ಶಹಾಪುರ: ತಾಲೂಕಿನ ಭೀಮರಾಯನಗುಡಿಯಲ್ಲಿ ಮಸ್ಲಿಂ ಬಾಲಕಿಗೆ ಬಾಲ್ಯ ವಿವಾಹಕ್ಕೆ ಕುಮ್ಮಕ್ಕು ನೀಡಿದ ಪಾಲಕರ ವಿರುದ್ಧ ಹಾಗೂ ಅತ್ಯಾಚಾರ ಎಸಗಿ ಗರ್ಭಧಾರಿಯಾಗಲು ಹೊಣೆಯಾದ ವ್ಯಕ್ತಿಯ ವಿರುದ್ಧ ಭೀಮರಾಯನಗುಡಿಯಲ್ಲಿ ದೂರು ದಾಖಲಾಗಿದೆ.
ತಾಲ್ಲೂಕಿನ ಭೀಮರಾಯನಗುಡಿಯ ಅಬ್ದುಲಭಾಷಾ ಖುರೇಶಿ, ಹುಸೇನ ಭಾಷಾ ಖುರೇಶಿ ಹಾಗೂ ಮದ್ರಿಕಿ ಗ್ರಾಮದ ಜಬೀನಾಬೇಗಂ ಖುರೇಶಿ, ಅಕ್ಬರಸಾಬ್ ಖರೇಶಿ, ರಜೀಯಾಬೇಗಂ ಖುರೇಶಿ ಆರೋಪಿತರು ಆಗಿದ್ದಾರೆ. ಇದನ್ನೂ ಓದಿ: ರಾಜ್ಯದ ಹಿತಕ್ಕಾಗಿ ಹೋರಾಟ: ಡಿಸಿಎಂ
ಏನಿದು ಪ್ರಕರಣ: ತಾಲ್ಲೂಕಿನ ಭೀಮರಾಯನಗುಡಿ ಆರೋಗ್ಯ ಉಪ ಕೇಂದ್ರಕ್ಕೆ ಅಪ್ರಾಪ್ತ ಬಾಲಕಿ ತಾಯಿ ಕಾರ್ಡ್ ಮಾಡಿಸಲು ಹೋದಾಗ ಯುಟಿಸಿ ಪರೀಕ್ಷೆ ಮಾಡಿದಾಗ ಗರ್ಭೀಣಿಯಾಗಿರುವುದು ಧೃಢಪಟ್ಟಿತು. ದಾಖಲೆಗಳನ್ನು ಪರಿಶೀಲಿಸಿದಾಗ ಬಾಲಕಿಯು ಅಪ್ರಾಪ್ತ ವಯಸ್ಕಳು ಎಂಬುವುದು ಗೊತ್ತಾಯಿತು. ವೈದ್ಯರ ವರದಿಯ ಆಧಾರದ ಮೇಲೆ ನಂತರ ಜಿಲ್ಲಾ ಮಕ್ಕಳ ರಕ್ಷಣ ಘಟಕದ ಅಧಿಕಾರಿಗಳು ಗಮನಕ್ಕೆ ತರಲಾಯಿತು ಎಂದು ಶಹಾಪುರ ಅಂಗನವಾಡಿಯ ಮೇಲ್ವಿಚಾರಕಿ ನಿಷಾತ ಅಂಜುಂ ದೂರಿನಲ್ಲಿ ತಿಳಿಸಿದ್ದಾರೆ.
