ಬೆಂಗಳೂರು: ಜೀ ಕನ್ನಡದ ಸರಿಗಮಪ ಕಾರ್ಯಕ್ರಮದ ಮೂಲಕ ಕರ್ನಾಟಕದ ಮನೆ ಮಾತಾಗಿದ್ದ ಗಾಯಕಿ ಮಂಜಮ್ಮ ಅನಾರೋಗ್ಯದಿಂದ ತಮ್ಮ ಕೊನೆ ಉಸಿಳೆದಿದ್ದಾರೆ
ತನ್ನ ಮಧುರ ಕಂಠದ ಮೂಲಕ ವೀಕ್ಷಕರ ಮನ ಗೆದಿದ್ದ ಮಂಜಮ್ಮ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮಂಜಮ್ಮ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ( ಸೋಮವಾರ ಜ. 27) ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ:ಎಲ್ಲಿಯಾದರೂ ದೇವದಾಸಿ ಪದ್ಧತಿ ಕಂಡರೆ SP-DC ವಿರುದ್ಧ ಮುಲಾಜಿಲ್ಲದೆ ಕ್ರಮ: ಸಎಂ
ಸರಿಗಮಪ ಸೀಸನ್ 17ರಲ್ಲಿ ಭಾಗಿಯಾಗುವ ಮುನ್ನ ವಿಶೇಷ ಚೇತನ ಗಾಯಕಿಯರಾದ ಮಂಜಮ್ಮ ಮತ್ತು ರತ್ನಮ್ಮ ದೇವಸ್ಥಾನದ ಮುಂದೆ ಹಾಡುತ್ತಿದ್ದರು. ಮಂಜಮ್ಮ ಮತ್ತು ರತ್ನಮ್ಮ ಕಂಠಕ್ಕೆ ಮನಸೋತ ಜೀ ಕನ್ನಡ ತಮ್ಮ ಸರಿಗಮಪ ವೇದಿಕೆಗೆ ಇವರನ್ನು ಕರೆತಂದಿತ್ತು. ಇನ್ನು ಮಂಜಮ್ಮ ಮತ್ತು ರತ್ನಮ್ಮ ಇಬ್ಬರಿಗೂ ಹುಟ್ಟಿನಿಂದಲೇ ಕಣ್ಣು ಕಾಣಿಸುವುದಿಲ್ಲ.
