ಗುಂಡ್ಲುಪೇಟೆ: ತಾಲ್ಲೂಕಿನ ಜನಪ್ರಿಯ ಶಾಸಕರು, ಮಾಜಿ ಸಚಿವ ದಿ.ಎಚ್.ಎಸ್ ಮಹ ದೇವಪ್ರಸಾದ್ ಅವರು ಅಗಲಿ ಇಂದಿಗೆ 8 ವರ್ಷಗಳು ಕಳೆದಿರುವ ಹಿನ್ನೆಲೆ ಅವರ ಸ್ವಗ್ರಾಮವಾದ ಹಾಲಹಳ್ಳಿ ಗ್ರಾಮದಲ್ಲಿ ಇಂದು (ಶುಕ್ರವಾರ ಜ. 03) ರಂದು ಸಹಸ್ರಾರು ಅಭಿಮಾನಿಗಳ, ಕಾರ್ಯಕರ್ತರು, ಮುಖಂಡರುಗಳ ಸಮ್ಮುಖದಲ್ಲಿ 8ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.
ತಾಲೂಕಿನ ಹಾಲಹಳ್ಳಿ ಗ್ರಾಮದ ಎಚ್‌ಎನ್ಎಸ್ ಸಮುದಾಯ ಭವನದಲ್ಲಿ ಶುಕ್ರವಾರ ಬೆಳಿಗ್ಗೆ ದಿ.ಮಹದೇವ ಪ್ರಸಾದ್ ಅವರ ಜಮೀನಿನಲ್ಲಿ ಇರುವ ಸಮಾದಿ ಸ್ಥಳವನ್ನು ನಾನ ಬಗೆಯ ಪುಶ್ಪಗಳಿಂದ ವಿಶೇಷವಾಗಿ ಅಲಂಕಾರ ಮಾಡಿ ಅವರ ಭಾವಚಿತ್ರಕ್ಕೆ ಪತ್ನಿ ಡಾ.ಗೀತಾ ಮಹದೇವ ಪ್ರಸಾದ್, ಮಗ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್, ಸೇರಿದಂತೆ ಕುಟುಂಬದ ಸದಸ್ಯರು ಪುಷ್ಪಾರ್ಚನೆ ನೆರವೇರಿಸಿದರು,
ನಂತರ ಸಮುದಾಯ ಭವನದಲ್ಲಿ ದಿ.ಮಹದೇವ ಪ್ರಸಾದ್ ರವರು ನಡೆದುಬಂದ ಹಾದಿಯ ಬಗ್ಗೆ ನುಡಿನಮನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ನಂತರ ಮಧ್ಯಾಹ್ನ 12 ಗಂಟೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ದಿ.ಮಹ ದೇವ ಪ್ರಸಾದ್ ಹಾಗೂ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅಭಿಮಾನಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಕ್ಷೇತ್ರದ ಮಾಜಿ ಸಚಿವರಾದ ಡಾ.ಗೀತಾ ಮಹ ದೇವ ಪ್ರಸಾದ್, ಶಾಸಕ ಎಚ್.ಎಂ. ಗಣೇಶ್ ಪ್ರಸಾದ್, ಪತ್ನಿ ವಿದ್ಯಾ ಗಣೇಶ್, ರೂಪ ಮತ್ತು ಎಚ್.ಎಸ್.ನಂಜುಂಡ ಪ್ರಸಾದ್, ಪ್ರೇಮಾ ಮತ್ತು ಡಾ. ಕೆ. ಎನ್. ಚಂದ್ರಚೂಡ ಸೇರಿದಂತೆ ಕಾಡ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿ.ಪಂ. ಮಾಜಿ ಸದಸ್ಯ ಕೆ.ಎಸ್. ಮಹೇಶ್, ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು, ವಿವಿಧಮಠಾಧೀಶರು, ಹಿರಿಯ ರಾಜಕಾರ ಣಿಗಳು, ಜನಪ್ರತಿ ನಿಧಿಗಳು, ರಾಜಕೀಯ ಕ್ಷೇತ್ರದ ಪ್ರಮುಖರು, ಸ್ತಳೀಯ ಮುಖಂಡರು ಭಾಗಿಯಾಗಿದ್ದರು.
