ಶಹಾಪುರ: ತಾಲೂಕಿನ ಕೆಂಭಾವಿಯ ಪುರಸಭೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಸೇವೆ ಸಲ್ಲಿಸುವತ್ತಿರುವ ಅರುಣ್ ಚವ್ಹಾಣ ಸರ್ಕಾರದ ಅಧೀನ ಕಾರ್ಯದರ್ಶಿಗಳ ನಕಲಿ ಸಹಿ ಮಾಡಿ ಹುದ್ದೆಗೇರಿದ್ದು, ನಕಲಿ ದಾಖಲೆ ಸಲ್ಲಿಸಿ ಕಾನೂನು ಬಾಹಿರವಾಗಿ ಈ ಹುದ್ದೆಯಲ್ಲಿ ಕುಳಿತು ಅರುಣ್ ಚವ್ಹಾಣ ಕಾರ್ಯಬಾರ ಮಾಡುತ್ತಿರುವುದು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.
ಮೇಲ್ನೊಟಕ್ಕೆ ಇದರಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿದೆ. ಈ ಬಗ್ಗೆ ಯಾದಗಿರಿ ನಗರ ಠಾಣೆಯಲ್ಲಿ ಆರೋಪಿತ ನೌಕರನ ವಿರುದ್ಧ ಗುನ್ನೆ ನಂಬರ 18/2024 Section 420, 468 ಅಡಿ ಪ್ರಕರಣ ದಾಖಲಾಗಿದೆ. ಆರೋಪಿತ ನೌಕರ ಅರುಣ್ ಚವ್ಹಾಣ ದಿನಾಂಕ 30.9.2022 ರಲ್ಲಿ ಜಿಲ್ಲಾ ನಗರಾಭಿವೃದ್ದಿ ಕೋಶ ಯಾದಗಿರಿಯಲ್ಲಿ ಪ್ರಥಮ ದರ್ಜೆ ಸಹಾಯಕ ಹುದ್ದೇಗೆ ವರದಿ ಮಾಡಿಕೊಂಡಿದ್ದು, ಇದೀಗ ಸುಳ್ಳು ವರ್ಗಾವಣೆಯನ್ನು ಸೃಷ್ಠಿಸಿಕೊಂಡು ದಿ. 12.12.2023 ರಂದು ಕೆಂಭಾವಿ ಪುರಸಭೆಗೆ ಪ್ರಥಮ ದರ್ಜೆ ಸಹಾಯಕನಾಗಿ ಸೇವೆ ಮಾಡುತ್ತಿದ್ದು, ಆದರೂ ಸಹ ಆರೋಪಿ ನೌಕರ ಪ್ರಸ್ತುತ ಸರ್ಕಾರಿ ಹುದ್ದೆಯಲ್ಲಿರುವುದು ಆಶ್ಚರ್ಯದ ಸಂಗತಿಯಾಗಿದೆ. ಇದನ್ನೂ ಓದಿ: ಬ್ಯಾಂಕ್ ನ ನೂತನ ಅಧ್ಯಕ್ಷರ ಆಯ್ಕೆ
ಈ ಕುರಿತು ಇಲಾಖೆಯ ಗಮನಕ್ಕಿದ್ದರು ಸಹ ಕೈಕಟ್ಟಿ ಕುಳಿತಿದೆ. ಈ ಬಗ್ಗೆ ತನಿಖೆಯಾಗಬೇಕು, ಆರೋಪಿತ ನೌಕರನ ವಿರುದ್ಧ ಕ್ರಮ ಆಗಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ
ಹೈನಾತಿ ನೌಕರ
ಸರ್ಕಾರಕ್ಕೆ ಚಳ್ಳೆ ಹಣ್ಣು ತಿನ್ನಿಸಿ ಪ್ರಸ್ತುತ ಸರ್ಕಾರಿ ಹುದ್ದೆಯಲ್ಲಿರುವ ಆರೋಪಿತ ನೌಕರ ಅರುಣ್ ಚವ್ಹಾಣ ಬಗ್ಗೆ ಈಗಾಗಲೇ ದೂರು ದಾಖಲಾಗಿದೆ ಆದರೂ ಸಹ ಕರ್ತವ್ಯ ನಿರ್ವಹಿಸುತ್ತಿದ್ದು, ಆರೋಪಿ ನೌಕರ ಕರ್ತವ್ಯ ನಿರ್ವಹಿಸಿದ ಸ್ಥಳದಲ್ಲಿ ಸಾಕಷ್ಟು ಭ್ರಷ್ಟಚಾರ ನಡೆಸಿದ ಅನುಮಾನಗಳಿದ್ದು ಇದೆಲ್ಲವೂ ತನಿಖೆ ಆಗಬೇಕು ಎಂದು ನಮ್ಮ ಕರ್ನಾಟಕ ಸೇನೆಯ ತಾಲೂಕ ಅಧ್ಯಕ್ಷರಾದ ಸಿದ್ದು ಪಟ್ಟೇದಾರ ಹೇಳಿದರು.
ಆರೋಪಿತ ನೌಕರನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಜಿಲ್ಲಾಧಿಕಾರಿ ಮತ್ತು ಯೋಜನಾ ನಿರ್ಧೇಶಕ ಜಿಲ್ಲಾ ನಗರಾಭಿವೃದ್ದಿಕೋಶ ಯಾದಗಿರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
