ಮೈಸೂರು: ಕನ್ನಡ ಚಿತ್ರರಂಗದ ಸ್ಟಾರ್ ನಟ ಡಾಲಿ ಧನಂಜಯ್ ಅವರು ಡಾ. ಧನ್ಯತಾ ಅವರ ಜೊತೆ ಮೈಸೂರಿನಲ್ಲಿ ಬಹಳ ಅದ್ದೂರಿಯಿಂದ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಡಾಲಿ ಹಾಗೂ ಧನ್ಯತಾ ಮದುವೆಯನ್ನು ಇಡೀ ಕರ್ನಾಟಕದ ಜನತೆ ಹರಸಿ ಹಾರೈಸಿದ್ದಾರೆ. ಆದರೆ ಇದರ ಜೊತೆಯಲ್ಲಿ ಕೆಲವರು ಡಾಲಿ-ಧನ್ಯತಾ ಮದುವೆ ಬಗ್ಗೆ ಲೇವಡಿ ಮಾಡಿದ್ದಾರೆ.
ಹೌದು, ಧನಂಜಯ ಅವರು ಮೈಸೂರಿನಲ್ಲಿ ವಿಭಿನ್ನವಾದ ಸೆಟ್ ಹಾಕಿಸುವ ಮೂಲಕ ಮದುವೆಯಾಗಿದ್ದು, ಈ ಮದುವೆಗೆ ಚಿತ್ರರಂಗದವರು, ರಾಜಕೀಯ ವ್ಯಕ್ತಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ಇನ್ನು ಹಲವರು ಮದುವೆಗೆ ಬಂದು ನವ ವಧು-ವರರನ್ನು ಹರಸಿದ್ದಾರೆ. ಎಲ್ಲಾ ಶಾಸ್ತ್ರಗಳನ್ನು ಸಾಂಪ್ರದಾಯಕವಾಗಿ ಆಚರಿಸುವ ಮೂಲಕ ಮದುವೆಯಾಗಿದ್ದಾರೆ.
ಇನ್ನು ಧನಂಜಯ್ ಮಂತ್ರ ಮಾಂಗಲ್ಯ ಆಗಿಲ್ಲ ಯಾಕೆ ಎಂಬ ಪ್ರಶ್ನೆಯನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಕೇಳುತ್ತಿದ್ದಾರೆ. ಇದಕ್ಕೆ ಸ್ಪಷ್ಟ ಉತ್ತರ ನೀಡಿದ ಧನಂಜಯ ಅವರು, ಎಲ್ಲಾದಕ್ಕೂ ಉತ್ತರ ನೀಡಲು ಸಾಧ್ಯವಿಲ್ಲ. ಹಿರಿಯರ ಕೆಲವು ನಂಬಿಕೆಗಳಿಗೆ ನಾವು ತಲೆಬಾಗಬೇಕಾಗುತ್ತದೆ ಹಾಗಾಗಿ ಇದರ ಬಗ್ಗೆ ಹೆಚ್ಚು ಚರ್ಚಿಸಲು ಅನಗತೆಯೆಂದು ಸ್ಪಷ್ಟ ಮಾಹಿತಿಯನ್ನು ನೀಡಿದ್ದಾರೆ. ಇದನ್ನೂ ಓದಿ: ಹಸೆಮಣೆ ಏರಲು ಸಜ್ಜಾದ ಡಾಲಿ
ಸ್ಯಾಂಡಲ್ ವುಡ್ ಸ್ಟಾರ್ ನಟ ಡಾಲಿ ಧನಂಜಯ್ ಡಾಕ್ಟರ್ ಧನ್ಯತಾ ಜೊತೆ ಮೈಸೂರಿನಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಾಲಿ ಮದುವೆಯನ್ನು ಹಲವರು ಹೊಗಳುತ್ತಿದ್ದರೆ ಇನ್ನೂ ಕೆಲವರು ಲೇವಡಿ ಮಾಡಿದ್ದಾರೆ. ‘‘ಬುದ್ಧ, ಬಸವ ಅಂದುಕೊಂಡಿದ್ದ ಡಾಲಿ, ಸಾಂಪ್ರದಾಯಿಕ ಆಚರಣೆಗಳ ಮೂಲಕ ಮದುವೆ ಆಗಿದ್ದಾರೆ. ಅಷ್ಟೆಲ್ಲ ಮಾತನಾಡುತ್ತಿದ್ದ ಧನಂಜಯ ಯಾಕೆ ಮಂತ್ರ ಮಾಂಗಲ್ಯ ಆಗಿಲ್ಲ? ಯಾಕೆ ಸಾಂಪ್ರದಾಯದ ಮೊರೆ ಹೋಗಿದ್ದು..’’ ಅನ್ನೋ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ.
