ಶಹಾಪುರ: ನಗರದಲ್ಲಿರುವ ಭೂಸೇನೆ ನಿಗಮ ಅಧಿಕಾರಿಗಳಿಗೆ ಹೇಳುವವರು ಕೇಳುವವರು ಇಲ್ಲದಂತಾಗಿದ್ದು, ಅಧಿಕಾರಿಗಳ ವಿರುದ್ಧ ಆರೋಪಗಳು ಕೇಳಿ ಬರುತ್ತಿವೆ. ಬೆಳಗ್ಗೆ 10 ಗಂಟೆಗೆ ಸರ್ಕಾರಿ ಕಚೇರಿ ಪ್ರಾರಂಭಿಸಿ, ಸಂಜೆ 5 ಗಂಟೆಗೆ ಕಛೇರಿ ಮುಚ್ಚಬೇಕು ಎಂಬುವುದು ನಿಯಮವಿದೆ. ಆದರೆ ಇಲ್ಲಿ ರಾತ್ರಿ ಹೊತ್ತು ಮಾತ್ರ ಕೆಲಸ ನಡೆಯುತ್ತೆ. ಸರಿಯಾದ ಸಮಯಕ್ಕೆ ಬಾರದೆ, ಇರುವುದರಿಂದ ಅಧಿಕಾರಿಗಳ ಮೇಲೆ ಹಿಡಿತ ಇಲ್ಲದಂತಾಗಿದ್ದು, ಸಿಬ್ಬಂದಿಗಳು ಸಹ ಮನ ಬಂದಂತೆ ಕೆಲಸಕ್ಕೆ ಹಾಜರಾಗುತ್ತಿದ್ದಾರೆ.
ಇನ್ನು ಭೂಸೇನೆ ವ್ಯಾಫ್ತಿಯಲ್ಲಿ ಪೂರ್ಣ ಪ್ರಮಾಣದ ಅನುದಾನ ನೀಡಿದರು ಕಾಮಗಾರಿಗಳು ಕಳಪೆ ಮಟ್ಟದಿಂದ ಮಾಡಿ ಭೂಸೇನ ಅಧಿಕಾರಿಗಳ ಜೊತೆ ಗುತ್ತಿಗೆದಾರರು ಶಾಮೀಲಾಗಿದ್ದಾರೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸ್ಥಳೀಯರಿದ್ದು ಅದೇ ಪ್ರಭಾವದಿಂದ ತಮ್ಮದೇ ಆದ ದರ್ಪದಲ್ಲಿದ್ದಾರೆ. ಎಂದು ಭೂಸೇನಾ ನಿಗಮದ ಕಾರ್ಯ ವೈಖರಿ ಕುರಿತು ಆರೋಪಗಳು ಕೇಳಿ ಬರುತ್ತಿದೆ. ಇದನ್ನೂ ಓದಿ: ಪ್ರಮಾಣಪತ್ರ ವಿತರಣೆ
ಅಧಿಕಾರಿಗಳು ಬಾರದೇ ಇರುವುದರಿಂದ ಕಚೇರಿಯು ಗುರುವಿಲ್ಲದ ಮಠದಂತಾಗಿದ್ದು ಯಾರೊಬ್ಬರು ಹಾಜರಾಗದೇ ಇದ್ದಿದ್ದರಿಂದ ಯಾವುದೇ ಸಾರ್ವಜನಿಕ ಕೆಲಸಕ್ಕೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲಾ. ಇದರಿಂದ ಭೂಸೇನ ನಿಗಮದ ಅಧಿಕಾರಿಗಳಿಗೆ ಲಂಗು ಲಗಾಮು ಇಲ್ಲದಂತಾಗಿದ್ದು. ಇದರಿಂದ ಕಚೇರಿಗೆ ಬಂದವರು ಖಾಲಿ ಕುರ್ಚಿ ನೋಡಿ ಮರಳಿ ವಾಪಸ್ ಹೋಗುವ ಸ್ಥೀತಿ ಇದೆ. ಈ ಹಿಂದೆ ಸಹ ಅಧಿಕಾರಿಗಳ ಕಾರ್ಯವೈಖರಿ ಕುರಿತು ಕೆಲ ಸಂಘಟನೆಗಳು ಪ್ರತಿಭಟಿಸಿದ್ದವು ಮತ್ತು ಪ್ರಶ್ನಿಸುವ ಸಂಘಟನ ಮುಖಂಡರಿಗೆ ಭೂಸೇನಾ ಅಧಿಕಾರಿಗಳು ಉಡಾಫೆ ಉತ್ತರ ನೀಡಿ ಜಾರಿಕೊಳ್ಳುತ್ತಾರೆ ಎನ್ನುವುದು ಕೇಲವರ ಆರೋಪವಾಗಿದೆ. ಇದರಿಂದ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡ ಹೊನ್ನಪ್ಪ ಗಂಗನಾಳ ಆಗ್ರಹಿಸಿದ್ದಾರೆ.
