Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ನೀರು ಬಿಡಿಸಿ ಇಲ್ಲವೇ ಸಚಿವರು, ಶಾಸಕರುಗಳು ರಾಜೀನಾಮೆ ಕೊಡಿ..
  • Front news
  • State

ನೀರು ಬಿಡಿಸಿ ಇಲ್ಲವೇ ಸಚಿವರು, ಶಾಸಕರುಗಳು ರಾಜೀನಾಮೆ ಕೊಡಿ..

admin April 1, 2025 1 minute read
Spread the love

ಶಹಾಪುರ: ನಾರಾಯಣಪುರದ ಬಸವಸಾಗರ ಜಲಾಶಯದಿಂದ ನಾರಾಯಣಪುರ ಎಡದಂಡೆ ಮತ್ತು ಬಲದಂಡೆ ಕಾಲುವೆಗೆ ಏ.15 ರವರೆಗೆ ನಿರಂತರವಾಗಿ ನೀರು ಹರಿಸುವ ಮೂಲಕ ರೈತರ ಬೆಳಗಳನ್ನು ಸರಕಾರ ರಕ್ಷಿಸಬೇಕು, ಇಲ್ಲವೇ ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರಗಳು ರಾಜೀನಾಮೆ ಕೊಡಬೇಕು ಎಂದು ಸುರಪುರ ಮಾಜಿ ಶಾಸಕ ರಾಜುಗೌಡ ಹೇಳಿದರು.

ಭೀಮರಾಯನಗುಡಿಯಲ್ಲಿ ಅನ್ನದಾತರು, ಕನ್ನಡಪರ ಸಂಘಟನೆಗಳು ಜಂಟಿಯಾಗಿ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಶಾಸಕರುಗಳು ಒಟ್ಟಾಗಿ ಹೋಗಿ ರೈತರ ಹಿತಕ್ಕಾಗಿ ಕಾಲುವೆಗೆ ನೀರು ಹರಿಸಲು ಸರ್ಕಾರಕ್ಕೆ ಬೇಡಿಕೆ ಇಟ್ಟು ರೈತರಿಗೆ ನೀರು ಕೊಡಿಸುವ ಕೆಲಸ ಮಾಡಿ ಇಲ್ಲವೇ ರಾಜೀನಾಮೆ ನೀಡಿ.

ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ರೈತ ಪ್ರತಿನಿಧಿಗಳನ್ನು ಕಡೆಗಣಿಸಲಾಗಿದೆ. ಸೂರ್ಯಕಾಂತಿ, ಶೇಂಗಾ, ಹತ್ತಿ, ಸಜ್ಜೆ, ಭತ್ತ ಬೆಳೆಗಾರರು ಕಷ್ಟದಲ್ಲಿದ್ದಾರೆ. ಕೃಷ್ಣ ಅಚ್ಚುಕಟ್ಟು ಪ್ರದೇಶದ ಯಾವೊಬ್ಬ ರೈತರನ್ನು ಸಭೆಗೆ ಆಹ್ವಾನ ನೀಡಿಲ್ಲ. ಕೇವಲ ಜನಪ್ರತಿನಿಧಿಗಳಿಗೆ ಅವಕಾಶ ನೀಡಲಾಗಿದೆ. ಕಾಲುವೆ ನೀರು ಬಂದ್ ಮಾಡಿದ್ದಕ್ಕೆ ಬೆಳೆ ಒಣಗುವ ಸ್ಥಿತಿಗೆ ಬಂದಿವೆ. ಕಾಂಗ್ರೆಸ್ ಸರ್ಕಾರ ತಮ್ಮ ಸ್ವಾರ್ಥ ಸಾಧನೆಗಾಗಿ ನಮ್ಮ ಕತ್ತು ಹಿಸುಕಿ ರಾತ್ರೋರಾತ್ರಿ ತೆಲಂಗಾಣ ರಾಜ್ಯಕ್ಕೆ ನೀರು ಹರಿಸಿದೆ.

