ಬೆಂಗಳೂರು: ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾದ ಡಾ. ಸಿ.ಎನ್ ಮಂಜುನಾಥ್ ಅವರು ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಬೆಂಗಳೂರು ಮೈಸೂರು ಎಕ್ಸಪ್ರೆಸ್ ಕಾರಿಡಾರ್ ಅಲ್ಲಿ “ಚನ್ನಪಟ್ಟಣ ಬೊಂಬೆಗಳನ್ನು” ಉತ್ತೇಜಿಸುವ ನಿಟ್ಟಿನಲ್ಲಿ Toys Park ನಿರ್ಮಿಸಿ ಸ್ಥಳೀಯವಾಗಿ ಬೊಂಬೆ ತಯಾರಿಕರಿಗೆ ಮತ್ತು ಪ್ರವಾಸಿಗರಿಗೆ ಅನುವು ಮಾಡಿಕೊಡುವಂತೆ ಮನವಿ ಮಾಡಿದರು.
ಚನ್ನಪಟ್ಟಣವನ್ನು ಬೊಂಬೆಗಳಿಗೆ ಐತಿಹಾಸಿಕ ಹಿನ್ನಲೆಯಿದ್ದು, ಬೊಂಬೆಗಳ ನಾಡು ಎಂದೇ ಪ್ರಸಿದ್ಧವಾಗಿದೆ. ಸಾವಿರಾರು ಕುಟುಂಬಗಳು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬೊಂಬೆ ಉದ್ಯಮದ ಮೇಲೆ ಅವಲಂಬಿತವಾಗಿವೆ, ಬೆಂಗಳೂರು-ಮೈಸೂರು ಎಕ್ಸಪ್ರೆಸ್ ಕಾರಿಡಾರ್ ನಿರ್ಮಾಣದ ನಂತರ ಚನ್ನಪಟ್ಟಣ ನಗರಕ್ಕೆ ಆಗಮಿಸುವ ಪ್ರಯಾಣಿಸುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದಾಗಿ ಈ ಉದ್ಯಮದ ಮೇಲೆ ಅವಲಂಬಿತರಾಗಿರುವವರ ಸ್ಥಿತಿ ಶೋಚನೀಯವಾಗಿದೆ. ಇದನ್ನೂ ಓದಿ: ರನ್ಯಾರಾವ್ ಚಿನ್ನ ಕಳ್ಳಸಾಗಣೆಕೆ ಪ್ರಕರಣ ಸೂಕ್ತ ತನಿಖೆಯಾಗಲಿ: ಲಕ್ಷ್ಮೀ ಹೆಬ್ಬಾಳಕರ್
ಈ ಹಿನ್ನಲೆ ಎಕ್ಸಪ್ರೆಸ್ ಕಾರಿಡಾರ್ ನಲ್ಲಿ ಚನ್ನಪಟ್ಟಣ ಸಮೀಪ Toys Park ನಿರ್ಮಿಸುವುದರಿಂದ ಸ್ಥಳೀಯವಾಗಿ ಬೊಂಬೆ ತಯಾರಿಕೆಯ ಮೇಲೆ ಅವಲಂಬಿತರಾಗಿರುವವರಿಗೆ ವೇದಿಕೆ ಕಲ್ಪಿಸಿದಂತಾಗುತ್ತದೆ ಮತ್ತು ಬೊಂಬೆಗಳ ನಾಡು ಎಂಬ ಚನ್ನಪಟ್ಟಣದ ಹಿರಿಮೆಯನ್ನು ಹೆಚ್ಚಿಸದಂತಾಗುತ್ತದೆ ಎಂದರು.
