ಬೆಂಗಳೂರು: ಇಂಡಿಯನ್ ಆಯಿಲ್ ಕಾರ್ಪೊರೇಶನ್ ವತಿಯಿಂದ ಇಂದು (ಶುಕ್ರವಾರ ಫೆ.14) ರಂದು ಮದರ್ ಟೇಕ್ಲಾ ಆಡಿಟೋರಿಯಂ ನಲ್ಲಿ ಆಯೋಜಿಸಿದ್ದ ಸಕ್ಷಮ್, ಸಂರಕ್ಷಣಾ ಕ್ಷಮತಾ ಮಹೋತ್ಸವ ಕಾರ್ಯಕ್ರಮವನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಚಿವರಾದ ಕೆಹೆಚ್ .ಮುನಿಯಪ್ಪ ನವರು ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂಧನ ಮತ್ತು ಗ್ಯಾಸ್ ಎಂಬ ಮೂಲಭೂತ ಸೌಕರ್ಯಗಳು ನಮಗೆ ನೈಸರ್ಗಿಕವಾಗಿ ದೊರೆಯುವ ಇಂಧನ ಮೂಲಗಳಾಗಿದ್ದು ಇವುಗಳನ್ನು ನಾವು ಇತರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದು ಇವಗಳನ್ನು ನಾವು ಮಿತವಾಗಿ ಮತ್ತು ಸಮರ್ಪಕವಾಗಿ ಬಳಸಬೇಕಾಗುತ್ತದೆ.
ಈ ಹಿಂದೆ ನಾನು ಕೇಂದ್ರದಲ್ಲಿ ಸಚಿವನಿದ್ದಾಗ ನಾರ್ವೆ ದೇಶಕ್ಕೆ ಬೇಟಿ ನೀಡಿ ಅಲ್ಲಿ ಉತ್ಪಾದನೆ ಮಾಡುವ ಇಂಧನಗಳ ಕುರಿತು ಪರಿಶೀಲನೆ ನಡೆಸಿದ್ದೆ ಅಲ್ಲಿನ ಸರ್ಕಾರಗಳು ಬಹಳ ಗುಣಮಟ್ಟದ ಇಂಧನಗಳನ್ನು ಉತ್ಪಾದನೆ ಮಾಡುತ್ತಾರೆ ಅಲ್ಲಿ ಹೆಚ್ಚು ಉತ್ಪಾದನೆ ಇದ್ದು ನೌಕರರ ಸಮಸ್ಯಗಳು ಹೆಚ್ಚಾಗಿವೆ. ಇದನ್ನೂ ಓದಿ: ಮೆಟ್ರೋ ದರ ಏರಿಕೆಯ ಕುರಿತು ಬಿಎಮ್ಆರ್‌ಸಿಎಲ್‌ಎಂಡಿ ಹೇಳಿದ್ದೇನು?
ನಮ್ಮ ದೇಶದಲ್ಲಿ ಇಂಧನದ ಮೂಲಗಳ ಕೊರೆತೆಯಿದ್ದು ನಾವು ಇತರೆ ದೇಶಗಳಿಂದ ಆಮದು ಮಾಡಿಕೊಂಡಾಗ ನಾವು ಬೇರೆ ದೇಶಗಳಿಗೆ ಹೆಚ್ವಿನ ಲಾಂಭಂಶವನ್ನು ಒದಗಿಸುತ್ತೇವೆ. ನಮ್ಮ ದಿನಬಳಕೆ ಮೂಲಭೂತ ಇಂಧನ ಮೂಲಗಳಾದ ಗ್ಯಾಸ್,ಪೆಟ್ರೋಲ್ ಇಂಧನ ಮೂಲಗಳನ್ನು ನಾವು ಮಿತವಾಗಿ ಬಳಸಬೇಕು ಮತ್ತು ಅವುಗಳನ್ನು ಪೋಲು ಮಾಡಬಾರದು ಇವು ನೈಸರ್ಗಿಕವಾಗಿ ದೊರೆಯುವ ಮೂಲಗಳಾಗುದ್ದು ಇವುಗಳ ಉಳಿಕೆಗೆ ಎಲ್ಲಾ ಕುಟುಂಬದ ಗೃಹಣೀಯರು ಸಹಕರಿಸಬೇಕು ಎಂದರು.
