ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ರಂಗದಲ್ಲಿ ಹೆಣ್ಣು ಮಕ್ಕಳು ಸಾಧನೆಯನ್ನು ಮಾಡುತ್ತಿರುವುದರಿಂದ ಪ್ರತಿ ರಂಗದಲ್ಲಿ ಹೆಣ್ಣು ಮಕ್ಕಳು ಮುಂದುವರಿಯುತ್ತಿದ್ದಾರೆ. ರಾಜಕೀಯ, ಕ್ರೀಡೆ, ಸಿನಿಮಾ, ಕಥೆ, ಕಾದಂಬರಿ ಹೀಗೆ ಹಲವಾರು ರಂಗಗಳಲ್ಲಿ ಮಹಿಳೆಯರು ತಮ್ಮ ಚಾಪನ್ನು ಮೂಡಿಸಿ, ತಮ್ಮದೇ ಆದ ಸ್ವತಂತ್ರ ಜೀವನವನ್ನು ಕಟ್ಟಿಕೊಳ್ಳುತ್ತಿದ್ದಾರೆ.
ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತ ಎನ್ನುವ ಮಾತು ಇತ್ತು. ಆದರೀಗ ಆ ಮಾತು ಸುಳ್ಳು ಮಾಡಿ ಎಲ್ಲಾ ಕ್ಷೇತ್ರದಲ್ಲೂ ತಮ್ಮ ಸಾಧನೆ ಮಾಡಿ ಜಗತ್ತಿನಾದ್ಯಂತ ಮೈಲುಗಲ್ಲನ್ನು ಸ್ಥಾಪಿಸುತ್ತಿದ್ದಾರೆ.
ಇನ್ನು ನಮಗೆ ಸ್ವತಂತ್ರ ಬಂದು ಅದೆಷ್ಟೋ ವರ್ಷಗಳಾಗಿದ್ದರೂ ಕೂಡ ಮಹಿಳೆಯರಿಗೆ ಕೆಲವೊಂದು ಸ್ಥಳಗಳಲ್ಲಿ ಹಾಗೂ ಮಧ್ಯರಾತ್ರಿಗಳಲ್ಲಿ ಓಡಾಡುವಂತಹ ಮಹಿಳೆಯರಿಗೆ ಇನ್ನೂ ಕೂಡ ಸ್ವತಂತ್ರವಿಲ್ಲದಂತಾಗಿದೆ. ಏನೇ ತೊಂದರೆ ಇದ್ದರೂ ಕೂಡ ಮಹಿಳೆಯರು ತಮ್ಮ ಕಷ್ಟ ನಷ್ಟಗಳನ್ನು ಮನದಲ್ಲಿಟ್ಟುಕೊಂಡು ಎಲ್ಲರಂಗದಲ್ಲೂ ಮುಂದೆ ಬರುತ್ತಿರುವುದಂತೂ ಸುಳ್ಳಲ್ಲ.
ಇನ್ನು ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ “ಅಂತರಾಷ್ಟ್ರೀಯ ಮಹಿಳೆಯರ ದಿನ” ವನ್ನ ಆಚರಿಸುತ್ತಾರೆ. ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮಿಸಲಿರದೇ, ಅದು ರಾಷ್ತ್ಟ್ರೀಯ, ಜನಾಂಗೀಯ, ಭಾಷಾವಾರು, ಸಾಂಸ್ಕ್ರತಿಕ, ಆರ್ಥಿಕ ಅಥವಾ ರಾಜಕೀಯ ಕ್ಷೇತ್ರವಾಗಲಿ, ಎಲ್ಲಾದರಲ್ಲು ತಮ್ಮದೆ ಆದ ಛಾಪನ್ನ ಮೂಡಿಸಿದ್ದಾರೆ. ಮಹಿಳೆಯರ ಈ ಪ್ರಗತಿಯನ್ನ ಗುರುತಿಸಿ ಈ ದಿನವನ್ನು ಅವರಿಗೆ ಅರ್ಪಿಸಲಾಗಿದೆ. 1975ರ “ಅಂತರಾಷ್ಟ್ರೀಯ ಮಹಿಳೆಯರ ದಿನ”ದ ಸಮಯದಲ್ಲಿ, ಮಾರ್ಚ್ 8 ರಂದು ಸಂಯುಕ್ತ ರಾಷ್ಟ್ರಗಳು ಮಹಿಳಾ ದಿನವನ್ನ ಆಚರಿಸಲು ಆರಂಭಿಸಿದವು.
ಅಂತರ್ರಾಷ್ಟ್ರೀಯ ಮಹಿಳಾ ದಿನವು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳನ್ನು ಆಚರಿಸಲು ಸಮರ್ಪಿಸಲಾಗಿದೆ. ಮಹಿಳೆಯರಿಗಾಗಿ ಸಾಮೂಹಿಕವಾಗಿ ಸ್ಥಾಪಿತವಾದ ಈ ದಿನವು ಲಿಂಗ ಸಮಾನತೆ ಮತ್ತು ಮಹಿಳಾ ಹಕ್ಕುಗಳ ಮೇಲೆ ಕೇಂದ್ರೀಕರಿಸುತ್ತದೆ. ಮಹಿಳೆಯರು ಮತ್ತು ಪುರುಷರ ಹೋಲಿಕೆ, ಅವರ ಆದಾಯ ಶಿಕ್ಷಣ ಮತ್ತು ಕೆಲಸದ ಸಮಯವನ್ನು ಆಧರಿಸಿದೆ.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಜಾಗತಿಕ ಆಚರಣೆಯು ಮಹಿಳೆಯರು ಎಷ್ಟು ಸಬಲರಾಗಿದ್ದಾರೆ. ಎಂಬುದರ ಪ್ರತಿಬಿಂಬವಾಗಿದೆ. ಈ ದಿನದಂದು ಮಹಿಳೆಯರ ಹಕ್ಕುಗಳನ್ನು ವಿವರಿಸಲಾಗುತ್ತದೆ. ಭಾರತದಲ್ಲಿ ಮಹಿಳಾ ದಿನದ ಬಗ್ಗೆ ವಿಶೇಷ ಉತ್ಸಾಹದ ವಾತಾವರಣವಿದೆ, ಏಕೆಂದರೆ ಇಂದು ಮಹಿಳೆಯರು ಭಾರತದ ಪ್ರತಿಯೊಂದು ಕ್ಷೇತ್ರದಲ್ಲಿ ತಮ್ಮ ಅಸ್ಥಿತ್ವವನ್ನು ಸ್ಥಾಪಿಸಿದ್ದಾರೆ.