ಹಿರಿಯರಿಗೆ ಕೆಲವು ನಂಬಿಕೆಗಳಿಂದ ಖುಷಿ ಸಿಗುತ್ತೆ ಅಂತಾದರೆ ಅದನ್ನು ಪಾಲಿಸುವುದು ತಪ್ಪು ಅಂತಾ ನನಗೆ ಅನಿಸಿಲ್ಲ. ಎಲ್ಲದಕ್ಕೂ ಉತ್ತರ ಕೊಡಲು ಬರಲ್ಲ. ಆದರೆ ಆಸ್ತಿಕತೆ ಮತ್ತು ನಾಸ್ತಿಕತೆ ಬಗ್ಗೆ ಮಾತನಾಡುತ್ತೇನೆ. ಕಾಯುವಂತಹ ನಂಬಿಕೆಗಳು ಬೇರೆ. ಮೂಢನಂಬಿಕೆಗಳು ಬೇರೆ. ಆಚರಣೆ ಅಂತಾ ಬಂದಾಗ ನಮ್ಮ ಸಮಾಜದಲ್ಲಿ ತುಂಬಾ ತರಹದ ಆಚರಣೆಗಳಿವೆ.
ನಾನು ವಿಜ್ಞಾನ ನಂಬುತ್ತೇನೆ, ನನ್ನ ಸೈನ್ಸ್ ನನಗೆ ಗೊತ್ತು. ನನ್ನ ಜೀವನದ ಕತೆಯೊಂದನ್ನು ನಿಮಗೆ ಹೇಳುತ್ತೇನೆ. ನನ್ನ ತಾಯಿಗೆ ಒಂದು ಆಪರೇಷನ್ ನಡೆದಿತ್ತು. ಸೈನ್ಸ್ ಪ್ರಕಾರ ಅದೊಂದು ಸಣ್ಣ ಶಸ್ತ್ರಚಿಕಿತ್ಸೆ ಅಷ್ಟೇ. ಆದರೆ, ನನ್ನ ತಾಯಿ ಆಕೆ ನಂಬುವ ಜೇನುಕಲ್ಲ ಸಿದ್ದಪ್ಪನನ್ನು ಆ ಅವಧಿಯಲ್ಲಿ ಸ್ಮರಿಸುತ್ತಿದ್ದರು. ಆಪರೇಷನ್ ಥಿಯೇಟರ್ಗೆ ಹೋಗುವ ಸಂದರ್ಭದಲ್ಲಿ ಜೇನುಕಲ್ಲ ಸಿದ್ದಪ್ಪ ಎಂದು ಜಪಿಸುತ್ತಿದ್ದರು. ಅದು ಅವರ ನಂಬಿಕೆ. ಅದೊಂದು ಶಕ್ತಿ ಎಂದರು.
ಸಮಾಜದಲ್ಲಿ ಸಾವಿರಾರು ಪದ್ಧತಿಗಳಿವೆ, ಅವರವರ ಪದ್ಧತಿ ಪ್ರಕಾರ ಅವರು ಆಚರಿಸುತ್ತಾರೆ. ನಮ್ಮ ಪದ್ಧತಿ ಪ್ರಕಾರ ನಾವು ಆಚರಿಸಿದ್ದೇವೆ ಎಂದು ಹೇಳಿದ್ದಾರೆ.
