ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಅದೆಷ್ಟೋ ರಾಜ ಮನೆತನಗಳಿವೆ. ರಾಜರ ಅರಮನೆಗಳಿವೆ ಈ ರಾಜರ ಅರಮನೆಗಳನ್ನು ಈಗ ಪ್ರವಾಸಿ ಸ್ಥಳಗಳನ್ನಾಗಿ ಮಾಡಲಾಗಿದ್ದು, ಇದೀಗ ಈ ಅರಮನೆಯ ಮೈದಾನ ಬಳಕೆಗೆ ಸರಕಾರ ಸುಗ್ರೀವಾಜ್ಞೆ ಗೆ ಮುಂದಾಗಿದೆ.
ಹೌದು, ಮೈಸೂರು ರಾಜ ಮನೆತನ ಮತ್ತು ರಾಜ್ಯ ಸರ್ಕಾರದ ನಡುವಿನ ಜಟಾಪಟಿ ಈಗಾಗಲೇ ನಡೆಯುತ್ತಿದ್ದು, ಮತ್ತೆ ಇದೀಗ ಮುಂದುವರೆದಿದೆ. ಬೆಂಗಳೂರು ನಗರದಲ್ಲಿರುವ ಅರಮನೆ ಆಸ್ತಿ ವಿಚಾರಕ್ಕಾಗಿ ಇದೀಗ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನಿಸಿದೆ.
ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆಸಿದ್ದು, ನಾವು ದ್ವೇಷ ರಾಜಕಾರಣ ಮಾಡುತ್ತಿಲ್ಲ. ಜನರ ಒಡತಿಗಾಗಿ ರಾಜಕಾರಣ ಮಾಡುತ್ತಿದ್ದೇವೆ. ಜನರ ಒಳತಿಗಾಗಿಯೇ ನಾವು ಎಲ್ಲಾ ಯೋಜನೆಗಳನ್ನು ಜಾರಿ ಮಾಡುವುದರ ಜೊತೆಗೆ ರಾಜ್ಯದ ಹಿತಕ್ಕಾಗಿ ನಾವು ರಾಜಕೀಯ ಮಾಡುತಿದ್ದೇವೆಯೇ ಹೊರತಾಗಿ ದ್ವೇಷ ರಾಜಕಾರಣ ಮಾಡಲು ನಾವು ಅಧಿಕಾರಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಷ್ಟ್ರೀಯ ಮತದಾರರ ದಿನಾಚರಣೆ
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 3014 ಕೋಟಿ ರೂ. ಅಂದರೆ ಒಂದು ಎಕರೆಗೆ 200 ಕೋಟಿಗೂ ಹೆಚ್ಚಾಯಿತು. ಇಷ್ಟು ದರ ಬೆಂಗಳೂರಿನಲ್ಲಿ ಎಲ್ಲಿದೆ? ಜನರ ಮೇಲೆ ಏನು ಪರಿಣಾಮ ಬೀರುತ್ತೆ? ಎಂದರು.
ಸರ್ಕಾರಕ್ಕೆ ಹೊರೆ ಆಗಬಾರದು ಅಂತ ನಾವು ರಸ್ತೆ ಅಗಲೀಕರಣ ಮಾಡುತ್ತಿರುವುದು ಅಲ್ವಾ. ಟಿಡಿಆರ್ ಸರ್ಕಾರ ಕೊಡುವುದಕ್ಕೆ ಆಗದಿದ್ದರೆ ಪ್ರಾಜೆಕ್ಟ್ ಮಾಡುತ್ತೇವೆ ಅಂತ ಹೇಳಿದ್ದೀವಿ. ಮುಖ್ಯ ವಿಚಾರ ಇನ್ನೂ ಇತ್ಯರ್ಥ ಆಗಿಲ್ಲ. ಹೈಕೋರ್ಟ್ನಲ್ಲಿ ನಮ್ಮ ಪರ ಆಗಿದೆ. ಈಗ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ರಾಜ್ಯದ ಅಭಿವೃದ್ಧಿಗೆ ತೊಂದರೆ ಆಗಬಾರದು ಎಂದಿದ್ದಾರೆ.
