ಸಾಕ್ಷಿಗೆ ಬೆಳ್ಳಿ; ವಿನೇಶ್, ಅಂಶುಗೆ ಕಂಚು

ಸಾಕ್ಷಿಗೆ ಬೆಳ್ಳಿ; ವಿನೇಶ್, ಅಂಶುಗೆ ಕಂಚು

ನವದೆಹಲಿ, ಫೆ. 22 : ಏಶ್ಯನ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಭಾರತದ ಸಾಕ್ಷಿ ಮಲಿಕ್ ಫೈನಲ್ನಲ್ಲಿ ಎಡವಿ ಬೆಳ್ಳಿಗೆ ಸಮಾಧಾನಪಟ್ಟರು. ವಿನೇಶ್ ಪೋಗಟ್, ಅಂಶು ಮಲಿಕ್ ಕಂಚು ಗೆದ್ದರು. 65 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಸಾಕ್ಷಿ ಮಲಿಕ್ ಫೈನಲ್ನಲ್ಲಿ ಜಪಾನಿನ ನವೋಮಿ ರುಯಿಕೆ ವಿರುದ್ಧ 0-2 ಅಂತರದ ಸೋಲನುಭವಿಸಿ ಚಿನ್ನವನ್ನು ತಪ್ಪಿಸಿಕೊಂಡರು.
ಸೆಮಿಫೈನಲ್ನಲ್ಲಿ ಸಾಕ್ಷಿ ಉಜ್ಬೆಕಿಸ್ಥಾನದ ನಬಿರಾ ಎಸೆನ್ಬೇವಾ ವಿರುದ್ಧ 5-4 ಅಂಕಗಳ ರೋಚಕ ಜಯ ಸಾಧಿಸಿದ್ದರು. 53 ಕೆ.ಜಿ. ವಿಭಾಗದಲ್ಲಿ ವಿನೇಶ್ ಪೋಗಟ್ ವಿಯೆಟ್ನಾಮ್ನ ಥಿ ಲಿ ಕೀ ಅವರನ್ನು 10-0 ಅಂತರದಿಂದ ಪರಾಭವಗೊಳಿಸಿದರು. ಕ್ವಾರ್ಟರ್ ಫೈನಲ್ನಲ್ಲಿ ವಿನೇಶ್ ಅವರನ್ನು ಜಪಾನಿನ ಮಾಯು ಮುಕೈಡಾ ಪರಾಭವಗೊಳಿಸಿದರು.

Related