ಬೆಂಗಳೂರು: ಮುತ್ತಪ್ಪ ರೈ ಅವರು ಬದುಕಿದ್ದಾಗ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ಕೂಡ ಮುತ್ತಪ್ಪ ರೈಯವರ ಗುಂಡಿನ ಸದ್ದು ಕೇಳುತ್ತಿತ್ತು. ಆದರಿಗ ವಿಧಿ ಆಟಾನೋ ಏನೋ ಗೊತ್ತಿಲ್ಲ ಅವರ ಪುತ್ರ ರಿಕ್ಕಿ ರೈ ಅವರುಗೆ ಗುಂಡು ತಗುಲಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದಾರೆ.
ಇನ್ನು ರಿಕ್ಕಿ ರೈ ಅವರಿಗೆ ಗುಂಡು ತಗಲಿದ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕಂತಾಗಿದೆ. ಹೌದು, ಮುತ್ತಪ್ಪ ರೈ ಅವರ ಮಗ ರಿಕ್ಕಿ ರೈ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಕ್ಕಿ ರೈ ಅವರ ಗನ್ ಮ್ಯಾನ್ ಗಳನ್ನು ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸಿದ ವೇಳೆ ಬಿಗ್ ಟ್ವಿಸ್ಟ್ ಒಂದು ಸಿಕ್ಕಂತಾಗಿದೆ. ಇದನ್ನೂ ಓದಿ: ನಿವೃತ್ತ DGP ಹತ್ಯೆ ಪ್ರಕರಣ: ಪತ್ನಿ ಅಂದರ್!
ಬಿಡದಿ ಠಾಣೆ ಪೊಲೀಸರು, ಮನ್ನಪ್ಪ ವಿಠ್ಠಲ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸ್ವಯಂ ದಾಳಿ ಮಾಡಿಸಿಕೊಂಡು ಇಕ್ಕಟ್ಟಿಗೆ ಸಿಲುಕಿದ್ನಾ ರಿಕ್ಕಿ ರೈ ಎಂಬ ಅನುಮಾನ ಪೊಲೀಸರಿಗೂ ಮೂಡಿದೆ. ರಿಕ್ಕಿ ರೈಗೆ ಮೂವರು ಗನ್ ಮ್ಯಾನ್ಗಳಿದ್ದು, ತನಿಖೆ ವೇಳೆ ಮೂವರು ವಿಭಿನ್ನ ಹೇಳಿಕೆ ನೀಡಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ. ಹೀಗಾಗಿ ರಿಕ್ಕಿ ರೈ ಗನ್ಮ್ಯಾನ್ಗಳ ಮೇಲೆ ಪೊಲೀಸರಿಗೆ ಅನುಮಾನ ಮೂಡಿದೆ ಎನ್ನಲಾಗಿದೆ.
ಅಷ್ಟೇ ಅಲ್ಲ ಪ್ರಕರಣವನ್ನು ಡೈವರ್ಟ್ ಮಾಡಲು, ಮತ್ತಪ್ಪ ರೈ 2ನೇ ಪತ್ನಿ ಅನುರಾಧ, ರಾಕೇಶ್ ಮಲ್ಲಿ ಸೇರಿದಂತೆ ನಾಲ್ವರ ವಿರುದ್ಧ ದೂರು ಕೊಟ್ಟರೇ ಎಂಬ ಶಂಕೆ ಪೊಲೀಸರಿಗೆ ಮೂಡಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ, ರಿಕ್ಕಿ ರೈ ಮನೇಲಿಯಲ್ಲಿನ ಗನ್ ಹಾಗೂ ಬುಲೆಟ್ಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ತನಿಖಾಧಿಕಾರಿಗಳಿಗೆ ಮಹತ್ವದ ಸುಳಿವು ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.
