ಬೆಂಗಳೂರು ಗ್ರಾಮಾಂತರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ: ಮಂಜುನಾಥ್

ಬೆಂಗಳೂರು ಗ್ರಾಮಾಂತರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ: ಮಂಜುನಾಥ್

ಬೆಂಗಳೂರು: ಲೋಕಸಭಾ ಚುನಾವಣೆಗೆ ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿಯಾಗಿರುವ ಡಾ. ಸಿಎನ್ ಮಂಜುನಾಥ್ ಅವರು ಭರ್ಜರಿ ಪ್ರಚಾರವನ್ನು ಕೈಗೊಂಡಿದ್ದಾರೆ.

ಪ್ರಚಾರ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ರಾಜಕೀಯಕ್ಕೆ ಬರುವುದು ಕನಸಿನಲ್ಲೂ ಕೂಡ ಊಹೆ ಮಾಡಿರಲಿಲ್ಲ, ಆದರೆ ರಾಜಕೀಯವೇ ನನ್ನನ್ನು ಎಳೆದುಕೊಂಡು ಬಂದಿದೆ ಎಂದು ಡಿಕೆ ಸಹೋದರರಿಗೆ ಕ್ರಿಕೆಟ್ ನೀಡಿದ್ದಾರೆ.

ವೈದ್ಯಕೀಯ ಕ್ಷೇತ್ರದಲ್ಲಿ ಇದ್ದುಕೊಂಡು ನಾನೀಗಾಗಲೇ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ. ಇನ್ನೂ ಕೂಡ ನನ್ನ ಕೈಯಿಂದ ಅಭಿವೃದ್ಧಿ ಕೆಲಸ ಮಾಡಬೇಕೆಂಬುವುದು ಆ ದೇವರ ಆಸೆಯಾಗಿದೆ, ಹಾಗಾಗಿ ನನ್ನನ್ನು ರಾಜಕೀಯಕ್ಕೆ ಬರಮಾಡಿಕೊಂಡಿದೆ ಎಂದು ಹೇಳಿದರು.

ವೈಯಕ್ತಿಕ ಟೀಕೆ ಬದಲಿಗೆ ಅಭಿವೃದ್ಧಿ ಬಗ್ಗೆ ಮಾತನಾಡಿ. ರಾಜ್ಯದ ಎಲ್ಲ 28 ಕ್ಷೇತ್ರಗಳನ್ನೂ ಗೆಲ್ಲಿಸಬೇಕು. ಬೆಂಗಳೂರು ಗ್ರಾಮಾಂತರದಲ್ಲಿ ಬದಲಾವಣೆಯ ಗಾಳಿಯನ್ನ ಜನ ಬಯಸುತ್ತಿದ್ದಾರೆ. ಅನುದಾನ ಮುಖ್ಯವಲ್ಲ, ಅನುಷ್ಠಾನ ಮುಖ್ಯ. ರೈಲಿನ‌ ಎರಡು ಬದಿ ರೈತರು, ಕೂಲಿ ಕಾರ್ಮಿಕರ ಕಷ್ಟ ಕಾಣುತ್ತೆ. ರೈಲಿನಲ್ಲಿ ಪ್ರಯಾಣ ಮಾಡುವಾಗಲೇ ಜನರ ಸಂಕಷ್ಟ ಗಾಂಧೀಜಿಯವರಿಗೆ ಗೊತ್ತಾಗಿದ್ದು. ಟೀಕೆ ಸಾಯುತ್ತವೆ, ಸಾಧನೆಗಳು ಜೀವಂತವಾಗಿರುತ್ತದೆ ಎಂದು ನಯವಾಗಿಯೇ ಚಾಟಿ ಬೀಸಿದರು.

Related