ಶಹಾಪುರ: ನಗರದ ಜೀವೇಶ್ವರ ಬಡಾವಣೆಯಲ್ಲಿ ಹಾಡುಹಗಲೇ ಕಳ್ಳರು ತಮ್ಮ ಕೈಚಳಕ ತೋರಿಸಿ ಬಂಗಾರ, ಬೆಳ್ಳಿ ಕಳ್ಳತನ ಮಾಡಿ ಪರಾರಿಯಾಗಿದ್ದು ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಐ ಎಸ್.ಎಮ್ ಪಾಟೀಲ್ ಅವರು ಮನೆಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಮನೆಯ ಮಾಲೀಕರಾದ ಚಂದ್ರಕಾಂತ ಚಿಲ್ಲಾಳ ಅವರು ಟೇಲರಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು ನಿತ್ಯದಂತೆ ಕೆಲಸಕ್ಕೆಂದು ತಮ್ಮ ಅಂಗಡಿಗೆ ತೆರಳಿದ್ದಾರೆ. ಮೇ.3 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಪತ್ನಿಯು ತನ್ನ ಸೊಸೆಯರೊಂದಿಗೆ ತರಕಾರಿ ತರಲು ಮಾರ್ಕೆಟ್ಗೆ ಹೋಗಿದ್ದಾರೆ. ಮನೆಗೆ ಬಂದು ನೋಡುವಷ್ಟರಲ್ಲಿ ಮನೆಯ ಬೆಡ್ರೂಮ್ ನಲ್ಲಿದ್ದ ಟ್ರಿಜರಿ ಬಾಗಿಲನ್ನು ಮುರಿದು ಬೆಳ್ಳಿ ಆರತಿ ತಟ್ಟೆ, ದೇವರ ಮೂರ್ತಿಗಳು ಸೇರಿ 30 ಗ್ರಾಮೀನ ಬಂಗಾರದ ಜೈನ್ , 10 ಗ್ರಾಂ ಬಂಗಾರ ಬೆಂಡೊಲೆ, 10 ಗ್ರಾಮಿನ ಕಿವಿ ಓಲೆ, 300 ಗ್ರಾಮಿನ ಬೆಳ್ಳೆ ಸಾಮಾನು, ಒಟ್ಟು 2 ಲಕ್ಷ 80 ಸಾವಿರ ರೂ. ಮೌಲ್ಯದ ಬಂಗಾರ, ಬೆಳ್ಳಿ ಸಾಮಾನ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಕೂಡಲೇ ಕಳ್ಳರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಹೆಚ್ಚಿದ ಕಳ್ಳತನ ಪ್ರಕರಣ
ತಾಲೂಕಿನಲ್ಲಿ ನಾನಾ ರೀತಿಯಲ್ಲಿ ಕಳ್ಳತನ ಮತ್ತು ಅಪರಾಧ, ವಂಚನೆ ಪ್ರಕರಣಗಳು ವರದಿಯಾಗುತ್ತಿದ್ದು, ಹೊರ ರಾಜ್ಯಗಳ ಕಳ್ಳರು ಇಲ್ಲಿ ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಸಾಮಾನ್ಯವಾಗಿ ಯಾರು ಇಲ್ಲದ ಒಂಟಿ ಮನೆಗಳ ಕಳ್ಳತನ ಆಗುವುದು ಸಾಮಾನ್ಯ ಆದರೆ ಹಾಡುಹಗಲೇ ಬೀಗ ಮುರಿದು ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಕಳೆದ ಒಂದು ವಾರದ ಹಿಂದಷ್ಟೇ ರಾಜಸ್ಥಾನ ಮೂಲದ ನಾಲ್ವರು ಕಳ್ಳರು, ಮತ್ತು ಮನೆಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಪಿಐ ಎಸ್.ಎಂ ಪಾಟೀಲ್ ಅವರು ಫೀಲ್ಡೀಗಿಳಿದಿದ್ದು ಕಳ್ಳರನ್ನು ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ. ಇದನ್ನೂ ಓದಿ: 23 ನಿಮಿಷದಲ್ಲೇ 70 ಉಗ್ರರ ಉಡೀಸ್
ಕಳ್ಳತನಕ್ಕೊಳಗಾದ ಮನೆಯ ಮಾಲೀಕರಾದ ಚಂದ್ರಕಾಂತ ಚಿಲ್ಲಾಳ ಮತ್ತು ಅವರ ಪತ್ನಿ ಪಾರ್ವತಿ ಅವರು ದಂಪತಿಗಳು ಹಗಲು ರಾತ್ರಿಯೆನ್ನದೇ ಟೇಲರಿಂಗ್ ಕೆಲಸ ಮಾಡಿ ತಮ್ಮ 60 ರ ಇಳಿ ವಯಸ್ಸಿನ ವರೆಗೆ ನಿತ್ಯ ದುಡಿದು ಬಂಗಾರ, ಬೆಳ್ಳಿ ಖರೀದಿಸಿದ್ದು ಕಳ್ಳರು ಹಾಡಹಗಲೇ ಮನೆಯ ಬೀಗ ಮುರಿದು ನುಗ್ಗಿ ಬಂಗಾರ, ಬೆಳ್ಳಿ ವಸ್ತುಗಳನ್ನೆಲ್ಲಾದ ದೋಚಿದ್ದಾರೆ. ಮನೆಗೆ ವಾಪಸ್ ಬಂದಾಗ ಮನೆಯ ಬೀಗ ಮುರಿದಿರುವುದನ್ನು ನೋಡಿ ಆಘಾತಗೊಂಡಿದ್ದಾರೆ. ಕಳ್ಳರು ಪಕ್ಕಾ ಪ್ಲಾನ್ ಮಾಡಿ ಲೂಟಿ ಮಾಡಿದ್ದಾರೆ. ಪೊಲೀಸರು ಕಳ್ಳರನ್ನು ಪತ್ತೆ ಹಚ್ಚಿ ವಸ್ತುಗಳನ್ನು ಮರಳಿಸಿ ಎಂದು ದಂಪತಿಗಳಿಬ್ಬರು ಕಣರು ಹಾಕಿದರು.
