ಬೆಂಗಳೂರು: ಮಾಧ್ಯಮದವರು ಸತ್ಯವನ್ನು ಬರೆಯುತ್ತಿಲ್ಲ. ಈ ವರ್ಷ ನಾನು ಮೀಡಿಯಾ ಸ್ಕೂಲ್ ತೆರೆಯುತ್ತೇನೆಂದು ಡಿ.ಕೆ. ಶಿವಕುಮಾರ್ ನುಡಿದರು.
ಇಂದು ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ೨೦೨೪ನೇ ಸಾಲಿನ ವರ್ಷದ ವ್ಯಕ್ತಿ, ವಿಶೇಷ ಪ್ರಶಸ್ತಿ ಸುವರ್ಣ ಮಹೋತ್ಸವ ಪ್ರಶಸ್ತಿ ಹಾಗೂ ವಾರ್ಷಿಕ ಪ್ರಶಸ್ತಿಗಳ ಸಮಾರಂಭ ಕಾರ್ಯಕ್ರಮವನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ರವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ, ಪತ್ರಿಕಾರಂಗ ಪ್ರಮುಖ ಅಂಗಗಳಾಗಿವೆ. ಇಡೀ ದೇಶದಲ್ಲಿ ಅಸೆಂಬ್ಲಿಗೂ ನ್ಯಾಯಾಂಗಕ್ಕೂ ಮಧ್ಯೆ ಬ್ರಿಡ್ಜ್ನಂತೆ ಕಾರ್ಯ ನಿರ್ವಹಿಸುವವರು ಪತ್ರಿಕಾ ರಂಗದವರು. ಈರ್ವರ ಮಧ್ಯೆ ತಗಲಾಕಿಕೊಂಡಿದೆ. ಪತ್ರಕರ್ತರು ಅತ್ಯಂತ ಶ್ರಮವಹಿಸಿ ಬರೆಯುತ್ತೀರಿ. ಸುಮ್ಮನೇ ಯಾರೋ ಏನೋ ಹೇಳಿದರೆಂದು ಒಂದು ಸ್ಟೋರಿಯನ್ನು ಬರೆದು, ಅವರ ಭವಿಷ್ಯಗಳು ನಾಶವಾಗಬಾರದು.
ಶೃಂಗೇರಿಯಿAದ ನೇರವಾಗಿ ಇಲ್ಲಿಗೆ ಬಂದಿದ್ದೇನೆ. ನಾನು ದೇವಸ್ಥಾನಕ್ಕೆ ಹೋದರೆ ಟೆಂಪಲ್ ರನ್ ಅಂತ ಬಿಂಬಿಸ್ತೀರಿ. ಯಾರೂ ತಮ್ಮ ಧರ್ಮವನ್ನು ಬಿಟ್ಟು ಬದುಕಲ್ಲ. ಎಲ್ಲರಿಗೂ ಅವರ ಧರ್ಮ ಬಹು ಮುಖ್ಯ. ಎಲ್ಲಾ ಜಾತಿಯವರಿಗೂ ಅವರದೇ ಆದ ಧರ್ಮವಿರುತ್ತದೆ. “ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ, ಕರ್ಮ ಹಲವಾದರೂ ನಿಷ್ಠೆ ಒಂದೇ, ದೇವನೊಬ್ಬ ನಾಮ ಹಲವು” ಎಂದು ನುಡಿದರು.
ಈ ಸಂದರ್ಭದಲ್ಲಿ ಸಚಿವ ಚೆಲುವರಾಯಸ್ವಾಮಿ, ಪ್ರೆಸ್ಕ್ಲಬ್ ಅಧ್ಯಕ್ಷ ಆರ್. ಶ್ರೀಧರ್, ಪ್ರಧಾಯ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ, ಉಪಾಧ್ಯಕ್ಷ ಮೋಹನ್ ಕುಮಾರ್ ಬಿ.ಎನ್. ಕಾರ್ಯದರ್ಶಿ ಮಂಜುನಾಥ್ ಜಿ.ವೈ. ಜಂಟಿ ಕಾರ್ಯದರ್ಶಿ ಧರಣೀಶ್ ಬಿ.ಎನ್. ಪ್ರೆಸ್ ಕ್ಲಬ್ ಪದಾಧಿಕಾರಿಗಳು, ಪತ್ರಕರ್ತರು ಹಾಗೂ ಅವರ ಕುಟುಂಬಸ್ಥರು ಭಾಗವಹಿಸಿದ್ದರು.
