ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಧಂಪುರಕ್ಕೆ ಭೇಟಿ ನೀಡಿ, ಧೀರ ವಾಯು ಯೋಧರು ಹಾಗೂ ಸೈನಿಕರನ್ನು ಭೇಟಿ ಮಾಡಿದ್ದರು. “ ಧೈರ್ಯ, ದೃಢ ಸಂಕಲ್ಪ ಮತ್ತು ನಿರ್ಭಯತೆಯನ್ನು ಸಾರುವವರೊಂದಿಗೆ ಸಮಯ ಕೆಳದಿದ್ದು ಬಹಳ ವಿಶೇಷ ಅನುಭವವಾಗಿತ್ತು’’ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಮಂತ್ರಿ ತಮ್ಮ ಸಾಮಾಜಿಕ ಜಾಲತಾಣ X ನಲ್ಲಿ “ಇಂದು ಬೆಳಿಗ್ಗೆ, ನಾನು ಅಧಂಪುರದ ಎಎಫ್‌ಎಸ್ ಗೆ ಹೋಗಿ ನಮ್ಮ ಧೀರ ವಾಯು ಯೋಧರು ಮತ್ತು ಸೈನಿಕರನ್ನು ಭೇಟಿಯಾದೆ. ಧೈರ್ಯ, ದೃಢಸಂಕಲ್ಪ ಮತ್ತು ನಿರ್ಭಯತೆಯನ್ನು ಸಾರುವವರೊಂದಿಗೆ ಕಾಲ ಕಳೆದದ್ದು ಬಹಳ ವಿಶೇಷ ಅನುಭವವಾಗಿತ್ತು. ನಮ್ಮ ರಾಷ್ಟ್ರಕ್ಕಾಗಿ ಎಲ್ಲವನ್ನೂ ಮಾಡುವ ನಮ್ಮ ಸಶಸ್ತ್ರ ಪಡೆಗಳಿಗೆ ಭಾರತವು ಎಂದೆಂದಿಗೂ ಕೃತಜ್ಞವಾಗಿರುತ್ತದೆ”
“ಅಧಂಪುರ ಎಎಫ್‌ಎಸ್ ಗೆ ನನ್ನ ಭೇಟಿಯ ಕೆಲವು ಚಿತ್ರಣಗಳನ್ನು ಹಂಚಿಕೊಳ್ಳುತ್ತಿದ್ದೇನೆ’’ ಎಂದು ಹೇಳಿದ್ದಾರೆ.
