನೂ ಹಲವಾರು ಕಡೆ ಮನೆಗಳಿಗೆ ನೀರು ನುಗ್ಗಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ.
ಇನ್ನುಮಳೆ ನೀರಿನ ಹೊಳೆತಕ್ಕೆ ಸಿಸಿಬಿ ಕಚೇರಿ ಮುಳುಗಡೆ ಆಗಿದೆ. ಕಚೇರಿ ಆವರಣದಲ್ಲಿ ಕೆರೆಯಂತ ಪರಿಸ್ಥಿತಿ ನಿರ್ಮಾಣ ಆಗಿದೆ. ಕಚೇರಿ ಮುಂಭಾಗದ ರಸ್ತೆ ತುಂಬಾ ಚರಂಡಿ ನೀರು ಮತ್ತು ಮೋರಿ ನೀರು ನಿಂತಿದೆ. ಸಿಸಿಬಿ ಕಛೇರಿ ಒಳಗಡೆ ಮಳೆ ನೀರು ನುಗ್ಗಿದ್ದು, ಗ್ರೌಂಡ್ ಫ್ಲೋರ್ ನಲ್ಲಿ ಮಳೆ ನೀರು ನುಗ್ಗಿ ದಾಖಲೆಗಳು ಹಾನಿಯಾಗಿದೆ.
ಗ್ರೌಂಡ್ ಫ್ಲೋರ್ ನಲ್ಲಿರುವ ಸುಮಾರು 8 ಕ್ಕೂ ಹೆಚ್ಚು ರೋಮ್ ಗಳಲ್ಲಿರೋ ಕೇಸ್ ಫೈಲ್ ಗಳ ನಾಶವಾಗಿದೆ. ಅಷ್ಟೇ ಅಲ್ಲದೆ, ರಾತ್ರಿಯಿಡೀ ಮಳೆ ಸುರಿದಿದೆ. ಶನಿವಾರ ರಾತ್ರಿ ಸುರಿದಿದ್ದ ಮಳೆಗೆ ರಸ್ತೆಗಳಲ್ಲಿ ಗುಂಡಿಗಳು ಬಾಯ್ತೆರೆದಿದ್ದವು.
ಒಟ್ಟಿನಲ್ಲಿ ಅದೇನೆ ಆಗಲಿ ಮಳೆರಾಯನ ಆರ್ಭಟದಿಂದ ಬೆಂಗಳೂರು ಜನರ ಜೀವನವಂತು ಅಲ್ಲೋಲಕಲ್ಲೋಲವಾಗಿದ್ದು ಮಳೆ ನೀರಿನಿಂದ ಮನೆಗೆ ನುಗ್ಗಿದ ನೀರಿನಿಂದ ಜನ ನೀರು ಹೊರಹಾಕಲು ಹರ ಸಾಹಸ ಪಡುವಂತಾಗಿದೆ.