ಆಲಮಟ್ಟಿಗೆ ಸಂಭಂಧಿಸಿ 1 ರಿಂದ 6ನೇ ತಾರಿಕಿನ ವರೆಗೆ ನೀರು ಕೊಡುತ್ತಿದ್ದಾರೆ. ನಾರಾಯಣಪುರ ಡ್ಯಾಮಿಗೆ ಸಂಭಂಧಿಸಿದಂತೆ ನೀರು ಕೊಡುತ್ತಿಲ್ಲ. ಈ ಕುರಿತು ಮನವಿ ಮಾಡಿದರೆ ಕುಡಿಯಲು ನೀರಿಲ್ಲ ಎನ್ನುತ್ತಾರೆ. ಹಾಗಿದ್ದರೆ ತೆಲಂಗಾಣಕ್ಕೆ 10 ಟಿಎಂಸಿ ನೀರು ಹೇಗೆ ಬಿಟ್ಟರು ಎಂದು ಆಕ್ರೋಶಭರಿತವಾಗಿ ಪ್ರಶ್ನಿಸಿದರು. ಇದನ್ನೂ ಓದಿ: ಸರ್ಕಾರ ನೀರು ಕೊಟ್ಟಾಗ ಸರಿಯಾಗಿ ಬಳಕೆ ಮಾಡಿಕೊಳ್ಳಿ

ಬಿಜೆಪಿ ಮುಖಂಡ ಅಮೀನರೆಡ್ಡಿ ಯಾಳಗಿ ಮಾತನಾಡಿ, ಬೆಳೆದು ನಿಂತಿರುವ ಬೆಳೆಗಳಿಗೆ ನೀರಿಲ್ಲದೇ ಬೆಳೆಗಳು ಒಣಗುತ್ತಿವೆ. ಬೆಳೆಗಳಿಗೆ ಅಗತ್ಯವಿರುವ ಸಮಯದಲ್ಲಿ ನೀರು ಹರಿಸಬೇಕು. ಕೂಡಲೇ ಕಾಲುವೆಗೆ ನೀರು ಹರಿಸಿ ಸರ್ಕಾರ ಪುಣ್ಯಕಟ್ಟಿಕೊಳ್ಳಿ. ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ರೈತರಾಗಿದ್ದರೆ ಅನ್ನದಾತರ ಕಷ್ಟ ಏನೆಂದು ತಿಳಿಯುತಿತ್ತು. ಹುಟ್ಟುವಾಗಲೇ ಬಂಗಾರದ ಚಮಚ ಇಡುಕೊಂಡು ಹುಟ್ಟಿದ್ದಾರೆ. ಅಂತವರಿಗೆ ರೈತರ ಕಷ್ಟಗಳನ್ನು ಎಷ್ಟು ಬಾರಿ ತಿಳಿಸಿದರು ಅವರಿಗೆ ನಮಗೆ ನೀರು ಸಿಗುವವರೆಗೂ ಹೋರಾಟ ನಿರಂತರವಾಗಿಸುತ್ತದೆ. ಪಕ್ಷಬೇಧ ಮರೆತು ರೈತರ ಹೋರಾಟಕ್ಕೆ ಬೆಂಬಲ ನೀಡಬೇಕು. ಒಂದು ವೇಳೆ ಕಾಲುವೆಗೆ ನೀರು ಬಿಡದೇ ಹೋದರೆ. ಉಸ್ತುವಾರಿ ಮಂತ್ರಿಗಳ ಮನೆಗೆ ಮುತ್ತಿಗೆ ಹಾಕುತ್ತೇವೆ. ಇಂದಿನಿಂದಲೇ ನೀರು ಹರಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಕಾಲಿಗೆ ಬೀಳ್ತಿವಿ ಬೆಳೆಗಳಿಗೆ ನೀರು ಕೊಡಿ

ಬೆಳೆದು ನಿಂತಿರುವ ಬೆಳೆಗಳಿಗೆ ನೀರು ಸಿಗದೇ ಹೋದರೆ ಸಾವಿರಾರು ಅನ್ನದಾತರೆಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ದಯಮಾಡಿ ಸರ್ಕಾರಕ್ಕೆ ಕಾಲಿಗೆ ಬೀಳ್ತಿವಿ ಬೆಳೆಗಳಿಗೆ ನೀರು ಕೊಡಿ ಎಂದು ಪ್ರತಿಭಟನೆಯಲ್ಲಿದ್ದ ರೈತರು ಸರ್ಕಾರಕ್ಕೆ ಮನವಿ ಮಾಡಿದರು.

