ಬೆಂಗಳೂರು: ಕ್ರಿಕೆಟ್ ಅಭಿಮಾನಿಗಳು ಇಂದು ಬಹಳ ಕಾತುರದಿಂದ ಕಾಯುತ್ತಿರುವ ದಿನವಾಗಿದ್ದು, ಐಪಿಎಲ್ ಪಂದ್ಯಾವಳಿಯಲ್ಲಿ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಹೈ ವೋಲ್ಟೇಜ್ ಪೈಪೋಟಿ ನಡೆಯಲಿದ್ದು, ಈ ಪಂದ್ಯದಲ್ಲಿ ಯಾವ ತಂಡ ಗೆಲ್ಲುತ್ತದೆ ಎಂಬುದೇ ಕ್ರಿಕೆಟ್ ಅಭಿಮಾನಿಗಳ ಕುತೂಹಲ ಕೆರಳಿಸಿದೆ.
ಈಗಾಗಲೇ 10 ಪಂದ್ಯಗಳಲ್ಲಿ ಏಳು ಪಂದ್ಯವನ್ನು ಗೆದ್ದಿರುವ ಆರ್ಸಿಬಿ ತಂಡವು ಈ ಬಾರಿ ಬಹಳ ಉತ್ಸಾಹದಿಂದ ಆಟವನ್ನು ಆಡುತ್ತಿದ್ದು ಚೆನ್ನೈ ಸೂಪರ್ ಕಿಂಗ್ಸ್ ಮಣಿಸಲು ಇಂದು (ಶನಿವಾರ ಮೇ 03) ಕಣಕ್ಕೆ ಇಳಿಯಲು ಸಜ್ಜಾಗಿದೆ.
ಇನ್ನು ಐಪಿಎಲ್ನ ಬದ್ಧವೈರಿಗಳ ಫೈಟ್ ನೋಡೋಕೆ, ಕ್ರಿಕೆಟ್ ಜಗತ್ತೇ ಕಾತುರದಿಂದ ಕಾಯತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಬ್ಯಾಟಲ್ ಫೀಲ್ಡ್ನಲ್ಲಿ ನಡೆಯಲಿರೋ ಸೌತ್ ಇಂಡಿಯನ್ ಡರ್ಬಿ ಅಭಿಮಾನಿಗಳ ಕುತೂಹಲ ಕೆರಳಿಸಿದೆ.
ಈಗಾಗಲೇ ಹತ್ತು ಪಂದ್ಯಗಳಲ್ಲಿ 7 ಪಂದ್ಯ ಗೆದ್ದು ಪ್ಲೇ ಆಫ್ ಎಂಟ್ರಿಗೆ ತುದಿಗಾಲಿನಲ್ಲಿ ನಿಂತಿರೋ ಆರ್ಸಿಬಿ. ಕೇವಲ 2 ಪಂದ್ಯ ಗೆದ್ದು ಟೂರ್ನಿಯಿಂದ ಹೊರ ಬಿದ್ದಿರೋ ಚೆನ್ನೈ ಸೂಪರ್ ಕಿಂಗ್ಸ್. ಈ ಸೀಸನ್ನಲ್ಲಿ ಡಿಫರೆಂಟ್ ಆಟವಾಡಿರೂ ಎರಡೂ ತಂಡಗಳ ಮುಖಾಮುಖಿಗೆ ವೇದಿಕೆ ಸಜ್ಜಾಗಿದೆ. ಇದನ್ನೂ ಓದಿ: ಭಾರತಕ್ಕೆ ಭರ್ಜರಿ ಜಯ
ತವರಿನ ಹೊರಗೆ ಅಜೇಯ ಓಟ ನಡೆಸ್ತಿರೋ ಆರ್ಸಿಬಿ, ತವರಿನಲ್ಲಿ ಸರಣಿ ಸೋಲಿಗೆ ಫುಲ್ ಸ್ಟಾಫ್ ಇಟ್ಟಿದೆ. ರಾಜಸ್ಥಾನ್ ಎದುರು ಹೋಮ್ಗ್ರೌಂಡ್ನಲ್ಲಿ ಮೊದಲ ಜಯ ಸಾಧಿಸಿರೋ ಬೋಲ್ಡ್ ಆರ್ಮಿಯಲ್ಲಿ ಗೆಲ್ಲೋ ಉತ್ಸಾಹ ಹೆಚ್ಚಿದೆ. ಹ್ಯಾಟ್ರಿಕ್ ಪಂದ್ಯ ಗೆದ್ದಿರುವ ಆತ್ಮವಿಶ್ವಾಸದಲ್ಲಿ ಇಂದು ಚೆನ್ನೈ ಸೂಪರ್ಕಿಂಗ್ಸ್ ವಿರುದ್ಧ ಕಣಕ್ಕಿಳಿತಿರೋ ಆರ್ಸಿಬಿ ಗೆಲುವಿಗೆ ಪಣತೊಟ್ಟಿದೆ.
