Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಲಾಯರ್ ಜಗದೀಶ್ ಮೇಲೆ ಭೀಕರ ಹಲ್ಲೆ
  • Bangalore
  • Cinema
  • Crime
  • State

ಲಾಯರ್ ಜಗದೀಶ್ ಮೇಲೆ ಭೀಕರ ಹಲ್ಲೆ

admin January 25, 2025 1 minute read
Spread the love

ಬೆಂಗಳೂರು: ಕನ್ನಡ ಬಿಗ್ ಬಾಸ್ ಸೀಸನ್ 11ರ ಮಾಜಿ ಸ್ಪರ್ಧೆ ಹಾಗೂ ವಕೀಲ್ ಜಗದೀಶ್ ಅವರು ಒಂದಲ್ಲ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಸುದ್ದಿ ಆಗುತ್ತದೆ.

ಲಾಯರ್ ಜಗದೀಶ್ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಒಂದಲ್ಲ ಒಂದು ರೀತಿ ಸದ್ದು ಮಾಡುವುದರ ಜೊತೆಗೆ ತೊಂದರೆಯನ್ನು ಅನುಭವಿಸುತ್ತಿದ್ದಾರೆ.

ಕಳೆದ ರಾತ್ರಿ (ಶುಕ್ರವಾರ ಜ. 24) ರಂದು ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಮನೆ ಮೇಲೆ ಅಟ್ಯಾಕ್ ಆಗಿದ್ದು, ಅಟ್ಯಾಕ್ ನಲ್ಲಿ ಸುಮಾರು 100 ರಿಂದ 150 ಜನ ಸೇರಿಕೊಂಡು ಜಗದೀಶ್ ಹಾಗೂ ಅವರ ಮಗನ ಮೇಲೆ ಹಲ್ಲೆ ಮಾಡುವುದರ ಜೊತೆಗೆ ಜಗದೀಶ್ ಅವರ ಕಾರನ್ನು ಸಹ ನುಜ್ಜು ಗುಜ್ಜು ಮಾಡಿದ್ದಾರೆ.

ಜಗದೀಶ್ ದರ್ಶನ್ ಅವರನ್ನು ಏಕವಚನದಲ್ಲಿ ಮಾತನಾಡಿಸುತ್ತಾ, ಅವರ ಅಭಿಮಾನಿಗಳನ್ನು ಕೆರಳಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂಬುವುದು ಎಲ್ಲರಿಗೂ ಗೋತ್ತಿರುವ ಸಂಗತಿ. ಇದರಿಂದ ಅನೇಕರು ಪ್ರಚೋದನೆಗೊಳ್ಳುತ್ತಿದ್ದು, ಅವರ ಮೇಲೆ ದಾಳಿ ಮಾಡುತ್ತಿದ್ದಾರೆ. ಇದನ್ನೂ ಓದಿ: ಮಾನವೀಯತೆ ತೋರಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಜಗದೀಶ್ ಅವರ ಮೂಗು ಮತ್ತು ತುಟಿಗಳಿಂದ ರಕ್ತ ಹೊರಬರುವಂತೆ ಜಗಳ ನಡೆದಿದ್ದು, ರಕ್ತ ಸುರಿಯುತ್ತಿರುವಾಗಲೆ ಪೊಲೀಸ್ ರ ಜೀಪಿನಲ್ಲಿ ಕುಳಿತುಕೊಂಡೆ ಜಗದೀಶ್ ಅವರು ಫೇಸ್ಬುಕ್  ಮೂಲಕ ಲೈವಲ್ಲಿಮಾತನಾಡುತ್ತ, ಇವತ್ತು ನನ್ನ ಸ್ಕಾರ್ಪಿಯೊ ಕಾರನ್ನು ಧ್ವಂಸ ಮಾಡಿ ಜೊತೆಯಲ್ಲಿದ್ದ ನನ್ನ ಗನ್ ಮ್ಯಾನ್  ಮತ್ತು ನನ್ನ ಪರಿವಾರದ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಇದೇ ಸಮಯದಲ್ಲಿ ಪೊಲೀಸರು ಬಂದು ನಮ್ಮನ್ನು ಕಾಪಾಡಿದರು.

ಜನರ ನ್ಯಾಯಕ್ಕಾಗಿ ಹಾಗೂ ಜನಪರ ಧ್ವನಿ ಎತ್ತುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ನನ್ನನ್ನು ನನ್ನ ಕುಟುಂಬವನ್ನು ಕೊಲ್ಲಲು ಕೆಲವು ಪುಡಿ ರೌಡಿಗಳು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಸುಮಾರು 100 ರಿಂದ ಹೆಚ್ಚು150 ಜನ ಗಾಂಜಾ, ಮಧ್ಯ ಸೇವಿಸಿ ಕುಡಿದ  ಮತ್ತಿನಲ್ಲಿ ನಮ್ಮ ಮೇಲೆ ಮಾರಣಾಂತಿಕ ದಾಳಿ ಮಾಡಿದ್ದಾರೆ.

ನನ್ನನ್ನು ಕಾಪಾಡಿ ಎಂದು ನಾನು ನಿಮ್ಮ ಹತ್ತಿರ ಗೋಗರಿಯಲ್ಲ, ಬದಲಾಗಿ ನನಗೆ ನನ್ನ ಜೀವ ಹೋದರು ನಾನು ಅದರ ಬಗ್ಗೆ ಯೋಚನೆ ಮಾಡ್ತಾ ಇಲ್ಲ. ಆದರೆ ಸಮಾಜದಲ್ಲಿ ಅನ್ಯಾಯ ಗೆಲ್ಲಬಾರದು. ಜನರ ಪರ ಧ್ವನಿ ಎತ್ತಿರುವ ನನ್ನ ಮೇಲೆ ನನ್ನ ಕುಟುಂಬದ ಮೇಲೆ ಸತತವಾಗಿ ಒಂದಲ್ಲ ಎರಡಲ್ಲ 3 ಬಾರಿ ಹಲ್ಲೆ ನಡೆದಿದೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಏನು ಮಾಡುತ್ತಿದ್ದೀರಿ? ಅನ್ಯಾಯದ ವಿರುದ್ಧ ಧ್ವನಿ ಎತ್ತುವವರ ಸ್ಥಿತಿ ಏನಾಗಿದೆ ಅಂತ ನೋಡ್ತಾ ಇದ್ದೀರಾ? ಕರ್ನಾಟಕ ರಾಜ್ಯ ಟೆರರಿಸ್ಟ್ ರಾಜ್ಯವಾಗಿದೆ ಎಂದು ಹೇಳಿದ್ದಾರೆ.

 

 

About the Author

admin

Administrator

Visit Website View All Posts

Spread the love

Post navigation

Previous: ಮಾನವೀಯತೆ ತೋರಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್
Next: ರಾಷ್ಟ್ರೀಯ ಮತದಾರರ ದಿನಾಚರಣೆ

Views:

11

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.