ಬೆಂಗಳೂರು : ಹೆಚ್ಚಿನ ವರದಕ್ಷಿಣೆ ನೀಡುವಂತೆ ಹೆಂಡತಿಗೆ ಕಿರುಕುಳ ನೀಡುತ್ತಿದ್ದ ಆರೋಪಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಲತೀರ್ ರೆಹಮಾನ್ ವಿರುದ್ಧ ಬಸವನಗುಡಿ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.
ಖಾಸಗಿ ಕಂಪೆನಿ ಉದ್ಯೋಗಿ ಲತೀರ್ ರೆಹಮಾನ್ 2019ರ ಜೂನ್ನಲ್ಲಿ ವೈದ್ಯಯೊಂದಿಗೆ ವಿವಾಹವಾಗಿದ್ದರು. ಮದುವೆ ವೇಳೆ ಆತನಿಗೆ ವರದಕ್ಷಿಣೆ ನೀಡಲಾಗಿದೆ. ಆದರೆ ಆತ ಇನ್ನೂ ಹೆಚ್ಚಿನ ವೆದಕ್ಷಿಣೆ ನೀಡುವಂತೆ ಹೆಂಡತಿಗೆ ಕಿರುಕುಳ ನೀಡುತ್ತಿದ್ದ, ನೀನು ನೋಡಲು ಚೆನ್ನಾಗಿಲ್ಲಾ, ಹೆಚ್ಚಿನ ವರದಕ್ಷಿಣೆಗಾಗಿಯೇ ನಿನ್ನನ್ನು ಮದುವೆಯಾಗಿರುವುದಾಗಿ ಹೇಳಿದ್ದಾನೆ. ಅಲ್ಲದೇ ಹೆಂಡತಿಗೆ ಅಶ್ಲೀಲ ವಿಡಿಯೋ ನೋಡುವಂತೆ ಒತ್ತಾಯಿಸುತ್ತಾನೆ ಎಂದು ಪತ್ನಿ ಆರೋಪ ಮಾಡಿದ್ದಾರೆ.