ಬೆಂಗಳೂರು: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ ಅವರು ಒಂದಲ್ಲಾ ಒಂದು ರೀತಿಯಲ್ಲಿ ಬಿಜೆಪಿ ಪಕ್ಷದವರಿಗೆ ಟಾಂಗ ಕೊಡುತ್ತಲೇ ಇರುತ್ತಾರೆ.
ಹೌದು, ಬಿಜೆಪಿ ಶಾಸಕರಿಗೆ ಹಾಗೂ ಬಿಜೆಪಿ ಪಕ್ಷಕ್ಕೆ ಒಂದಲ್ಲ ಒಂದು ರೀತಿಯಾಗಿ ಟೀಕೆಮಾಡುತ್ತಾರೆ ಅದರಂತೆ ಇದೀಗ ಮತ್ತೆ ಬಿಜೆಪಿ ಶಾಸಕರಿಗೆ ಏಕವಚನ ಬಲ್ಲೆ ಉತ್ತರಿಸಿದ್ದಾರೆ.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಬಿಜೆಪಿ ಸಂಸದ ಪಿ.ಸಿ ಮೋಹನ್ ಮತ್ತು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ನಡುವೆ ವಾಗ್ವದ ನಡೆದಿದೆ.
ಕರ್ನಾಟಕ ರಾಜ್ಯದಲ್ಲಿ ಸಿದ್ದರಾಮಯ್ಯ ಸಾಹೇಬರ ಸರ್ಕಾರ ಇರುವುದೇ ಹೊರತಾಗಿ ನಿಮ್ಮಪ್ಪನ ಸರ್ಕಾರ ಅಲ್ಲ ಎಂದು ಏಕವಚನದಲ್ಲಿ ಸಂಸದ ಪಿ ಸಿ ಮೋಹನ್ ಅವರ ವಿರುದ್ಧ ಕಿಧಿಕಾರಿದ್ದಾರೆ.
ಇದರಿಂದ ರೊಚ್ಚಿಗೆದ್ದ ಶಾಸಕ, ಇದೇನ್ ಬಿಜೆಪಿ ಪ್ರೋಗ್ರಾಮ್ ಅಂದುಕೊಂಡಿದ್ದೀರಾ? ಕಾಂಗ್ರೆಸ್ ಸರ್ಕಾರ ಇದೋದು, ಬಿಜೆಪಿ ಗುಣಗಾನ ಮಾಡೋದು ಮುಚ್ಚಬೇಕು ಇಲ್ಲಿ. ಬಾಯಿ ಮುಚ್ಕೊಂಡು ಕೂತ್ಕೊಬೇಕು ಎಂದಿದ್ದಾರೆ. ಇದನ್ನೂ ಓದಿ: ಜನರಿಗೆ ಶುದ್ಧ ಮತ್ತು ಸುರಕ್ಷಿತ ನೀರು ಒದಗಿಸುವುದು ನಮ್ಮ ಆದ್ಯತೆ: ಡಿಸಿಎಂ
ನಮಗೂ ನಮ್ಮ ಪಾರ್ಟಿ ಸಿದ್ಧಾಂತಗಳಿರುತ್ತೆ. ನೀವು ನಿಮ್ಮ ಪಕ್ಷವನ್ನ ಗುಣಗಾನ ಮಾಡಿದ್ರೆ, ನಾವು ನಮ್ಮ ಪಕ್ಷವನ್ನ ಗುಣಗಾನ ಮಾಡಬೇಕಾಗುತ್ತೆ ಅಂತ ವಾರ್ನಿಂಗ್ ಕೊಟ್ಟಿದ್ದಾರೆ.
