ಬೆಂಗಳೂರು: ಕಾಂತರಾ ಚಿತ್ರದಲ್ಲಿ ನಟಿಸಿರುವ ಸಪ್ತಮಿ ಗೌಡ ಅವರು, ಕಾಂತಾರ ಚಿತ್ರದ ಮೂಲಕ ಇಡೀ ದೇಶದಾದ್ಯಂತ ಹೆಸರುಗಳಿಸಿರುವ ಅವರು ಮತ್ತೆ ಇದೀಗ ‘ದಿ ರೈಸ್ ಆಫ್ ಅಶೋಕ’ಸಿನಿಮಾದಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ
ಹೌದು, ಕಾಂತರಾ ಸಿನಿಮಾದ ಮೂಲಕ ಹೆಚ್ಚು ಹೆಸರು ಮಾಡಿದ ಸಪ್ತಮಿ ಗೌಡ ಅವರು ಇದೀಗ ‘ದಿ ರೈಸ್ ಆಫ್ ಅಶೋಕ’ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈ ಸಿನಿಮಾದಲ್ಲಿ ಸಪ್ತಮಿ ಗೌಡ ಅವರದ್ದು ಹಳ್ಳಿ ಹುಡುಗಿಯ ಪಾತ್ರವಾಗಿದ್ದು ಲಂಗ ದಾವಣಿ ಹಾಕಿಕೊಂಡು ಹಳ್ಳಿ ಸೊಬಗಿನಲ್ಲಿ ಮಿಂಚುತ್ತಿದ್ದಾರೆ.
ಇನ್ನು ಚನ್ನಪಟ್ಟಣದಲ್ಲಿ ‘ದಿ ರೈಸ್ ಆಫ್ ಅಶೋಕ’ ಸಿನಿಮಾದ ಶೂಟ್ ಮಾಡಲಾಗುತ್ತಿದೆ. ಈ ಚಿತ್ರಕ್ಕೆ ನೀನಾಸಂ ಸತೀಶ್ ಹೀರೋ. ಸಿನಿಮಾ ಬಗ್ಗೆ ಮಾತನಾಡಿರುವ ನಾಯಕಿ ಸಪ್ತಮಿ ಗೌಡ, ‘ನನ್ನದು ಹೂ ಮಾರುವ ಹಳ್ಳಿ ಹುಡುಗಿಯ ಪಾತ್ರ. ಊರಿನ ಸಮುದಾಯದಲ್ಲಿ ನಡೆಯುವ ಕಥೆ. ನಾನು ನನ್ನ ವೃತ್ತಿ ಜೀವನದಲ್ಲಿ ಹಳ್ಳಿ ಹುಡುಗಿಯ ಪಾತ್ರಗಳನ್ನೇ ಜಾಸ್ತಿ ಮಾಡಿದ್ದೇನೆ. ನನಗೆ ಗ್ಲಾಮರ್ ಪಾತ್ರ ಹೆಚ್ಚು ಸಿಕ್ಕಿಲ್ಲ. ಹಳ್ಳಿ ಕಡೆಗಳಲ್ಲಿ ಶೂಟ್ ಮಾಡುತ್ತಿದ್ದೇವೆ. ಹಳ್ಳಿ ವೈಬ್ ಬೇರೆ. ನಾನು ಹಬ್ಬಗಳನ್ನು ಹಳ್ಳಿಗಳಲ್ಲಿ ಮಾಡುತ್ತೇನೆ. ಮತ್ತೆ ಆ ರೀತಿ ಬದುಕೋಕೆ ಆಗಿದೆ ಅನ್ನೋದು ಖುಷಿಯ ವಿಚಾರ’ ಎಂದಿದ್ದಾರೆ ಸಪ್ತಮಿ ಗೌಡ.
