Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಇಂದಿನಿಂದ ಮೇ.17ವರೆಗೆ ಮೊದಲ ಹಂತದಲ್ಲಿ ಪರಿಶಿಷ್ಟ ಜಾತಿಗಳ ಮರು ಸಮೀಕ್ಷೆ
  • Bangalore
  • Front news
  • Politics
  • State

ಇಂದಿನಿಂದ ಮೇ.17ವರೆಗೆ ಮೊದಲ ಹಂತದಲ್ಲಿ ಪರಿಶಿಷ್ಟ ಜಾತಿಗಳ ಮರು ಸಮೀಕ್ಷೆ

admin May 5, 2025 1 minute read
Spread the love

ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಮೇ 17 ರವರೆಗೆ ಮೊದಲ ಹಂತದ ಪರಿಶಿಷ್ಟ ಜಾತಿಗಳ ಮರು ಸಮೀಕ್ಷೆ ಪ್ರಾರಂಭವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚಾಲನೆ ನೀಡಿದ್ದಾರೆ.

ಜಾತಿ ಗಣತಿ ವರದಿ ಬಂದ ನಂತರವೂ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಗೊಂದಲ ಮುಂದುವರೆದಿದೆ. ಹೀಗಾಗಿ ಕೊರಚ-ಕೊರಮ-ಆದಿ ದ್ರಾವಿಡ ಸೇರಿದಂತೆ 101 ಉಪ ಜಾತಿಗಳು ಪರಿಶಿಷ್ಟ ಜಾತಿ ವರ್ಗದಲ್ಲಿ ಸೇರಿವೆ. ಇವುಗಳಲ್ಲಿ ಉಪ ಜಾತಿಗಳ ವರ್ಗೀಕರಣ ಸಮರ್ಪಕವಾಗಿ ನಡೆಯದ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದವರ ಮರು ಸಮೀಕ್ಷೆ ಅಥವಾ ಸಮಗ್ರ ಸಮೀಕ್ಷೆ (ಎಂಪರಿಕಲ್‌ ಡಾಟಾ ಸಂಗ್ರಹ) ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್‌ ಸೇರಿದಂತೆ ಸಚಿವರ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ, ಇವತ್ತಿನಿಂದ ಮೇ.17ವರೆಗೆ ಮೊದಲ ಹಂತದಲ್ಲಿ ಪರಿಶಿಷ್ಟ ಜಾತಿಗಳ ಮರು ಸಮೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು.

ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ನಾಗಮೋಹನ್ ದಾಸ್ ಅಧ್ಯಕ್ಷತೆಯ ಆಯೋಗ ವರದಿ ನೀಡಿದ್ದರೂ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಬಗ್ಗೆ ನಿಖರವಾದ ವರದಿ ಕೊಡಲು ಸಾಧ್ಯವಾಗಿಲ್ಲ. ಆರ್ಟಿಕಲ್ 341 ರ ಪ್ರಕಾರ ಪರಿಶಿಷ್ಟ ಜಾತಿಗಳಲ್ಲಿ ಎಡ- ಬಲ, ಭೋವಿ, ಲಮಾಣಿ, ಕೊರಮ, ಕೊರಚ ಇತರೆ ಜಾತಿಗಳು ಬರುತ್ತವೆ. 101 ಜಾತಿಗಳಲ್ಲಿ ಎಂಫೆರಿಕಲ್ ಡಾಟ ಇಲ್ಲ. ಸುಪ್ರೀಂಕೋರ್ಟ್‌ ಕೂಡ ಒಳ ಮೀಸಲಾತಿ ಕಲ್ಪಿಸಲು ಎಂಫೆರಿಕಲ್ ಡಾಟಾ ಇರಲೇಬೇಕು ಅಂತಾ ಹೇಳಿದೆ. ಇದನ್ನೂ ಓದಿ: ಮಾದಿಗ ಹೋರಾಟ ಸಮಿತಿಗಳ ಸುಧೀರ್ಘ ಹೋರಟದ ಫಲ ಸಿಗಲಿದೆ: ಕೆಹೆಚ್. ಮುನಿಯಪ್ಪ

101 ಜಾತಿಗಳಲ್ಲಿ ಒಳ ಮೀಸಲಾತಿ ಕೊಡಬಹುದಾದರೆ, ನಿರ್ದಿಷ್ಟವಾದ ಅಂಕಿ ಅಂಶ ಬೇಕಾಗುತ್ತೆ. ಅದಕ್ಕಾಗಿ ನಾಗಮೋಹನ್ ದಾಸ್ ಆಯೋಗ ಮತ್ತೊಮ್ಮೆ,ಇವತ್ತಿನಿಂದ 17 ನೇ ತಾರೀಕಿನವರೆಗೆ ಮನೆ‌ಮನೆಗೆ ಹೋಗಿ ಎಂಫಿರಿಕಲ್ ಡಾಲಾ ಕಲೆಕ್ಟ್ ಮಾಡಲಿದೆ. ಸುಮಾರು 65 ಸಾವಿರ ಶಿಕ್ಷಕರನ್ನು ಸಮೀಕ್ಷೆಗೆ ನೇಮಕ ಮಾಡಲಾಗಿದೆ. 10-12 ಜನ ಶಿಕ್ಷಕರಿಗೆ ಒಬ್ಬ ಮೇಲ್ವಿಚಾರಕರು ಇರ್ತಾರೆ. ಮನೆ ಮನೆಗೆ ಹೋಗೋದ್ರ ಜೊತೆಗೆ ಅವರು ಮೊದಲನೆ ಹಂತದಲ್ಲಿ 5-5- 2025 ರಿಂದ 17-5- 2025 ರವರೆಗೆ ಸಮೀಕ್ಷೆ ನಡೆಯುತ್ತೆ. ಮೇ.19ರಿಂದ ಮೇ.23ರವರೆಗೆ 3ನೇ ಹಂತದಲ್ಲಿ ಆನ್‌ ಲೈನ್‌ ಮೂಲಕ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ ವಿಶೇಷ ಶಿಭಿರಗಳನ್ನು ನಡೆಸಿ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ.

 

About the Author

admin

Administrator

Visit Website View All Posts

Spread the love

Post navigation

Previous: ಮಾದಿಗ ಹೋರಾಟ ಸಮಿತಿಗಳ ಸುಧೀರ್ಘ ಹೋರಟದ ಫಲ ಸಿಗಲಿದೆ: ಕೆಹೆಚ್. ಮುನಿಯಪ್ಪ
Next: ರಿಯಲ್ ಸ್ಟಾರ್ ಆರೋಗ್ಯದಲ್ಲಿ ಏರುಪೇರು..!

Views:

26

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.