ದುಬೈ: ಭಾನುವಾರ (ಮಾರ್ಚ್ 9) ರಂದು ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಟೀಮ್ ಇಂಡಿಯಾ ಗೆದ್ದು ಬೀರಿದೆ.
ಕಿವೀಸ್ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ 2025ರ ಚಾಂಪಿಯನ್ಸ್ ಟ್ರೋಫಿ ತನ್ನದಾಗಿಸಿಕೊಂಡಿದೆ. ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
250ರ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ, ಕ್ಯಾಪ್ಟನ್ ರೋಹಿತ್ ಶರ್ಮಾ 83 ಬಾಲ್ ಗೆ 76 ರನ್, ಶುಭಮನ್ ಗಿಲ್ 50 ಬಾಲ್ ಗೆ 31 ರನ್ ಗಳಿಸಿ ಉತ್ತಮ ಆರಂಭ ತಂದುಕೊಟ್ಟರು. ಆದರೆ ಹೆಚ್ಚು ನಿರೀಕ್ಷೆ ಇಟ್ಟಿದ್ದ ವಿರಾಟ್ ಕೊಹ್ಲಿ ಅವರು, 2 ಬಾಲ್ ಗೆ ಕೇವಲ 1 ರನ್ ಗಳಿಸಿ ಪೆವಿಲಿಯನ್ ಸೇರಿದರು. ಇದನ್ನೂ ಓದಿ: ಮತ್ತೆ ಎರಡು ದಾಖಲೆ ಬರೆದ ವಿರಾಟ್
ಬಳಿಕ ಶ್ರೇಯಸ್ ಅಯ್ಯರ್ 62 ಬಾಲ್ ಗೆ 48 ರನ್, ಅಕ್ಷರ್ ಪಟೇಲ್ 40 ಬಾಲ್ ಗೆ 29 ರನ್, ಕನ್ನಡಿಗ KL ರಾಹುಲ್ 33 ಬಾಲ್ ಗೆ 34 ರನ್ ಗಳಿಸಿದರೆ, ಹಾರ್ದಿಕ್ ಪಾಂಡ್ಯ 18 ಬಾಲ್ ಗೆ 18 ರನ್ ಗಳಿಸಿ ಔಟ್ ಆದರು. ಆ ಬಳಿಕ ಜಡೇಜಾ ಆಗಮಿಸಿ 6 ಬಾಲ್ ಗೆ 9 ರನ್ ಗಳಿಸಿ ಕಿವೀಸ್ ಕೊಟ್ಟ ಟಾರ್ಗೆಟ್ ಅನ್ನು 6 ಬಾಲ್ ಗಳು ಬಾಕಿ ಇರುವಂತೆಯಯೇ ಗೆದ್ದು ಬೀಗಿತು. ಈ ಮೂಲಕ ಕಿವೀಸ್ ಪಡೆಯನ್ನು ಮಣಿಸಿ ಅಜೇಯವಾಗಿ ಚಾಂಪಿಯನ್ಸ್ ಟ್ರೋಫಿಯನ್ನು ಟೀಮ್ ಇಂಡಿಯಾ ಮುಡಿಗೇರಿಸಿಕೊಂಡಿದೆ.
