ದುಬೈ: ಭಾರತ Vs ಪಾಕಿಸ್ತಾನ ಪಂದ್ಯದಲ್ಲಿ ನಿನ್ನೆ (ಭಾನುವಾರ ಫೆ. 23) ರಾತ್ರಿ ನಡೆದ ಚಾಂಪಿಯನ್ ಟ್ರೋಫಿ ಪಂದ್ಯಾವಳಿಯಲ್ಲಿ ಬದ್ಧ ವೈರಿಯಾದ ಪಾಕಿಸ್ತಾನವನ್ನು ಹೀನಾಯವಾಗಿ ಭಾರತ ಸೋಲಿಸಿದೆ.
ಹೌದು, ನಿನ್ನೆ ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತದ ಎದುರಾಳಿ ಪಾಕಿಸ್ತಾನವನ್ನು ಭಾರತ ಆಟಗಾರರು ಹೀನಾಯವಾಗಿ ಸೋಲಿಸಿದ್ದಾರೆ.
ಇನ್ನು ಕೊನೆಯ ಕ್ಷಣದವರೆಗೆ ಇಡೀ ದೇಶದ ಜನ ಕಾತುರದಿಂದ ಕಾಯುತ್ತಿದ್ದು, ಮಾಡು ಇಲ್ಲವೇ ಮಡಿ ಎಂಬ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸುವ ಮೂಲಕ ದೇಶಕ್ಕೆ ಟ್ರೋಫಿಯನ್ನು ಗೆದ್ದು ಕೊಟ್ಟಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ಪರ ಮಾಜಿ ಕ್ಯಾಪ್ಟನ್ ಬಾಬರ್ ಆಜಂ ಮತ್ತು ಯುವ ಬ್ಯಾಟರ್ ಇಮಾಮ್-ಉಲ್-ಹಕ್ ಜೋಡಿ ಓಪನಿಂಗ್ ಮಾಡಿತು. ಪಾಕ್ ತಂಡ 49.4 ಓವರ್ನಲ್ಲಿ 241 ರನ್ ಕಲೆ ಹಾಕಿದ್ದು, ಟೀಮ್ ಇಂಡಿಯಾಗೆ ಸಾಧಾರಣ ಟಾರ್ಗೆಟ್ ಕೊಟ್ಟಿತು. ಇದನ್ನೂ ಓದಿ:
ಇನ್ನು ಸಾಧಾರಣ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ಆರಂಭದಲ್ಲೇ ಭರ್ಜರಿ ರನ್ ಕಲೆ ಹಾಕಿತ್ತು. ಆರಂಭಿಕನಾಗಿ ಕಣಕ್ಕಿಳಿದಿದ್ದ ರೋಹಿತ್ ಶರ್ಮಾ 15 ಬಾಲ್ ಗಳಲ್ಲಿ 20 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅದರಂತೆ ಗಿಲ್ 46(52), ವಿರಾಟ್ ಕೊಹ್ಲಿ 100(111), ಶ್ರೇಯಸ್ ಅಯ್ಯರ್ 56(67), ಹಾರ್ದಿಕ್ ಪಾಂಡ್ಯ 8(6) ಅಕ್ಷರ್ ಪಟೇಲ್ 3(4), ಗಳಿಸಿದರು. ಒಟ್ಟಾರೆ ಪಾಕ್ ವಿರುದ್ಧ ಟೀಮ್ ಇಂಡಿಯಾ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಅಮೋಘ ಪ್ರದರ್ಶನ ತೋರಿದೆ.
