ಶಹಾಪುರ: ತಾಲೂಕಿನ ಮದ್ರಕಿ ಗ್ರಾಮದ ಹತ್ತಿರವಿರುವ ಸರ್ವೆ ನಂ. ೪೪೨ ರ ೬೨ ಎಕರೆಯಲ್ಲಿ ೪೦ ಎಕರೆ, ಸರ್ವೆ.ನಂ ೩೩೦ ರ ೧೦೦ ಎಕರೆಯಲ್ಲಿ ೧೦ ಎಕರೆ ಒಟ್ಟು ೫೦ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದು. ಕರ್ನಾಟಕ ಅರಣ್ಯ ಕಾಯ್ದೆ ೧೯೬೩ ಸೆಕ್ಷನ್ ೩೩(೨)ರ ಅಡಿಯಲ್ಲಿ ೨೪ ಜನರ ವಿರುದ್ಧ ಪ್ರಕರಣ ದಾಖಲಾಸಿ ಕೊಳ್ಳಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕುಮಾರ ಚವ್ಹಾಣ ತಿಳಿಸಿದ್ದಾರೆ. ಇದನ್ನೂ ಓದಿ: ಪತ್ರಿಕಾ ಕಚೇರಿಗಳಲ್ಲಿ ಇಂಟರ್ನ್ಷಿಪ್ ಯೋಜನೆಗೆ ಅರ್ಜಿ ಆಹ್ವಾನ
ನಂತರ ಅರಣ್ಯ ಭೂಮಿ ತೆರವುಗೊಳಿಸಿ ಇಲಾಖೆಯ ವಶಕ್ಕೆ ತೆಗೆದುಕೊಂಡು ಅಧಿಕಾರಿಗಳಿಂದ ಸಸಿಗಳನ್ನು ನೆಡಲಾಯಿತು. ಸ್ಥಳದಲ್ಲಿ ೮ ಜೆಸಿಬಿಗಳು ಜೋರಾಗಿ ಅಬ್ಬರಿಸಿ, ೪೦ ಕ್ಕೂ ಹೆಚ್ಚು ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ಬೆಳ್ಳಂ ಬೆಳಗ್ಗೆಯೇ ಭರ್ಜರಿ ಕಾರ್ಯಚರಣೆ ನಡೆಸಿ ಫಿಲ್ಡಿಗಿಳಿದಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧಾಕ್ಷಿಣ್ಯವಾಗಿ ಅರಣ್ಯ ಭೂಮಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಜಮೀನುಗಳು ಮೀಸಲು ಅರಣ್ಯದ ಜಮೀನು ಆಗಿವೆ. ಅನಧಿಕೃತವಾಗಿ ಭೂಮಿಯನ್ನು ಒತ್ತುವರಿ ಮಾಡಿರುವುದು ದೃಢಪಟ್ಟಿದ್ದು ಇವರ ವಿರುದ್ಧ ಅರಣ್ಯ ಒತ್ತುವರಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಭೀಮರಾಯನಗುಡಿ ಪಿಎಸ್ಐ ಮಾದೇಶ ಪಾಟೀಲ್, ಡಿಎಸ್ಫ್ ಪ್ರಭಾಕರ, ಆರ್ಎಫ್ ಗುಂಡುಸಿಂಗ್ ಹಾಗೂ ಅರಣ್ಯ ವಲಯದ ಸಿಬ್ಬಂದಿಗಳು ಇದ್ದರು.
