ಸಾಮಾನ್ಯವಾಗಿ ಎಲ್ಲರೂ ಊಟ ಮಾಡಿದ ನಂತರ ಹಿಂದಿನ ಕಾಲದಿಂದಲೂ ಸೋಂಪು ಕಾಳನ್ನು ತಿನ್ನೋದು ಸರ್ವೇಸಾಮಾನ್ಯ. ಸೋಂಪು ಕಾಳು ತಿನ್ನುವುದರಿಂದ ಆಹಾರವು ಬೇಗ ಜೀರ್ಣವಾಗುವುದರಿಂದ ಸಾಮಾನ್ಯವಾಗಿ ಎಲ್ಲರೂ ಊಟ ಮಾಡಿದ ನಂತರ ಸೋಂಪು ಕಾಳನ್ನು ಸೇವನೆ ಮಾಡುತ್ತಾರೆ.
ಕೇವಲ ಆಹಾರ ಜೀರ್ಣಕ್ಕೋಸ್ಕರ ಮಾತ್ರ ಸೋಂಪು ಕಾಳು, ಉಪಯೋಗವಾಗದೆ ನಮ್ಮ ದೇಹಕ್ಕೆ ಇನ್ನೂ ಹಲವಾರು ರೀತಿಯ ಔಷಧಿ ಗುಣಗಳನ್ನು ಸೋಂಪುಗಳು ನೀಡುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.
ಹೌದು, ಸೋಂಪು ಕಾಳಿನಲ್ಲಿ ವಿವಿಧ ರೀತಿಯ ಆರೋಗ್ಯಕರ ಲಾಭಗಳಿದ್ದು, ಪ್ರತಿನಿತ್ಯ ಸೋಂಪು ಕಾಳಿನ ನೀರನ್ನು ಕುಡಿಯುವುದರಿಂದ ನಮ್ಮ ಆರೋಗ್ಯದಲ್ಲಿರುವಂತಹ ಹಲವು ಸಮಸ್ಯೆಗಳು ನಿವಾರಿಸಿಕೊಳ್ಳಬಹುದು.
ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಲು 1 ಗ್ಲಾಸ್ ಸೋಂಪು ನೀರನ್ನು ಕೂಡಾ ಸೇವನೆ ಮಾಡಬಹುದು. ಇದರಲ್ಲಿ ವಿಟಮಿನ್ಗಳು, ಕ್ಯಾಲ್ಸಿಯಂ, ಫೈಬರ್, ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಸತುವು ಮುಂತಾದ ಅನೇಕ ಪೋಷಕಾಂಶಗಳಿದ್ದು, ಇದು ಅನೇಕ ರೋಗಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
ಬೇಸಿಗೆಯಲ್ಲಿ ಸೋಂಪು ನೀರು ಕುಡಿಯುವುದರಿಂದ ದೇಹವು ತಂಪಾಗುತ್ತದೆ. ಸೋಂಪು ತಂಪಾಗಿಸುವ ಪರಿಣಾಮವನ್ನು ಹೊಂದಿದ್ದು, ಇದು ದೇಹವನ್ನು ಒಳಗಿನಿಂದ ತಂಪಾಗಿಡಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ಹೊಟ್ಟೆಯ ಉಷ್ಣತೆ ಮತ್ತು ಕಿರಿಕಿರಿಯನ್ನು ಶಮನಗೊಳಿಸುತ್ತದೆ.
ಬೇಸಿಗೆಯಲ್ಲಿ ಸೋಂಪು ನೀರನ್ನು ಸೇವಿಸುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರಲ್ಲಿ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕ ಅಂಶ ಹೆಚ್ಚಿನ ಪ್ರಮಾಣದಲ್ಲಿದ್ದು, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಖರ್ಜೂರ ಸೇವನೆ ಮಾಡುವುದರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ?
ಬೇಸಿಗೆಯಲ್ಲಿ ಸೋಂಪು ನೀರನ್ನು ಕುಡಿಯುವುದು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಕೂಡಾ ಪ್ರಯೋಜನಕಾರಿ. ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳಂತಹ ಅಂಶಗಳು ಸೋಂಪುಕಾಳಿನಲ್ಲಿದ್ದು, ಇದು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಸೋಂಪು ಕಾಳಿನಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್ ಇದ್ದು, ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ತೂಕ ಇಳಿಸಿಕೊಳ್ಳಲು ಬಯಸಿದರೆ, ಸೋಂಪು ನೀರು ನಿಮಗೆ ತುಂಬಾ ಪ್ರಯೋಜನಕಾರಿ. ಇದರ ಸೇವನೆಯಿಂದ ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚುತ್ತದೆ. ಇದು ದೇಹದಲ್ಲಿ ಸಂಗ್ರಹವಾಗುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