ನಾರಾಯಣಪುರ ಎಡದಂಡೆ ಮತ್ತು ಬಲದಂಡೆ ಕಾಲುವೆಗೆ ಏ.15 ರವರೆಗೆ ನೀರು ಹರಿಸಬೇಕು. ಇಲ್ಲದೆ ಹೋದರೆ ರೈತರ ಬದುಕು ಬೀದಿಗೆ ಬೀಳಲಿದೆ. ಇದರಿಂದ ರೈತರ ಶಾಪ ನಿಮಗೆ ತಟ್ಟಲಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಕೇವಲ ಕಥೆಗಳನ್ನು ಹೇಳಿ ಅನ್ನದಾತರನ್ನು ಯಾಮಾರಿಸಬೇಡಿ. ಕಾಲುವೆಗೆ ನೀರು ಹರಿಸಿ ರೈತರ ಜೀವ ಉಳಿಸಿ ಎಂದು ನಮ್ಮ ಕರ್ನಾಟಕ ಸೇನೆಯ ರಾಜ್ಯ ಪ್ರಧಾನ ಸಂಚಾಲಕ ಭೀಮಣ್ಣ ಶಖಾಪುರ ರವರು ಮನವಿ ಮಾಡಿದರು.

ರಸ್ತೆ ತಡೆದು ಬೃಹತ್ ಪ್ರತಿಭಟನೆ

ರೈತರು ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಿದರು. ಅಲಲ್ಲಿ ಸರ್ಕಾರಿ ಬಸ್‌ಗಳ ಮೇಲೆ ಕಲ್ಲು ತೂರಾಟಗಳು ನಡೆಯುವ ಸಂಭವವಿತ್ತು ಪೊಲೀಸರು ಇದನ್ನು ತಡೆದರು.

ಈ ಸಂದರ್ಭದಲ್ಲಿ ರಾಜಾ ಹನುಮಪ್ಪ ನಾಯಕ ತಾತ, ಶಿವರಾಜ ಪಾಟೀಲ್ ರದ್ದೆವಾಡಿಗಿ, ಲಲಿತಾ ಅನಪೂರ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ, ಚಂದ್ರಶೇಖರ ಮಾಗನೂರ, ತಿರುಪತಿ ಹತ್ತಿಕಟ್ಟಿಗಿ, ಪರಶುರಾಮ ಕುರಕುಂದಿ, ಗುರು ಕಾಮಾ, ಮಹೇಶಗೌಡ ಸುಬೇದಾರ, ಭೀಮು ನಾಯಕ್, ರಾಜುಗೌಡ ಉಕ್ಕಿನಾಳ, ದೇವಿಂದ್ರಪ್ಪ ಕೊನೇರ, ಮಲ್ಲಿಕಾರ್ಜುನ ಕಂದಕೂರ, ರಂಗಣ್ಣ ಚಿರ್ಲೆ ಸೆÃರಿದಂತೆ ರೈತರು, ಅನೇಕರು ಇದ್ದರು.

 

About the Author

admin

Administrator

Visit Website View All Posts

Spread the love

Post navigation

Previous: ಸರ್ಕಾರ ನೀರು ಕೊಟ್ಟಾಗ ಸರಿಯಾಗಿ ಬಳಕೆ ಮಾಡಿಕೊಳ್ಳಿ
Next: HDK ಭೇಟಿಯಾದ ಟಿ.ಬಿ. ಜಯಚಂದ್ರ

Views:

15

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.