ಕಾಶ್ಮೀರನ್ನು ನೋಡಲು ವಿವಿಧ ರಾಜ್ಯಗಳಿಂದ ಹಿಡಿದು ವಿವಿಧ ದೇಶಗಳಿಂದ ಪ್ರವಾಸಿಗರು ಬಂದು ತಮ್ಮ ಕಣ್ಣು ತಪ್ಪು ಮಾಡಿಕೊಂಡು ಬಿಡುವಿನ ದಿನಗಳಲ್ಲಿ ಕಾಶ್ಮೀರದಲ್ಲಿ ಪ್ರವಾಸ ಕೈಗೊಂಡು ನೆಮ್ಮದಿಯ ದಿನಗಳನ್ನು ಕಳೆಯುತ್ತಾರೆ.
ಕುಟುಂಬದವರ ಜೊತೆಯಲ್ಲಿ ನೆಮ್ಮದಿ ದಿನಗಳನ್ನು ಕಳೆಯುತ್ತಿರುವ ಸಂದರ್ಭದಲ್ಲಿ ಉಗ್ರರು ಏಕಾಏಕಿ ದಾಳಿ ಮಾಡಿರುವುದರಿಂದ ಅದೆಷ್ಟೋ ಕುಟುಂಬಗಳು ಇಂದು ತಮ್ಮ ಕುಟುಂಬದವರನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ.
ಇನ್ನು ಕಾಶ್ಮೀರದಲ್ಲಿ ದಾಳಿ ನಡೆಸಿರುವ ಉಗ್ರರ ಫೋಟೋಗಳು ಇದೀಗ ವೈರಲ್ ಆಗಿದ್ದು ಕೈಯಲ್ಲಿ ಗನ್ ಹಿಡಿದಿರುವ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿವೆ. ಇದನ್ನೂ ಓದಿ: 3 ಪ್ರಾಣಪಕ್ಷಿ ಹಾರಿಸಿದ ಉಗ್ರರು 40 ಮಂದಿ ಕನ್ನಡಿಗರು ಸಂಕಷ್ಟದಲ್ಲಿ
ಭಯಾನಕ ದಾಳಿಯ ಓರ್ವ ಭಯೋತ್ಪಾದಕನ ಫೋಟೋ ವೈರಲ್ ಆಗುತ್ತಿದ್ದಂತೆ ಮತ್ತೆ 4 ಶಂಕಿತ ಉಗ್ರರ ಫೋಟೋ ರಿಲೀಸ್ ಆಗಿದೆ. ಕೈಯಲ್ಲಿ ಗನ್ ಹಿಡಿದು ಭೀಕರ ಕೃತ್ಯ ನಡೆಸುತ್ತಿರೋ ಭಯೋತ್ಪಾದಕರ ಫೋಟೋ ಇದಾಗಿದೆ.
ಪಹಲ್ಗಾಮ್ನಲ್ಲಿ ನಡೆದ ಉಗ್ರರು ದಾಳಿಯಲ್ಲಿ 26 ಪ್ರವಾಸಿಗರು ಜೀವ ಕಳೆದುಕೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
